ನ್ಯೂಯಾರ್ಕ್:- ಅಮೇರಿಕಾದ ಖ್ಯಾತ ಉದ್ಯಮಿಯೋರ್ವರು ಹಸುಗಳಿಗೆ ಬಿಯರ್ ಕುಡಿಸಿದ್ದಾರೆ. ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹಸುಗಳಿಗೆ ಬಿಯರ್ ಕುಡಿಸುತ್ತಿರುವ ಇನ್ಸ್ಟಾಗ್ರಾಂ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಈ ಸಂಗತಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಸಂಘಟನೆಯ ಗಮನಕ್ಕೂ ಬಂದಿದ್ದು, ಜುಕರ್ಬರ್ಗ್ ವಿರುದ್ಧ ವಾಗ್ದಾಳಿ ನಡೆಸಿದೆ.
ಅಮೆರಿಕದ ಕೌಲೋವಾ ರಾಂಚ್ ಏರಿಯಾದಲ್ಲಿ ಜಾನುವಾರುಗಳನ್ನು ಸಾಕುತ್ತಿರುವ ಕುರಿತು ಇತ್ತೀಚೆಗಷ್ಟೇ ಜುಕರ್ಬರ್ಗ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಹಸುಗಳಿಗೆ ಮಕಾಡಾಮಿಯಾ ಬೀಜಗಳು ಮತ್ತು ಬಿಯರ್ ಕುಡಿಸುತ್ತಿರುವ ದೃಶ್ಯಗಳಿದ್ದವು.
ಈ ಫೋಟೋಗಳು ತಮ್ಮ ಗಮನಕ್ಕೆ ಬರುತ್ತಿದ್ದಂತೆ ಜುಕರ್ ಬರ್ಗ್ ನಡೆಯನ್ನು PETA ಖಂಡಿಸಿದೆ. ಪ್ರಾಣಿಗಳಿಗೆ ಉತ್ಪಾದಕವಲ್ಲದ ಊಟವನ್ನು ನೀಡುತ್ತಿರುವುದನ್ನು ಟೀಕಿಸಿದೆ. ಟೆಕ್ನಾಲಜಿಗೆ ಮಾತ್ರ ನೀವು ಸೀಮಿತರಾಗಿ, ಪ್ರಾಣಿಗಳನ್ನು ಒಳಗೊಂಡಿರುವ ಯಾವುದೇ ಪ್ರಾಜೆಕ್ಟ್ನಲ್ಲಿ ನಿಮ್ಮ ತೊಡಗಿಸಕೊಳ್ಳಬೇಡಿ ಎಂದು ಜುಕರ್ಬರ್ಗ್ಗೆ PETA ಕೇಳಿದೆ. ಪ್ರಾಣಿಗಳನ್ನು ಕೊಲ್ಲುವ ಈ ಪ್ರಾಜೆಕ್ಟ್, ನಮ್ಮ ಗ್ರಹ ಮತ್ತು ನಿಮ್ಮ ಮಕ್ಕಳಿಗೆ ಆಘಾತಕಾರಿಯಾಗಿದೆ ಎಂದು PETA ಕಳವಳ ವ್ಯಕ್ತಪಡಿಸಿದೆ.