ಬೆಂಗಳೂರು: ಗ್ಯಾರಂಟಿ ಸ್ಕೀಂನಿಂದ ಬರಿದಾಗ್ತಿರೊ ಬೊಕ್ಕಸಕ್ಕೆ ಮಧ್ಯಪ್ರಿಯರು ಸರ್ಕಾರಕ್ಕೆ ಗುಡ್ ನ್ಯೂಸ್ ನೀಡ್ತಿದಾರೆ. ಯಾಕೆಂದ್ರೆ ರಾಜ್ಯದಲ್ಲಿ ಬಿಯರ್ ಗೆ ಎಲ್ಲೆಲ್ಲದ ಡಿಮ್ಯಾಂಡ್ ಶುರುವಾಗಿದೆ. ಇದರ ಜೊತೆಗೆ ಲಿಕ್ಕರ್ ಸೇಲ್ ಫುಲ್ ಸಹ ಜೋರಿದೆ. ಇದ್ರಲ್ಲಿ ರಾಜಧಾನಿ ಯದ್ದೇ ಸಿಂಹಪಾಲು. ಈ ಕುರಿತು ರಿಪೋರ್ಟ್ ಇಲ್ಲಿದೆ. ಹೌದು..ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರಕ್ಕೆ ಬಿಯರ್ ಪ್ರಿಯರು ಫೈನಾನ್ಸಿಯಲ್ ಬೂಸ್ಟರ್ ಡೋಸ್ ನೀಡಿದ್ದಾರೆ.
ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೆ, ಇದರಿಂದ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆಗೆ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಆದ್ದರಿಂದ ಸರ್ಕಾರ ಪ್ರಮುಖ ಆದಾಯದ ಮೂಲವಾದ ಮದ್ಯದ ದರವನ್ನು ಹೆಚ್ಚಳ ಮಾಡಿ ಮಾರಾಟ ಹೆಚ್ಚಳಕ್ಕೆ ಟಾಸ್ಕ್ ನೀಡಿತ್ತು. ಮೊದಲು ಮದ್ಯದ ದರ ಹೆಚ್ಚಳದಿಂದಾಗಿ ದೂರ ಉಳಿದಿದ್ದ ಮದ್ಯಪ್ರಿಯರು ಚಳಿಗಾಲ ಆರಂಭವಾಗುತ್ತಿದ್ದಂತೆ ಹೆಚ್ಚಿನ ಮದ್ಯ ಸೇವನೆಗೆ ಮುಂದಾಗಿದ್ದಾರೆ.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಈ ಹಿನ್ನೆಯಲ್ಲಿ ನವೆಂಬರ್ನಲ್ಲಿ ಬಿಯರ್ ಮಾರಾಟ ಪ್ರಮಾಣ ಹೆಚ್ಚಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಮದ್ಯಪ್ರಿಯರು ಆರ್ಥಿಕವಾಗಿ ಕೈ ಜೋಡಿಸಿದ್ದಾರೆ.ರಾಜ್ಯದಲ್ಲಿ ವರ್ಷಾಂತ್ಯದ ವೇಳೆ ಬಿಯರ್, ಲಿಕ್ಕರ್ ಸೇಲ್ ಜೋರಿರುತ್ತೆ. ಮಧ್ಯಪ್ರಿಯರು ಡ್ರಿಂಕ್ಸ್ ಮಾಡ್ತಾ ನ್ಯೂ ಇಯರ್ ವೆಲ್ ಕಮ್ ಮಾಡ್ತಾರೆ. ಆದರೆ ಈ ವರ್ಷದ ಹೊಸ ವರುಷ ಬರುವ ಮುನ್ನವೇ ಬಿಯರ್, ಹಾಟ್ ಡ್ರಿಂಕ್ಸ್ ಸೇಲ್ ಹೆಚ್ಚಾಗಿದೆ. ಚಳಿಗಾಲ ಶುರುವಾಗ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ ಬಂದಿದೆ.
