ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ಕಾರಣದಿಂದ ಹೋಟೆಲ್ನಲ್ಲಿ ಉಳಿಯುವ ಸಂದರ್ಭ ಬಂದೇ ಬರುತ್ತದೆ. ಎಲ್ಲಾದರೂ ಟ್ರಿಪ್ಗೆ ಹೋಗುವಾಗ, ಒಂದು ದಿನ ಔಟಿಂಗ್ ಹೋಗಲು ಪ್ಲ್ಯಾನ್ ಮಾಡಿದ್ದರೆ ನೀವು ಹೋಟೆಲ್ನಲ್ಲಿ ಉಳಿದುಕೊಳ್ಳುತ್ತೀರಿ, ಹಾಗೆ ನೀವು ಹೋಟೆಲ್ಗೆ ಹೋದಾಗ ರೂಂನಲ್ಲಿ ಗಮನಿಸಬೇಕಾದ ಕೆಲವು ವಿಷಯಗಳ ಕುರಿತು ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.
ಚಳಿಗಾಲದಲ್ಲಿ ಅಲೋವೆರಾ ಜೆಲ್ ತಲೆಗೆ ಹಚ್ಚಿಕೊಳ್ಳಬಾರದ!? ಗೊಂದಲ ಬಿಡಿ ಉತ್ತರ ತಿಳಿಯಿರಿ!
ನೀವು ಹೋಟೆಲ್ಗೆ ಹೋದರೆ ಮೊದಲು ಬೆಡ್, ಬೆಡ್ಶೀಟ್ ಸರಿ ಇದೆಯೇ, ಬಾತ್ರೂಂ ನೀಟ್ ಆಗಿದೆಯೇ, ಕೋಣೆಯ ಡೋರ್ಗಳ ಬಗ್ಗೆ ಯೋಚನೆ ಮಾಡ್ತೀರಿ ಆದರೆ ಇವೆಲ್ಲವನ್ನೂ ಹೊರತುಪಡಿಸಿ ನೀವು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ವಸ್ತುಗಳಿವೆ
ಇತ್ತೀಚೆಗೆ ಲಾಡ್ಜ್, ಹೋಟೆಲ್ಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿರೋ ಸುದ್ದಿಯನ್ನು ನಾವೆಲ್ಲಾ ನೋಡಿರುತ್ತೇವೆ. ಈ ಬಗ್ಗೆ ಹಲವಾರು ವಿಡಿಯೋಗಳು, ಫೋಟೋಗಳು ವೈರಲ್ ಆಗಿತ್ತು. ಇದೀಗ ಇಂತಹದ್ದೇ ಬೆಚ್ಚಿಬೀಳಿಸುವ ಸುದ್ದಿಯೊಂದು ವೈರಲ್ ಆಗುತ್ತಿದೆ ನೋಡಿ. ಗಗನಸಖಿಯೊಬ್ಬರುಲಾಡ್ಜ್ ಎಸಿ ಬಗ್ಗೆ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಗಗನಸಖಿಯೊಬ್ಬರು ಇದೀಗ ಲಾಡ್ಜ್ವೊಂದರ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ. ಇದರಲ್ಲಿ ಲಾಡ್ಜ್, ಹೋಟೆಲ್ಗಳಿಗೆ ಹೋಗಿ ಎಸಿ ಆನ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ. ಹಾಗಿದ್ರೆ ಅಷ್ಟಕ್ಕೂ ಈಕೆ ಹೀಗೆ ಹೇಳಿದ್ದೇಕೆ? ಲಾಡ್ಜ್ ಎಸಿಗಳಲ್ಲಿ ಏನಿರುತ್ತೆ? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಅನೇಕ ಬಾರಿ, ಹೋಟೆಲ್, ಲಾಡ್ಜ್ಗಳಲ್ಲಿ ಅನೇಕ ಅಪರಾಧಗಳು ನಡೆಯುತ್ತಲೇ ಇರುತ್ತದೆ ಮತ್ತು ಇತ್ತೀಚೆಗೆ ಕೆಲವು ಕಡೆಗಳಲ್ಲಿ ಹೋಟೆಲ್ ಸಿಬ್ಬಂದಿಗಳೇ ಈ ಕ್ರೈಮ್ಗಳಲ್ಲಿ ತೊಡಗಿದ್ದಾರೆ. ರೂಮ್ಗಳಲ್ಲಿ, ಬಾತ್ರೂಮ್ಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸುತ್ತಿದ್ದಾರೆ. ಇದರಿಂದ ಅತಿಥಿಗಳ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಬಹುದು. ಈ ವಿಡಿಯೋ ಇಟ್ಟುಕೊಂಡು ನಂತರ ಅವರನ್ನು ಬ್ಲ್ಯಾಕ್ಮೇಲ್ ಮಾಡುತ್ತಾರೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುತ್ತಾರೆ. ಇತ್ತೀಚೆಗಷ್ಟೇ ಗಗನಸಖಿಯೊಬ್ಬಳು ಲಾಡ್ಜ್ನಲ್ಲಿ ತಂಗಿದಾಗ ಇದೇ ರೀತಿಯ ಘಟನೆ ನಡೆದಿದ್ದು, ಅದನ್ನು ನೋಡಿ ಎಲ್ಲರು ಬೆಚ್ಚಿಬಿದ್ದಿದ್ದಾರೆ. ಹೌದು, ಈ ಗಗನಸಖಿ ತಾನು ಉಳಿದುಕೊಂಡಿದ್ದ ರೂಮ್ನ ಎಸಿಯಲ್ಲಿ ಲೈಟ್ ಉರಿಯುತ್ತಿರುವುದನ್ನು ನೋಡಿದ್ದಾಳೆ.
