ಬೆಂಗಳೂರು:- ಬೆಂಗಳೂರಿನ ಕೊತ್ತನೂರಿನ ಕೆ.ನಾರಾಯಣಪುರದಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.
Health Tips: ಬೇಸಿಗೆಯಲ್ಲಿ ಕಲ್ಲಂಗಡಿ ತಿಂದ ಬಳಿಕ ಈ ತಪ್ಪು ಮಾಡಲೇಬೇಡಿ! ಸಂಕಟ ಗ್ಯಾರಂಟಿ!
ಯಶವಂತಪುರ ನಿವಾಸಿಯಾಗಿದ್ದ 28 ವರ್ಷದ ಸುನೀಲ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮಾ.7ರಂದು ತಡರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುನೀಲ್ಗೆ ಡ್ರಗ್ಸ್ ಜೊತೆಗೆ ಹುಡುಗಿಯರ ಶೋಕಿ ಕೂಡ ಇತ್ತು. ತನ್ನ ಚಟಕ್ಕಾಗಿ ಮನೆಯಲ್ಲಿಯೇ ಚಿನ್ನ, ಹಣ ಕಳ್ಳತನ ಮಾಡುತ್ತಿದ್ದ. ಇದನ್ನು ಮನೆಯವರು ಪ್ರಶ್ನಿಸಿದರೇ ಸಾಯೋದಾಗಿ ಹೇಳುತ್ತಿದ್ದ.
ನಂತರ ಮನೆಬಿಟ್ಟು ಕೊತ್ತನೂರು ಪಿಜಿ ಸೇರಿದ್ದ ಸುನೀಲ್, ಗ್ಯಾರೇಜ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮಾ.7ರಂದು ರಾತ್ರಿ ಮಾಲೀಕನಿಗೆ ಸಾಯೋದಾಗಿ ಮೆಸೆಜ್ ಮಾಡಿದ್ದ. ಬಳಿಕ ಪಿಜಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.