ಕಳೆದ ಮೂರು ತಿಂಗಳ ಹಿಂದೆ ಮದ್ಯದ ದರವನ್ನು ಹೆಚ್ಚಳ ಮಾಡಿದ್ದರಿಂದ ಸರ್ಕಾರದ ತೀರ್ಮಾನ ವಿರೋಧಿಸಿದ ಮಧ್ಯಪ್ರಿಯರು ಮದ್ಯ ಸೇವನೆ ಪ್ರಮಾಣವನ್ನು ತಗ್ಗಿಸಿದ್ದರು. ಆದರೆ, ಈಗ ಚಳಿಗಾಲ ಆರಂಭವಾಗುತ್ತಿದ್ದಂತೆ ದರ ಏರಿಕೆಯನ್ನು ಮರೆತು ಈಗ ಮದ್ಯ ಸೇವನೆಗೆ ಮುಂದಾಗಿದ್ದಾರೆ. ಅದರಲ್ಲಿಯೂ ಬಿಯರ್ ಸೇವನೆ ಮಾಡುವವರ ಸಂಖ್ಯೆ ಅತ್ಯಧಿಕವಾಗಿ ಏರಿಕೆ ಆಗುತ್ತಿದೆ. ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷದ ನವೆಂಬರ್ನಲ್ಲಿ ಬರೋಬ್ಬರಿ 6 ಲಕ್ಷ ಬಿಯರ್ ಬಾಕ್ಸ್ಗಳು ಹೆಚ್ಚಾಗಿ ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ಕಳೆದ ಮೂರು ತಿಂಗಳಿಂದ ಮದ್ಯ ಪ್ರಿಯರು ಪ್ರತಿ ತಿಂಗಳು ಸರ್ಕಾರದ ಖಜಾನೆ ತುಂಬಿಸ್ತಿದಾರೆ. ಬಿಯರ್ ಸೇಲ್ನಿಂದ ಅಬಕಾರಿ ಇಲಾಖೆಗೆ ಆದಾಯ ಹೆಚ್ಚಾಗುತ್ತಿದೆ. ಕಳೆದ ಎಂಟು ತಿಂಗಳಿನಿಂದ ಶೇ.15.58 ರಷ್ಟು ಹೆಚ್ಚುವರಿ ಬಿಯರ್ ಮಾರಾಟ ಆಗುತ್ತಿದೆ. ನವೆಂಬರ್ ತಿಂಗಳಲ್ಲೇ ಬಿಯರ್ ಶೇ.17ರಷ್ಟು ಮಾರಾಟ ಹೆಚ್ಚಳವಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 29.95 ಲಕ್ಷ ಬಾಕ್ಸ್ ಮಾರಾಟ ಆಗಿತ್ತು.
ಆದರೆ, ಈ ವರ್ಷ ನವೆಂಬರ್ ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ. ಈ ಮೂಲಕ ಕಳೆದ ವರ್ಷದ ನವೆಂಬರ್ಗೆ ಹೋಲಿಕೆ ಮಾಡಿದಲ್ಲಿ 6 ಲಕ್ಷ ಬಿಯರ್ ಬಾಕ್ಸ್ ಮಾರಾಟ ಹೆಚ್ಚಳವಾಗಿದೆ.ದರ ಏರಿಕೆಯ ನಡುವೆಯೂ ಮಧ್ಯ ಮಾರಾಟ ಈ ವರ್ಷ ಹೆಚ್ಚಾಗಿದೆ. ಬಿಯರ್ ಮಾತ್ರವಲ್ಲ ಜೊತೆಗೆ ಇತರೆ ಲಿಕ್ಕರ್ ಮಾರಾಟದಲ್ಲೂ ಹೆಚ್ಚಳ ಆಗಿದೆ. ನವೆಂಬರ್ ನಲ್ಲಿ ಲಿಕ್ಕರ್ ಶೇ. 0.43 ಮಾರಾಟ ಹೆಚ್ಚಳ ಆಗಿದೆ.
ತಿಂಗಳು ಬಿಯರ್ ಲಿಕ್ಕರ್(MSIL) ಮಾರಾಟ
ಏಪ್ರಿಲ್ ಶೇ. 4.75 – ಶೇ. 1.49
ಮೇ ಶೇ. 10 – ಶೇ. 7.20
ಜೂನ್ ಶೇ. 26.84 – ಶೇ. 3.99
ಜುಲೈ ಶೇ. 26.81 – ಶೇ. 20.64
ಆಗಸ್ಟ್ ಶೇ. 21.40 – ಶೇ.6.84
ಸೆಪ್ಟೆಂಬರ್ ಶೇ. 3.54 – ಶೇ. 0.24
ಅಕ್ಟೋಬರ್ ಶೇ.19.85 – ಶೇ. 0.03
ನವೆಂಬರ್ ಶೇ. 17.03 – ಶೇ.0.43
ಇನ್ನು ರಾಜ್ಯ ಸರ್ಕಾರದಿಂದ 2023-24ರಲ್ಲಿ ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ರೂ. ಆದಾಯ ಸಂಗ್ರಹಣೆಗೆ ಟಾರ್ಗೆಟ್ ನೀಡಲಾಗಿದೆ. ಈಗ ಕಳೆದ ಎಂಟು ತಿಂಗಳಿನಲ್ಲಿ ಬರೋಬ್ಬರಿ 22,500 ಕೋಟಿ ಆದಾಯ ಸಂಗ್ರಹವಾಗಿದೆ.ಪ್ರತಿ ಬಾರಿ ಸರ್ಕಾರದ ಆದಾಯ ಹೆಚ್ಚಿಸುವ ಕಾರ್ಯವನ್ನು ಮಧ್ಯಪ್ರಿಯರು ನಿಯಮಿತವಾಗಿ ಮಾಡ್ತಿದಾರೆ. ಹೊಸ ವರುಷ ಬರುವ ಮುನ್ನವೇ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ ಹರಿದುಬರ್ತಿದೆ.