2021 ರಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಟಿಕ್ಟಾಕ್ನಲ್ಲಿ @nik.alisa ಎಂಬ ಹೆಸರಿನ ಗಗನಸಖಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಆ ಸಮಯದಲ್ಲಿ ಭಾರೀ ಸದ್ದು ಮಾಡಿತ್ತು ಮತ್ತು ಇಂದಿಗೂ ವೈರಲ್ ಆಗುತ್ತಿದೆ.
2021 ರಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಟಿಕ್ಟಾಕ್ನಲ್ಲಿ @nik.alisa ಎಂಬ ಹೆಸರಿನ ಗಗನಸಖಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಆ ಸಮಯದಲ್ಲಿ ಭಾರೀ ಸದ್ದು ಮಾಡಿತ್ತು ಮತ್ತು ಇಂದಿಗೂ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು @NikitaNikAziz ಹೆಸರಿನ ಟ್ವಿಟರ್ ಖಾತೆಯಲ್ಲೂ ಪೋಸ್ಟ್ ಮಾಡಲಾಗಿದೆ. ಇನ್ನು ಈಕೆ ಮಲೇಷಿಯನ್ ಏರ್ಲೈನ್ಸ್ನಲ್ಲಿ ಕೆಲಸ ಮಾಡುತ್ತಾಳೆ.
ಇನ್ನು ಈಕೆ ಆಗಾಗ ವಿಡಿಯೋ ಮೂಲಕ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಜನರಿಗೆ ಹೇಳುತ್ತಾ ಇರುತ್ತಾಳೆ. ಈಕೆ 2021 ರಲ್ಲಿ ಮಾಡಿದ ವಿಡಿಯೋ ಕೊರಿಯಾದ ವಿಮಾನದ ನಿಲುಗಡೆ ಸಮಯದಲ್ಲಿ ಹೋಟೆಲ್ನಲ್ಲಿ ಉಳಿದುಕೊಂಡ ಅನುಭವದ ಬಗ್ಗೆಯಾಗಿದೆ. ಅಲಿಸಾ ಕೊರಿಯಾದ ಹೋಟೆಲ್ನಲ್ಲಿ ತಂಗಿದ್ದರು. ಆ ಸಂದರ್ಭದಲ್ಲಿ ಕತ್ತಲೆ ಆವರಿಸಿಕೊಂಡಿದ್ದ ರೂಮಿನ ಎಸಿಯಲ್ಲಿ ಲೈಟ್ ಒಂದು ಉರಿಯುತ್ತಿರುವುದನ್ನು ಅಲಿಸಾ ಗಮನಿಸಿದ್ದಾರೆ
ಆದ್ರೆ ಎಸಿಯಲ್ಲಿ ಈ ರೀತಿಯ ಲೈಟನ್ನು ಆಕೆ ಎಂದೂ ಕಂಡಿರಲಿಲ್ಲ. ಅಲಿಸಾ ಇದನ್ನು ತಕ್ಷಣ ವಿಡಿಯೋ ಮಾಡಿದ್ದಾರೆ. ಎಸಿಯೊಳಗೆ ರಹಸ್ಯ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ಅಲಿಸಾ ಶಂಕಿಸಿದ್ದಾರೆ. ಆ ಬಳಿಕ ತಕ್ಷಣ ಹೋಟೆಲ್ ಸಿಬ್ಬಂದಿಗೆ ಕರೆ ಮಾಡಿ, ಅಲ್ಲಿನ ಪೊಲೀಸರನ್ನೂ ಕರೆದಿದ್ದಾಳೆ. ಅಲ್ಲಿಗೆ ತಲುಪಿದ ತಂಡ ಎಸಿಯಲ್ಲಿ ಲೈಟ್ ಉರಿಯುತ್ತಿರುವುದನ್ನು ಖಚಿತಪಡಿಸಿದೆ. ಇದನ್ನು ನೋಡಿ ಅಲ್ಲಿದ್ದವರು ಶಾಕ್ ಆಗಿದ್ದಾರೆ
ಪೊಲೀಸ್ ತನಿಖೆಯಲ್ಲಿ ಎಸಿಯೊಳಗೆ ಕ್ಯಾಮೆರಾ ಅಡಗಿರುವುದು ದೃಢಪಟ್ಟಿದೆ. ಇದು ಸಿಸಿಟಿವಿ ಕ್ಯಾಮೆರಾ ಎನ್ನಲಾಗಿದೆ.