ಬಳ್ಳಾರಿ: ಎಪಿಕೆ ಫೈಲ್ಗಳನ್ನು ವಾಟ್ಸಾಪ್ ಮೂಲಕ ಕಳಿಸಿ ಡೌನ್ಲೋಡ್ ಮಾಡಿಕೊಂಡವರ ಖಾತೆಯಿಂದ ಹಣ ಎಗರಿಸುತ್ತಿದ್ದ ವಂಚಕರ ಜಾಲವನ್ನು ಪೊಲೀಸರು ಕಾರ್ಯಾಚರಣೆ ಮೂಲಕ ಪತ್ತೆಹಚ್ಚಿ ಅವರಿಂದ ಹಣ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ ಸೈಬರ್, ಆರ್ಥಿಕ, ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ನಗರದ ಆರ್.ಪ್ರಭು ಅವರು ಹಣ ಕಳೆದುಕೊಂಡ ನೀಡಿದ ದೂರಿನಂತೆ ಗ್ವಾಲಿಯರ್ ನಗರದ ಅನಿಲ್ ಪಾಲ್ ಮತ್ತು ಜಾರ್ಖಂಡ್ನ ಮಣಿಕುಮಾರ್ ಮಂಡಲ್ರನ್ನು ವಶಕ್ಕೆ ಪಡೆದು ₹3.10 ಲಕ್ಷ ನಗದು, ಆರೋಪಿತರ ಕ್ರೆಡಿಟ್/ಡೆಬಿಟ್ ಕಾರ್ಡ್ಗಳಿಗೆ ವರ್ಗಾವಣೆಯಾಗಿದ್ದ ₹4.50 ಲಕ್ಷ ಹಣವನ್ನು ಫ್ರಿಜ್ ಮಾಡಿಸಿರುತ್ತಾರೆ.