ಬೆಂಗಳೂರು:- ದೇಶದಲ್ಲಿ ಮೆದುಳು, ನರರೋಗ ಹಾಗೂ ಅಪಸ್ಮಾರ , ಪಾರ್ಶ್ವವಾಯುವಿನಿಂದ ಉಂಟಾಗುವ ಗಂಭೀರ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲು ವೈಟ್ ಫೀಲ್ಡ್ ಸಮೀಪವಿರುವ
ಆಸ್ಟರ್ ಆಸ್ಪತ್ರೆ ನೂತನ ಆರೈಕೆ ಕೇಂದ್ರವನ್ನು ಆರಂಭಿಸಿದ್ದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರಿಂದ ಉದ್ಘಾಟನೆ ಮಾಡಲಾಗಿದೆ.
ನಿಮ್ಮ ಹಳೆಯ ಫೋನ್ ಮಾರಾಟ ಮಾಡೋ ಮುನ್ನ ಎಚ್ಚರ: ನೀವು ನೋಡಲೇಬೇಕಾದ ಸ್ಟೋರಿ!
ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ಮತ್ತು ಖಾಸಗಿ ವಲಯದ ನಡುವಿನ ಸಹಯೋಗವು ಆರೋಗ್ಯ ರಕ್ಷಣೆಯ ಲಭ್ಯತೆಯಲ್ಲಿನ ಅಂತರವನ್ನು ಹೋಗಲಾಡಿಸಲು ಇ.ಪಿ.ಐ.ಸಿ ಯೋಜನೆ ಉತ್ತಮ ಉದಾರಹರಣೆಯಾಗಿದೆ. ಈ ಯೋಜನೆಗಳು ಕಡುಬಡವ, ದೀನದಲಿತರಿಗೂ ಲಭ್ಯವಾಗಲಿವೆ ಎಂಬುದು ಸಂತೋಷಕರ ಸಂಗತಿ, ರೋಗ ಪತ್ತೆಯ ನಂತರ ಅದಕ್ಕೆ ಚಿಕಿತ್ಸೆಯನ್ನು ನೀಡಬಹುದು ಎಂದರು.ಈ ಸಂದರ್ಭದಲ್ಲಿ ಆಸ್ಟರ್ ಆಸ್ಪತ್ರೆಯ ಪ್ರೋ.ಡಾ.ಸತೀಶ್ ರುದ್ರಪ್ಪ ಆಸ್ಪತ್ರೆಯ ನಿರ್ದೇಶಕಿ ಡಾ.ಜೆಬಾ ಮೂಪೆನ್, ಗ್ರೂಪ್ ಡೈರೆಕ್ಟರ್ ಡಾ.ಸ್ವರೂಪ್ ಗೋಪಾಲ್, ರೋಟರಿ ಸಂಸ್ಥೆ ಸತೀಶ್ ಮಾಧವನ್ ಮತ್ತಿತರರು ಇದ್ದರು.