ಬಳ್ಳಾರಿ:-ಹೊಸ ವರ್ಷವನ್ನ ಸಂಭ್ರಮದಿಂದ ಆಚರಣೆ ಮಾಡಲು ಗಣಿನಾಡು ಬಳ್ಳಾರಿ ನಗರದ ಬೇಕರಿಗಳಲ್ಲಿ ಕೇಕ್ ಗಳ ಮಾರಾಟ ಭರ್ಜರಿಯಿಂದ ಸಾಗಿದೆ.
ನಗರದ ರೇಣುಕಾ ಬೇಕರಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬಗೆಯ ಕೇಕ್ ಗಳನ್ನ ಸಿದ್ದಪಡಿಸಲಾಗಿದ್ದು, ಹೊಸ ವರ್ಷ ಆಚರಣೆ ಮಾಡುವವರಿಗೆ ಕೇಕ್ ಗಳು ಆಕರ್ಷಕವಾಗಿವೆ.
ತರಹೇವಾರಿ ಕೇಕ್ ಗಳನ್ನ ಜನರು ಖರೀದಿ ಮಾಡುತ್ತಿದ್ದಾರೆ.ಕಳೆ 2-3 ದಿನಗಳಿಂದಲೂ ಸುಮಾರು 30 ಕ್ಕೂ ಹೆಚ್ಚು ಕೆಲಸಗಾರರು ಕೇಕ್ ಗಳನ್ನ ಸಿದ್ದಪಡಿಸುತ್ತಿದ್ದಾರೆ.
ವೆನೆಲ್ಲಾ, ಸ್ಟ್ರಾಬರಿ, ಹನಿ, ಚಾಕ್ ಲೆಟ್,ಐಸ್ ಕೇಕ್ ಸೇರಿದಂತೆ ತರಹೇವಾರಿ ಕೇಕ್ ಗಳು ಸಿದ್ದಗೊಂಡಿವೆ. ಈತ್ತ ಯುವಕ-ಯುವತಿಯರು ಕೇಕ್ ಖರೀದಿಸಲು ಮುಗಿಬಿದ್ದಿದ್ದಾರೆ.