ಬೆಳಗಾವಿ: ಇತ್ತಿಚ್ಚೆಗೆ ರೈತರ ವಿರುದ್ಧ ತೊಡೆತಟ್ಟಿದ ಬೆಳಗಾವಿ ಎಸ್ಪಿ ಭೀಮಾಶಂಕರ್ ಹಾಗೂ ಅನ್ನದಾತರ ಬಗ್ಗೆ ಹಗುರವಾಗಿ ಮಾತನಾಡಿದ್ದ ಸಚಿವ ಶಿವಾನಂದ ಪಾಟೀಲ ನಡೆಯನ್ನು ಖಂಡಿಸಿ, ಧಾರವಾಡದಲ್ಲಿ ರೈತರು ಬೀದಿಗೆ ಇಳಿದು, ಇಬ್ಬರ ಭಾವಚಿತ್ರಕ್ಕೆ ಸಗಣಿ ಹಚ್ಚಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ, ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತ ಮುಖಂಡರು ಎಸ್ಪ ಭೀಮಾಶಕಂರ ಹಾಗೂ ಸಚಿವ ಶಿವಾನದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋ ವ್ಯಕ್ತಪಡಿಸಿದರು.
ಇತ್ತಿಚೆಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಅವರು ರೈತರನ್ನು ಚದುರಿಸುವ ಸಮಯದಲ್ಲಿ ತೊಡೆತಡ್ಟಿ ಅವಮಾನಿಸಿದ್ದಾರೆ. ಮತ್ತೊಂದು ಕಡೆ ಸಚಿವ ಶಿವಾನಂದ ಪಾಟೀಲ ಅವರು ರೈತರು ಬರಗಾಲ ಬರಲಿಬೆಂದು ಎದುರು ನೋಡುತ್ತಾರೆ ಅಂರಾ ಹೇಳಿಕೆ ನೀಡಿದ್ದಾರೆ. ಇದೂ ರೈತ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ. ರೈತರಿಗೆ ದೇಶ ಸೇರಿ ಜಗತ್ತೆ ಗೌರವದಿಂದ ನೋಡುತ್ತದೆ.
ಆದರೆ ಈ ಇಬ್ಬರಿಗೆ ರೈತರ ಮಹತ್ವ ಗೊತ್ತಿಲ್ಲ. ಈ ಕೂಡಲೇ ಎಸ್ಪಿ ಭೀಮಾಶಂಕರವರನ್ನು ಅಮಾನತು ಮಾಡಬೇಕು. ಜೊತೆಗೆ ಸಚಿವ ಸಂಪುಟದಿಂದ ಶಿವಾನಂದ ಪಾಟೀಲರನ್ನು ಮುಖ್ಯಂಮತ್ರಿಗಳು ಕೈ ಬೀಡಬೇಕು ಎಂದು ಅಗ್ರಹಿಸಿದರು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಡಕ್ಕೆ ನಾವು ಮುಂದಾಗಿತ್ತೇವೆ ಎಂದು ಎಚ್ಚರಿಕೆ ನೀಡಿ ಧಾರವಾಡ ಜಿಲ್ಲಾ ಅಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯವರಿಗೆ ಮನವಿ ಸಲ್ಲಿಸಿದರು.