ಬಳ್ಳಾರಿ:- ಆ ಸಹೋದರಿಬ್ಬರು ಹೊಸ ವರ್ಷ ಸಂಭ್ರಮಾಚರಣೆ ಮಾಡಬೇಕು ಅಂತಾ ಕೇಕ್ ತರಲು ಬೇಕರಿಗೆ ಹೋಗಿದ್ರು. ಇನ್ನೇನು ಕೇಕ್ ತೆಗೆದುಕೊಂಡು ಮನೆಗೆ ಹೊರಡಬೇಕಿತ್ತು, ಅಷ್ಟ್ರರಲ್ಲಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಎದುರುಗಡೆ ಇದ್ದ ಗುಂಪಿನೊಂದಿಗೆ ಜಗಳ ಪ್ರಾರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ, ಆಗ ಕುಡಿದ ಮತ್ತಿನಲ್ಲಿದ್ದ ಆ ಯುವಕರು ಕೇಕ್ ತರಲು ಬಂದ ವ್ಯಕ್ತಿಯನ್ನ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಹೌದು, ವರ್ಷದ ಅಂತ್ಯದ ದಿನದಂದೇ ಗಣಿನಾಡು ಬಳ್ಳಾರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಸಹೋದರಿಬ್ಬರ ಮೇಲೆ ಭೀಕರವಾಗಿ ಹಲ್ಲೆ ಮಾಡಿ ಓರ್ವನನ್ನ ಕೊಲೆ ಮಾಡಿದ ಘಟನೆ ನಡೆದಿದೆ… ಎಸ್ ಸೈಯದ್ ವಾಲಿ (23) ಮತ್ತು ರಜಾಕ ವಾಲಿ (26) ಈ ಇಬ್ಬರು ಸಹೋದರರು ಹೊಸ ವರ್ಷ ಸಂಭ್ರಮಾಚರಣೆ ಮಾಡಬೇಕು ಅಂತಾ ವಡ್ಡರಬಂಡೆಯಲ್ಲಿರುವ ಎಮ್.ಎಮ್ ಬೇಕರಿಗೆ ಕೇಕ್ ತರಲು ರಾತ್ರಿ 8:30 ಕ್ಕೆ ಬಂದಿದ್ದಾರೆ.. 1.5 kg ಕೇಕ್ ತೆಗೆದುಕೊಂಡು ಬೇಕರಿಗೆ ಮುಂದೆ ನಿಲ್ಲಿಸಿದ್ದ ಬೈಕ್ ಹತ್ತಿ ಮನೆಗೆ ಹೊರಡಬೇಕಿತ್ತು… ಅಷ್ಟರಲ್ಲಿ ಇವರು ನಿಲ್ಲಿಸಿದ್ದ ಬೈಕ್ ಪಕ್ಕದಲ್ಲಿ ಇನ್ನೊಂದು ಬೈಕ್ ನಿಂತಿದೆ.. ಆಗ ಆ ಬೈಕ್ ಯಾರದು ಅಂತಾ ನೋಡುವಾಗ ಅಲ್ಲಿಯೇ ಮೂವರು ಯುವಕರು ಅದೇ ಬೇಕರಿ ಮುಂದೆ ಕೇಕ್ ತೆಗೆದುಕೊಳ್ಳಲು ನಿಂತಿದ್ದಾರೆ.. ಬೈಕ್ಗೆ ಅಡ್ಡವಾಗಿ ನಿಮ್ಮ ಬೈಕ್ ನಿಲ್ಲಿಸಿದ್ದಿರೀ ಸ್ವಲ್ಪ ಜಾಗ ಬಿಡಿಸಿ ಅಂತಾ ಸೈಯದ್ ಮತ್ತು ರಜಾಕ ಆ ಮೂವರಿಗೆ ಹೇಳಿದ್ದಾರೆ… ಆಗ ಆ ಯುವಕರು ಸ್ವಲ್ಪ ತಡಿ ನಾವು ಕೇಕ್ ತೆಗೆದುಕೊಳ್ಳಬೇಕು ನಿಲ್ಲು ಅಂತಾ ಹೇಳಿದ್ದಾರೆ… ಅಷ್ಟಕ್ಕೆ ಮಾತಿಗೆ ಮಾತು ಬೆಳೆದಿದೆ.. ಕುಡಿದ ಮತ್ತಿನಲ್ಲಿ ಆರೋಪಿ ರಾಜೇಶ್, ವೆಂಕಟೇಶ ಮತ್ತು ಮುಕೇಶ ಸಹೋದರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.. ಜಗಳ ತಾರಕಕ್ಕೇರಿದೆ ಅಷ್ಟರಲ್ಲಿ A 1 ಆರೋಪಿ ಮುಕೇಶ ತನ್ನ ಬೈಕ್ನಲ್ಲಿದ್ದ ಚಾಕು ತೆಗೆದು ಸೈಯದ್ ವಾಲಿ ಮತ್ತು ರಜಾಕ ಮೇಲೆ ಬೀಕರವಾಗಿ ಹಲ್ಲೆ ಮಾಡಿದ್ದಾನೆ, ಪರಿಣಾಮ ಸೈಯದ್ ಸಾವನ್ನಪ್ಪಿದ್ದು ರಜಾಕ ಗಂಭೀರ ಗಾಯಗೊಂಡು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನೂ A 1 ಆರೋಪಿ ಮುಖೇಶ್ ರೌಡಿ ಪ್ರವೃತ್ತಿಯವನ್ನಾಗಿದ್ದು ಸದಾ ತನ್ನ ಬೈಕ್ನಲ್ಲಿ ಮಾರಕಾಸ್ತ್ರಗಳನ್ನ ಇಟ್ಟುಕೊಂಡು ಓಡಾಡುತ್ತಿದ್ದ.. ನಾಲ್ಕು ತಿಂಗಳ ಹಿಂದೆ ಆತನ ಮೇಲೆ ಸೆ 324 ಕೇಸ್ ಕೂಡ ದಾಖಲಾಗಿತ್ತು…
ಇನ್ನೂ ಇಡೀ ಬಳ್ಳಾರಿ ಜಿಲ್ಲೆ 2023 ಕ್ಕೆ ವಿಧಾಯ ಹೇಳಿ 2024 ರ ಹೊಸ ವರ್ಷವನ್ನ ಭರ ಮಾಡಿಕೊಳ್ಳಲು ಕಾತುರ ದಿಂದ ಕಾಯುತ್ತಿರುವಾಗ, ಕೇವಲ ಬೈಕ್ ಪಾರ್ಕಿಂಗ್ ವಿಚಾರವಾಗಿ ಶುರುವಾದ ಗಲಾಟೆ ಓರ್ವನ ಜೀವ ಬಲಿ ಪಡೆದರೆ, ಇನ್ನೋರ್ವನನ್ನ ಸಾವು ಬದುಕಿನ ಮಧ್ಯ ಹೋರಾಡುವಂತೆ ಮಾಡಿಸಿದೆ.. ಮೃತ ಪಟ್ಟ ಸೈಯದ್ನಿಗೆ ಹೊಟ್ಟೆ, ಬೆನ್ನಿನ ಭಾಗಕ್ಕೆ ತೀವ್ರವಾಗಿ ಚಾಕು ಇರಿದ ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೊ ಸಾವನ್ನಪ್ಪಿದ್ದಾನೆ, ಇನ್ನೊರ್ವ ರಜಾಕ ಹೊಟ್ಟೆ, ಬೆನ್ನು, ಕೈ ಭಾಗಕ್ಕೆ ಚಾಕು ಇರಿತವಾಗಿದ್ದು ಆತನು ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿದ್ದಾನೆ.. ಇನ್ನು ಇಬ್ಬರು ಸಹೋದರು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದು, ಯಾರ ತಂಟಗೆ ಹೋಗದೆ ತಮ್ಮ ಪಾಡಿಗೆ ತಾವು ಜೀವನ ಮಾಡುತ್ತಿದ್ದರು ಆದರೆ ಏಕಾಏಕಿ ಈ ರೀತಿ ಆಗಿದೆ.. ಅಮಾಕಯರ ಜೀವ ಬಲಿ ಪಡೆದರಿಗೆ ಗಲ್ಲು ಶಿಕ್ಷೆ ಆಗಬೇಕು ಅಂತಾ ಪೋಷಕರು ಒತ್ತಾಯ ಮಾಡಿದ್ದಾರೆ…
ಒಟ್ಟಿನಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಮಿಂದೆದ್ದ ಗಣಿನಾಡಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಓರ್ವನ ಕೊಲೆಯಾಗಿದೆ.. ಈ ಕುರಿತು ಬ್ರೂಸ್ ಪೇಟೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರನ್ನ ವಶಕ್ಕೆ ಪಡೆದು ಇನ್ನೊರ್ವ ಆರೋಪಿ ತಲೆಮರಿಸಿಕೊಂಡಿದ್ದಾನೆ.