ಬೆಳಗಾವಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಮೇಶ್ ಕತ್ತಿ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆಗೆ ನಡೆಯಲಿದ್ದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಪ್ರಾರಂಭವಾಗಲಿದೆ. ಮತ್ತೊಂದೆಡೆ ಅವಿರೋಧವಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆಗೆ ಕಸರತ್ತು ನಡೆಸಿದ್ದು ಈಗಾಗಲೇ ನಿರ್ದೇಶಕರ ಜೊತೆಗೆ ಎರಡ್ಮೂರು ಹಂತದ ಮಾತುಕತೆ ನಡೆದಿದೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ರಮೇಶ್ ಕತ್ತಿ ನೇತೃತ್ವದಲ್ಲಿ ಮಾತುಕತೆ ನಡೆದಿದೆ. ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಪ್ರಭಾರಿ ಅಧ್ಯಕ್ಷ ಸುಭಾಷ ಡವಳೇಶ್ವರ ಮಧ್ಯೆ ತೀವ್ರ ಫೈಟ್ ಇದ್ದು ಅಣ್ಣಾಸಾಹೇಬ್ ಜೊಲ್ಲೆಗೆ ಕೆಲ ನಿರ್ದೇಶಕರ ವಿರೋಧ ಹಿನ್ನೆಲೆ ಒಮ್ಮತ ಮೂಡಿಲ್ಲ. ಹೀಗಾಗಿ ಪ್ರತ್ಯೇಕವಾಗಿ ನಿರ್ದೇಶಕರನ್ನು ಕರೆಯಿಸಿ ಅಧ್ಯಕ್ಷ ಯಾರಾಗಬೇಕೆಂದು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.
Health Tips: ಈರುಳ್ಳಿ ತಿಂದಾಗ ಬಾಯಿ ವಾಸನೆ ಬರುತ್ತಾ..? ನಿವಾರಣೆಗೆ ಹೀಗೆ ಮಾಡಿ
ಬಳಿಕ ಒಮ್ಮತದ ಅಭ್ಯರ್ಥಿ ಆಯ್ಕೆ ಬಳಿಕ ಲಕ್ಷ್ಮಣ ಸವದಿ, ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೆಸರು ಘೋಷಣೆ ಮಾಡಲಿದ್ದಾರೆ. ಕಣದಲ್ಲಿ ಅಭ್ಯರ್ಥಿಗಳಿದ್ದರೆ ಚುನಾವಣೆ, ಇಲ್ಲವಾದರೆ ಅವಿರೋಧ ಆಯ್ಕೆ ಘೋಷಣೆ ಮಾಡಲಿದ್ದಾರೆ. ಉಳಿದ ಒಂದೇ ವರ್ಷಕ್ಕೆ ಅವಧಿಗೆ ಚುನಾವಣೆಯಿದ್ರೂ ತೀವ್ರ ಪೈಪೋಟಿ ಇದ್ದು ತೀವ್ರ ಪೈಪೋಟಿ ಇದ್ರೂ ಅಧ್ಯಕ್ಷರನ್ನ ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಮಂತ್ರಿ ಸ್ಥಾನಕ್ಕೆ ಸಮನಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಅತಿದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಪಡೆದಿದ್ದು 40 ಲಕ್ಷಕ್ಕೂ ಅಧಿಕ ರೈತರ ಆರ್ಥಿಕತೆ ಮೇಲೆ ಬ್ಯಾಂಕ್ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಹೊಸ ಅಧ್ಯಕ್ಷರ ಜವಾಬ್ದಾರಿ ಶಾಸಕ ಬಾಲಚಂದ್ರ ಜಾರಕೊಹೊಳಿ, ಲಕ್ಷ್ಮಣ ಸವದಿ, ರಮೇಶ ಕತ್ತಿ ಹೆಗಲಿಗೆ ವಹಿಸಲಾಗಿದ್ದು ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಜಾರಕೊಹೊಳಿ ಬ್ರದರ್ಸ್, ಮಹಾಂತೇಶ ದೊಡಗೌಡರ ಪರವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಈ ಇಬ್ಬರ ಗುದ್ದಾಟ ಮಧ್ಯೆ ಸುಭಾಷ ಡವಳೇಶ್ವರ ಲಾಭ ಪಡೆಯುವ ಸಾಧ್ಯತೆ ಇದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಬ್ಯಾಂಕ್ ನಿರ್ದೇಶಕರ ಜಮಾವನೆ ಆಗುತ್ತಿದ್ದು ಬೆಳಗಾವಿಯ ಸಂಕಮ್ ಹೋಟೆಲ್ನಲ್ಲಿ ನಿರ್ದೇಶಕರು ಜಮಾವನೆ ಆಗುತ್ತಿದ್ದಾರೆ. ಒಂದೇ ವಾಹನದಲ್ಲಿ ಆಗಮಿಸಿದ ಅಧ್ಯಕ್ಷ ಸ್ಥಾನದ ಆಕಾಂಕ್ಷೆಗಳಾದ ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ದೊಡ್ಡಗೌಡರ ಆಗಮಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ.