ಸ್ವೀಡಿಷ್ ಸಾಫ್ಟ್ವೇರ್ ಕಂಪನಿ ಟ್ರೂಕಾಲರ್ ತನ್ನ ಹೊಸ ಮುಖ್ಯ ಕಾರ್ಯನಿರ್ವಾಹಕರಾಗಿ ಪ್ರಸ್ತುತ ಉತ್ಪನ್ನಗಳ ಮುಖ್ಯಸ್ಥ ರಿಷಿತ್ ಜುನ್ಜುನ್ವಾಲಾ ಅವರನ್ನು ನೇಮಕ ಮಾಡಿದೆ ಎಂದು ಬುಧವಾರ ತಿಳಿಸಿದೆ.
ಘೋರ ದುರಂತ: ಎತ್ತಿನಹೊಳೆ ಕಾಮಗಾರಿ ಗುಂಡಿಗೆ ಬಿದ್ದು ಇಬ್ಬರು ಮಕ್ಕಳ ದುರ್ಮರಣ!
ಟ್ರೂಕಾಲರ್ ಸಂಸ್ಥೆಗೆ ಬೆಂಗಳೂರು ಮೂಲದ ರಿಷಿತ್ ಜುಂಜುನವಾಲ ಸಿಇಒ ಆಗಿ ನೇಮಕವಾಗಿದ್ದಾರೆ.
ರಿಷಿತ್ ಜುಂಜುನವಾಲ ಜನವರಿ 9ರಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ಸದ್ಯ ಅವರು ಟ್ರೂಕಾಲರ್ನಲ್ಲಿ ಚೀಫ್ ಪ್ರಾಡಕ್ಟ್ ಆಫೀಸರ್ ಮತ್ತು ಎಂಡಿಯಾಗಿದ್ದಾರೆ
ಟ್ರೂಕಾಲರ್ನ ಸಹ-ಸಂಸ್ಥಾಪಕರಾದ ಮತ್ತು ಈಗ ಚೀಫ್ ಸ್ಟ್ರಾಟಿಜಿ ಆಫೀಸರ್ ಆಗಿರುವ ನಾಮಿ ಜಾರಿಂಘಲಂ ಅವರೂ ಕೂಡ ತಮ್ಮ ಸ್ಥಾನದಿಂದ ವಿಮುಕ್ತರಾಗುತ್ತಿದ್ದಾರೆ.
ಅಲನ್ ಮಾಮೇದಿ ಮತ್ತು ನಾಮಿ ಝಾರಿಂಗಲಂ ಅವರಿಬ್ಬರೂ ಜನವರಿ 9ರ ಬಳಿಕ 2025ರ ಜೂನ್ 30ರವರೆಗೆ ಕಂಪನಿಯ ಅಡ್ವೈಸರ್ಗಳಾಗಿ ಮುಂದುವರಿಯಲಿದ್ದಾರೆ ಎಂದು ಟ್ರೂಕಾಲರ್ ಸಂಸ್ಥೆ ಹೇಳಿಕೆ ನೀಡಿದೆ.
1977ರಲ್ಲಿ ಜನಿಸಿದ 47 ವರ್ಷದ ರಿಷಿತ್ ಜುಂಜುನವಾಲ ಬೆಂಗಳೂರು ಹುಡುಗ. ಓದಿದ್ದೆಲ್ಲಾ ಸಿಲಿಕಾನ್ ಸಿಟಿಯಲ್ಲೇ. ಮಲ್ಯ ಅದಿತಿ ಶಾಲೆಯಲ್ಲಿ ಓದಿದ್ದಾರೆ. ಬೆಂಗಳೂರು ಯೂನಿವರ್ಸಿಟಿಯಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಡಿಗ್ರಿ ಪಡೆದಿದ್ದಾರೆ.
ರಿಷಿತ್ ಟ್ರೂಕಾಲರ್ ಸೇರುವ ಮುನ್ನ ಎರಡು ಸ್ಟಾರ್ಟಪ್ಗಳನ್ನು ಸ್ಥಾಪಿಸಿದ್ದಾರೆ. 2000ದ ವರ್ಷದಲ್ಲೇ ಅವರು ವೆರಿಟಿ ಟೆಕ್ನಾಲಜೀಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅಲ್ಲಿ ಸಿಟಿಒ ಆಗಿ ಏಳು ವರ್ಷ ಇದ್ದರು. ನಂತರ ಜುಲೈ ಸಿಸ್ಟಮ್ಸ್ ಎನ್ನುವ ಮೊಬೈಲ್ ಇಂಟರ್ನೆಟ್ ಟೆಕ್ನಾಲಜಿ ಕಂಪನಿಯಲ್ಲಿ ನಾಲ್ಕು ವರ್ಷ ವಿಪಿಯಾಗಿ ಕೆಲಸ ಮಾಡಿದ್ದಾರೆ.
ಇದಾದ ಬಳಿಕ ರಿಷಿ ಜುಂಜುನವಾಲ ಅವರು ಕ್ಲೌಡ್ಮ್ಯಾಜಿಕ್ ಎನ್ನುವ ಕಂಪನಿ ಸ್ಥಾಪಿಸಿದ್ದಾರೆ. 2015ರಲ್ಲಿ ಟ್ರೂಕಾಲರ್ ಸಂಸ್ಥೆಯ ಪ್ರಾಡಕ್ಟ್ ವಿಭಾಗದಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ನೇಮಕವಾದರು. 2020ರಲ್ಲಿ ಚೀಫ್ ಪ್ರಾಡಕ್ಟ್ ಆಫೀಸರ್ ಆಗಿದ್ದಾರೆ. 2021ರಿಂದ ಎಂಡಿಯಾಗಿಯೂ ಹೆಚ್ಚುವರಿ ಜವಾಬ್ದಾರಿ ಪಡೆದಿದ್ದಾರೆ. ಈಗ ಸಿಇಒ ಸ್ಥಾನಕ್ಕೆ ನಿಯುಕ್ತರಾಗಿದ್ದಾರೆ.