ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಬೆನ್ ಸ್ಟೋಕ್ಸ್ 6000 ರನ್ಗಳು ಹಾಗೂ 200 ವಿಕೆಟ್ಗಳನ್ನು ಪೂರ್ಣಗೊಳಿಸುವ ಮೂಲಕ ಜಾಕ್ ಕಾಲಿಸ್ ಹಾಗೂ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಅವರನ್ನು ಒಳಗೊಂಡ ಎಲೈಟ್ ಲಿಸ್ಟ್ಗೆ ಸೇರ್ಪಡೆಯಾಗಿದ್ದಾರೆ. ಲಂಡನ್ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನ ಬೆನ್ ಸ್ಟೋಕ್ಸ್ ಈ ಸಾಧನೆಯನ್ನು ಮಾಡಿದ್ದಾರೆ. ಅವರು ಪಂದ್ಯದ ಎರಡನೇ ದಿನ ಕೂಡ ಇಂಗ್ಲೆಂಡ್ ತಂಡ ಪ್ರಾಬಲ್ಯ ಸಾಧಿಸಿದೆ.
ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದರೆ, ಅವರು ಭಾರತವನ್ನು ಮರೆಯುತ್ತಾರೆ : ಹೀಗಂದಿದ್ಯಾರು?
ಟೆಸ್ಟ್ ಕ್ರಿಕೆಟ್ನಲ್ಲಿ 6000 ರನ್ಗಳು ಹಾಗೂ 200 ವಿಕೆಟ್ಗಳನ್ನು ಕಬಳಿಸಿದ ಇಂಗ್ಲೆಂಡ್ನ ಮೊದಲ ಆಟಗಾರ ಎಂಬ ಕೀರ್ತಿಗೆ ಬೆನ್ ಸ್ಟೋಕ್ಸ್ ಭಾಜನರಾಗಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಗ್ಯಾರಿಫೀಲ್ಡ್ ಸೋಬರ್ಸ್ 93 ಟೆಸ್ಟ್ ಪಂದ್ಯಗಳಿಂದ 8032 ರನ್ಗಳು ಹಾಗೂ 235 ವಿಕೆಟ್ಗಳನ್ನು ಕಬಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಮಾಜಿ ಆಲ್ರೌಂಡರ್ ಜಾಕ್ ಕಾಲಿಸ್ ಅವರು 166 ಟೆಸ್ಟ್ ಪಂದ್ಯಗಳಿಂದ 13289 ರನ್ಗಳು ಮತ್ತು 292 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ತಮ್ಮ ವೃತ್ತಿ ಜೀವನದ 103ನೇ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ 6320 ರನ್ಗಳು ಹಾಗೂ 200 ವಿಕೆಟ್ಗಳನ್ನು ಪೂರ್ಣಗೊಳಿಸಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ದ್ವಿತೀಯ ಇನಿಂಗ್ಸ್ನಲ್ಲಿ ಬೌಲ್ ಮಾಡಿದ ಮೊದಲ ಓವರ್ನಲ್ಲಿ ಕಿರ್ಕ್ ಮೆಕೆಂಜಿ ಅವರನ್ನು ಔಟ್ ಮಾಡುವ ಮೂಲಕ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೆನ್ ಸ್ಟೋಕ್ಸ್ ಅವರು 10000 ರನ್ಗಳು ಹಾಗೂ 300 ವಿಕೆಟ್ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಕಾರ್ಲ್ ಹೂಪರ್, ಸನತ್ ಜಯಸೂರ್ಯ, ಜಾಕ್ ಕಾಲಿಸ್, ಶಾಹಿದ್ ಅಫ್ರಿದಿ, ಶಕಿಬ್ ಅಲ್ ಹಸನ್ ಅವರನ್ನು ಒಳಗೊಂಡ ಮತ್ತೊಂದು ಎಲೈಟ್ ಲಿಸ್ಟ್ಗೆ ಸೇರಿಕೊಂಡಿದ್ದಾರೆ.