ನಗರದ ಕೇಂದ್ರ ಕಾರಾಗೃಹದಲ್ಲಿ ವಿವಿಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 8 ಜನ ಸಜಾಬಂಧಿಗಳನ್ನು ಸನ್ನಡತೆ ಆಧಾರದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು. ತಾಲೂಕಿನ ಕೆ.ಕೆ. ಹಾಳ್ ಗ್ರಾಮದ ಕಗ್ಗಲ್ ವೆಂಕಟೇಶ, ಸೋಮಪ್ಪ, ಚಂದ್ರ, ಸುಂಕಣ್ಣ, ಈರಣ್ಣ, ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ಎ.ಯಲ್ಲಪ್ಪ, ಶಿವಮೊಗ್ಗದ ಪ್ರಶಾಂತ್, ವಿಜಯಪುರದ ಈರಪ್ಪ ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾಗಿರುವ ಸಜಾಬಂಧಿಗಳಾಗಿದ್ದಾರೆ.
ನಿಮಗೆ ಗೊತ್ತೆ..? ಇಲ್ಲಿ ಒಡಹುಟ್ಟಿದವರು, ತಾಯಿ -ಮಗ ಮತ್ತು ತಂದೆ- ಮಗಳ ಜೊತೆ ದೈಹಿಕ ಸಂಬಂಧ ಇರುತ್ತೆ..!
2008ರಲ್ಲಿ ಕೆ.ಕೆ. ಹಾಳ್ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಗಲಾಟೆಯಲ್ಲಿ ಒಟ್ಟು 21 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ ಸೋಮವಾರ ಐವರು ಸೇರಿ 17 ಜನರು ಜೈಲಿನಿಂದ ಬಿಡುಗಡೆಯಾಗಿದ್ದು, ಇನ್ನು ನಾಲ್ವರು ಇದ್ದಾರೆ ಎಂದು ಜೈಲು ಅಧೀಕ್ಷಕಿ ಆರ್.ಲತಾ ತಿಳಿಸಿದ್ದಾರೆ. ಕಳೆದ ಎರಡು ವರ್ಷದಲ್ಲಿ ಬಳ್ಳಾರಿ ಜೈಲಿನಿಂದ ಸರಿಸುಮಾರು 50ಕ್ಕೂ ಹೆಚ್ಚು ಸಜಾಬಂಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಳಿಸಲಾಗಿದೆ.