ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ಬಾಣಂತಿಯರು ಕಾಮಾಲೆ ( ಜಾಂಡೀಸ್ ) ಸೋಂಕಿನಿಂದ ಒಂದೇ ದಿನ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಮೋಕಾದ ನಂದಿನಿ ಮತ್ತು ಲಲಿತಮ್ಮ ಮೃತರು. ಹೆರಿಗೆಗೆ ದಾಖಲಾಗಿದ್ದ ಇಬ್ಬರಲ್ಲಿ ಒಬ್ಬರಿಗೆ ಸೋಮವಾರ ರಾತ್ರಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆದಿತ್ತು.
ನಿಮ್ಮ ಮನೆಯಲ್ಲಿ ಜಿರಳೆ, ನೊಣಗಳ ಕಾಟದಿಂದ ಬೇಸತ್ತು ಹೋಗಿದ್ದೀರಾ? ಈ ಟಿಪ್ಸ್ ಫಾಲೋ ಮಾಡಿ
ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದರು. ಮತ್ತೊಬ್ಬರು ಮಂಗಳವಾರ ಬೆಳಿಗ್ಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಒಳಗಾದ ಕೆಲ ಹೊತ್ತಿನಲ್ಲೇ ಮೃತಪಟ್ಟರು. ಸದ್ಯ ಇಬ್ಬರಿಗೂ ಜನಿಸಿದ ಶಿಶುಗಳು ಆರೋಗ್ಯವಾಗಿವೆ. ಜಾಂಡೀಸ್ ಮತ್ತು ಕಡಿಮೆ ರಕ್ತದ ಒತ್ತಡದ ಕಾರಣದಿಂದ ಇಬ್ಬರೂ ಬಾಣಂತಿಯರು ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬರಿಗೆ ಕಿಡ್ನಿ ಸಂಬಂಧಪಟ್ಟ ಸಮಸ್ಯೆ ಇತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.