ಬಾಗಲಕೋಟೆ:- ಬೆಳಗಾವಿ ಕಮಿಷನರ್ ದುಷ್ಟ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದ್ದಾರೆ.
ನನ್ನ ವಿರುದ್ಧ ಸಂಚು ಮಾಡಿದವರ ವಿರುದ್ಧ ನ್ಯಾಯಾಂಗ ತನಿಖೆ ಆಗಲಿ: CT ರವಿ!
ಈ ಸಂಬಂಧ ಮಾತನಾಡಿದ ಅವರು, ಕಾನೂನು ಸಮಾಲೋಚನೆ ತೆಗೆದುಕೊಳ್ಳಲಿಕ್ಕೆ ನಾನು ಸಿಟಿ ರವಿಗೆ ಹೇಳಿದ್ದೇನೆ. ಆ ಪ್ರಕಾರ ಅವರು ಕಾನೂನು ಹೋರಾಟ ಮಾಡುತ್ತಾರೆ. ಸಿಟಿ ರವಿ ಅವರನ್ನ ಬಂಧನ ಮಾಡಿದ ನಂತರ ಅದೇ ದಿನ ರಾತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ನಿಲ್ಲಿಸುತ್ತಾರೆ.
ಇಡೀ ರಾತ್ರಿ ಎಲ್ಲಾ ಕರೆದುಕೊಂಡು ತಮಗೆ ಸಂಬಂಧವಿಲ್ಲದ ಖಾನಾಪುರ ಬಾಗಲಕೋಟೆ, ಧಾರವಾಡ, ಗದಗ ವ್ಯಾಪ್ತಿಯಲ್ಲಿ ಓಡಾಡಿದ್ದಾರೆ. ಬೆಳಗಾವಿ ಕಮಿಷನರ್ ದುಷ್ಟ ಕೆಲಸ ಮಾಡಿದ್ದಾರೆ. ತಮ ವ್ಯಾಪ್ತಿಯಲ್ಲಿ ಬರ ಜಾಗದಲ್ಲಿ ಓಡಾಡಿಸಿದ್ದಾರೆ ಎಂದು ಗರಂ ಆಗಿದ್ದಾರೆ.
ಅವಕಾಶ ಸಿಕ್ಕರೆ ಸಿ.ಟಿ.ರವಿ ಮುಗಿಸಬೇಕೆಂಬ ಉದ್ದೇಶವಿತ್ತು ಅನಿಸುತ್ತೆ. ಆದರೆ, ಸರಿಯಾದ ಅವಕಾಶ ಸಿಕ್ಕಿಲ್ಲ. ನಮ್ಮ ಎಂಎಲ್ಸಿ ಕೇಶವಪ್ರಸಾದ್ ಕೂಡ ಅವರ ಹಿಂದೆ ಇದ್ದರು. ನಮಗೆ ಸಿ.ಟಿ.ರವಿ ಅವರ ಲೈವ್ ಲೊಕೇಶನ್ ಸಿಗುತ್ತಿತ್ತು. ಕೆಲವು ಮಾಧ್ಯಮದವರು ಕೂಡ ಬೆನ್ನುಹತ್ತಿದ್ರು, ಧನ್ಯವಾದಗಳು ಎಂದಿದ್ದಾರೆ.