ಬೆಳಗಾವಿ: ವಕ್ಫ್ ಬೋರ್ಡ್ ವಿರುದ್ಧ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಜನಜಾಗೃತಿ ಸಭೆಯ ಆಯೋಜನೆ ಮಾಡಲಾಗಿದ್ದು, ನಗರದಲ್ಲಿ ಎಲ್ಲಡೆ ಭಿತ್ತಿ ಪತ್ರ ಮತ್ತು ಹೋಲ್ಡಿಂಗ್ಸ್ ಅಳವಡಿಸಲಾಗಿದೆ. ಆದರೆ ಭಿತ್ತಿ ಪತ್ರ ಮತ್ತು ಹೋಲ್ಡಿಂಗ್ಸ್ ಮುಚ್ಚುತ್ತಿರುವ ಪೊಲೀಸರ ಕ್ರಮ ಖಂಡಿಸಿ ನಗರದಲ್ಲಿಂದು ಪ್ರತಿಭಟನೆ ಮಾಡಲಾಯಿತು.
ನಾಳೆ ಬೆಳಗಾವಿಯಲ್ಲಿ ವಕ್ಫ್ ನೀತಿ ವಿರುದ್ಧ ಜನಜಾಗೃತಿ ಸಭೆ ಆಯೋಜನೆ ಮಾಡಲಾಗಿದ್ದು, ಈ ಜಾಗೃತಿ ಸಭೆಗೆ ಕನ್ನೇರಿ ಮಠದ ಶ್ರಿಗಳು ಆಗಮಿಸಿಸಲಿದ್ದಾರೆ. ಹಾಗಾಗಿ ಎಲ್ಲಡೆ ಭಿತ್ತಿ ಪತ್ರ ಮತ್ತು ಹೋಲ್ಡಿಂಗ್ಸ್ ಹಚ್ಚಲಾಗಿದೆ. ಹೋಲ್ಡಿಂಗ್ಸ್ ನಲ್ಲಿ ಉರ್ದು ಭಾಷೆಯಲ್ಲಿ ವಕ್ಫ್ ಬೋರ್ಡ್ ಎಂದು ಬರೆಯಲಾಗಿದೆ.
ಅದನ್ನು ಪೊಲೀಸರು ಮುಚ್ಚುತ್ತಿದ್ದು, ಪೊಲೀಸರ ಕ್ರಮ ಖಂಡಿಸಿ ಗೋವಾವೆಸ್ ನ ಬಸವೇಶ್ವರ ವೃತ್ತದಲ್ಲಿ ಹಿಂದುಪರ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹಿಂದು ಪರ ಸಂಘಟನೆಗಳ ಒತ್ತಡಕ್ಕೆ ಮಣಿದ ಪೊಲೀಸರು ಹೋಲ್ಡಿಂಗ್ಸ್ ಮೇಲೆ ಅಂಟಿಸಿದ ಸ್ಟಿಕರ್ ತೆರವುಗೊಳಿಸಿದರು.