ಬೆಳಗಾವಿ:ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ರಮೇಶ ಕತ್ತಿ ರಾಜೀನಾಮೆ ನೀಡಿದ್ದಾರೆ.
ಈ ಹಿನ್ನೆಲೆ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ ನೀಡಿದ್ದಾರೆ. ಟಿವಿಗಳಲ್ಲಿ ವಿಷಯ ಬೇರೆ ಬೇರೆ ಬರುತ್ತಿದೆ ಎಲ್ಲರಿಗೂ ಕ್ಲಿಯರ್ ಮಾಡ್ತಿವಿ. ಎಲ್ಲರ ಸಹಮತದಿಂದ 2020ರಲ್ಲಿ ಅವಿರೋಧ ಆಯ್ಕೆ ಮಾಡಿದ್ವಿ. ಇನ್ನೊಂದು ವರ್ಷ ಅವಧಿ ಇತ್ತು ಸ್ವಲ್ಪ ಬಿನ್ನಾಭಿಪ್ರಾಯ ಇದ್ದವು. ಡೈರೆಕ್ಟರ್ಸ್ ಎಲ್ಲರೂ ಬಂದು ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಅವರಿಗೆ ನಾವೂ ಸಜ ಮನವಿ ಮಾಡಿದೆವು. ಹೀಗಾಗಿ ಹಿರಿಯರು ಹಾಗೂ ನಿರ್ದೇಶಕರಿಗೆ ಗೌರವ ಕೊಟ್ಟು ರಾಜೀನಾಮೆ ನೀಡಿದ್ದಾರೆ. ಅಕ್ಟೋಬರ್ ಅಂತ್ಯದ ಒಳಗೆ ಹೊಸ ಅಧ್ಯಕ್ಷರ ಆಯ್ಕೆ ಆಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
PM Modi: ಉದ್ಯೋಗಗಳು, ಕೌಶಲ್ಯಗಳು, ಮೋದಿ 3.0 ಸರ್ಕಾರದ ಕೇಂದ್ರಬಿಂದು: ಪ್ರಧಾನಿ!
ಜಿಲ್ಲೆಯ ಹಿರಿಯ ಪ್ರಭಾಕರ ಕೋರೆ, ಲಕ್ಷ್ಮಣ ಸವದಿ, ರಮೇಶ ಕತ್ತಿ, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆ ಆಗುತ್ತದೆ. ರಮೇಶ ಕತ್ತಿ ಅವರ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ಗೆ 30 ಕೋಟಿ ಲಾಭ ಆಗಿದೆ. ಹಿರಿಯರ ವಿನಂತಿಯ ಮೇರೆಗೆ ರಮೇಶ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಬ್ಯಾಂಕ್, ರೈತರು, ಗ್ರಾಹಕರ ಹಿತ ದೃಷ್ಟಿಯಿಂದ ಹೊಸ ಅಧ್ಯಕ್ಷರ ಆಯ್ಕೆ ಮಾಡ್ತಿವಿ ಎಂದು ತಿಳಿಸಿದ್ದಾರೆ.
ರಮೇಶ ಕತ್ತಿ ಸುದ್ದಿಗೋಷ್ಠಿಗೇಕೆ ಬಂದಿಲ್ಲ ಎಂಬ ಪ್ರಶ್ನೆ ವಿಚಾರದ ಬಗ್ಗೆ ಸ್ಪಷ್ಟಪಸಿಡಿದ ಬಾಲಚಂದ್ರ ಜಾರಕಿಹೊಳಿ ಅವರು, ಹೊಸ ಅಧ್ಯಕ್ಷರ ಆಯ್ಕೆಯಲ್ಲಿ ಅವರು ಇರ್ತಾರೆ ಎಂದು ಹೇಳಿದ್ದಾರೆ. ರಮೇಶ ಕತ್ತಿ ವಿರುದ್ಧ ಅಸಮಾಧಾನ ವ್ಯಕ್ತವಾಯಿತು ಎಂಬ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಮೆಂಬರ್ಶಿಪ್ ಮಾಡುವ ವಿಚಾರದಲ್ಲಿ ನಾವೆಲ್ಲರೂ ಸೇರಿದ್ವಿ. ಅದಕ್ಕೂ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಎಲ್ಲರೂ ಸೇರಿ ಒಂದು ಸಂಸ್ಥೆ ನಡೆಸುವಾಗ ಭಿನ್ನಾಭಿಪ್ರಾಯ ಇರುತ್ತೆ. ಬ್ಯಾಂಕ್ ಸರಿ ನಡೆಸಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಬದಲಾವಣೆ ಮಾಡಿಲ್ಲ. 9 ವರ್ಷ ಅವರು ಬ್ಯಾಂಕ್ ಅಧ್ಯಕ್ಷರಾಗಿದ್ದರು. ಭಿನ್ನಾಭಿಪ್ರಾಯ ಇದ್ದೆ ಇರುತ್ತೆ ಅದೇ ಕಾರಣಕ್ಕೆ ಅವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವುದು ಸುಳ್ಳು ಎಂದಿದ್ದಾರೆ.