ಬೆಂಗಳೂರು:– ನಗರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ದಾಖಲಾಗಿದೆ. ಗಾಡಿ ಟಚ್ ಆಗಿದಕ್ಕೆ ವಾಹನ ಸವಾರ ಹುಚ್ಚನಂತಾಡಿದ್ದಾನೆ. ಕಾರಿನ ಗ್ಲಾಸ್ ಒಡೆದು ದುರ್ವರ್ತನೆ ತೋರಿದ್ದಾನೆ.
ಗಾಡಿ ಟಚ್ ಆಗಿದಕ್ಕೆ ಕಿರಿಕ್ ನಡೆದಿದೆ. ಮಹಾರಾಷ್ಟ್ರ ರಿಜಿಸ್ಟ್ರೇಷನ್ ಕಾರಿನ ಮೇಲೆ ದಾಳಿ ನಡೆದಿದೆ. ಈ ಸಂಬಂಧ x ನಲ್ಲಿ ಗೌಡ ಗ್ರೂಪ್ ಎಂಬ ಪೇಜ್ ಪೋಸ್ಟ್ ಮಾಡಿದೆ. ನಿಖರ ಸ್ಥಳದ ಬಗ್ಗೆ ಪೊಲೀಸರು ಮಾಹಿತಿ ಕೇಳಿದ್ದಾರೆ.