ಬೆಳಗಾವಿ: ಬೆಳಗಾವಿ ಸಾಹುಕಾರ್, ಸಚಿವ ಸತೀಶ್ ಜಾರಕಿಹೊಳಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದು, ಬೆಳಗಾವಿ ಫ್ಲೈ ಒವರ್ ಬ್ರಿಡ್ಜ್ ನಿರ್ಮಿಸಲು ನಿರ್ಧಾರ ಮಾಡಿದ್ದಾರೆ. ಕೇಂದ್ರ ಸರ್ಕಾರದ ನೆರವು ಪಡೆಯದೇ, ತಮ್ಮದೇ ಇಲಾಖೆಯಿಂದ 300 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಫ್ಲೈ ಒವರ್ ಬ್ರಿಡ್ಜ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಬೆಳಗಾವಿಯಲ್ಲೇ ಯೋಜನೆ ಘೋಷಿಸಿದ್ರು. ಆದರೆ ಬೆಳಗಾವಿ ಜಿಲ್ಲೆ ಬಿಜೆಪಿ ನಾಯಕರಿಂದ ಯೋಜನೆಗೆ ಅಡ್ಡಿಪಡಿಸಲಾಗಿದೆ.
ಕ್ರೆಡಿಟ್ ಪೊಲಿಟಿಕ್ಸಗಾಗಿ ಬಿಜೆಪಿ ನಾಯಕರ ವಿರೋಧ ವ್ಯಕ್ತವಾದ ಹಿನ್ನೆಲೆ, ರಾಜ್ಯ ಸರ್ಕಾರದಿಂದಲೇ ಯೋಜನೆ ಜಾರಿ ಮಾಡಲು ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಯೋಜನೆ ಘೋಷಿಸಲಿದ್ದು, ಈಗಾಗಲೇ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ.