ಬೆಂಗಳೂರು: ಆತ ಮೂರು ವರ್ಷದಿಂದ ಯುವತಿಯೋರ್ವಳನ್ನ ಪ್ರೀತಿಸ್ತಿದ್ದ..ಆದ್ರೆ ಮಧ್ಯದಲ್ಲಿ ಗಲಾಟೆಯಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು..ಆವತ್ತಿಂದ ಸುಮ್ಮನಿದ್ದವನಿಗೆ ಹೊಸವರ್ಷ ಆಕೆಯನ್ನ ಮರಳಿ ಕೊಡಬಹುದು ಅಂದುಕೊಂಡಿದ್ದ..ಕರೆ ಮಾಡಿ ಮತ್ತೆ ಜೊತೆಯಾಗು ಅಂದಿದ್ದ..ಆದ್ರೆ ಆಕೆಯ ನಿರ್ಧಾರ ಈತನನ್ನ ಸಾವಿನ ಮನೆ ಸೇರುವಂತೆ ಮಾಡಿದೆ.
ಹೌದು..ಸತೀಶ್ ಬೆಳ್ಳಂದೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ…ತಂದೆ ತಾಯಿಗೆ ಒಬ್ಬನೇ ಮಗ..ಬಾಣಸವಾಡಿಯ ಕನಕದಾಸ ಲೇಔಟ್ ನಲ್ಲಿ ವಾಸವಾಗಿದ್ದ..ಜನವರ 2 ಅಂದ್ರೆ ನಿನ್ನೆ ಸಂಜೆ ಸ್ವಲ್ಪ ಸುಸ್ತಾಗ್ತಿದೆ ಅಂತಾ ರೂಮಿಗೆ ಹೋದವನಿಗೆ ಅದ್ಯಾವ ನೆನಪು ಕಾಡಿತ್ತೋ ಏನೊ..ರೂಮಿನಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..ಇವನ ಈ ನಿರ್ಧಾರಕ್ಕೆ ಕಾರಣ ಈತನ ಪಕ್ಕದಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿರೊ ಇದೇ ಯುವತಿ ಅನ್ನೋದೇ ನಿಜಕ್ಕೂ ವಿಪರ್ಯಾಸ..
ಹೌದು ಸತೀಶ್ ಮತ್ತು ಯುವತಿ ಒಂದೇ ಕಾಲೇಜಿನಲ್ಲಿ ಓದ್ತಾ ಇದ್ರು ಆದ್ರೆ ಬ್ರಾಂಚ್ ಮಾತ್ರ ಬೇರೆ ಬೇರೆಯಾಗಿತ್ತು..ಒಂದೇ ಹಾಲ್ ನಲ್ಲಿ ಪರೀಕ್ಷೆ ಬರೆಯುವ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿದ್ದು..ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು..ಮೂರು ವರ್ಷದಿಂದ ಇಬ್ಬರು ಪ್ರೀತಿಯಲ್ಲಿದ್ದರು..
ಚಳಿಗಾಲದಲ್ಲೇ ಏಕೆ ಜಾಸ್ತಿ ಸೆಕ್ಸ್ ಮಾಡಬೇಕು ಅನಿಸುತ್ತೆ ಗೊತ್ತಾ..? ಇದಕ್ಕೆ ಕಾರಣ ಇಲ್ಲಿದೆ ನೋಡಿ
ಆದ್ರೆ ಪ್ರೀತಿ ವಿಚಾರ ಯುವತಿ ಮನೆಯವರಿಗೆ ಗೊತ್ತಾಗ್ತಿದ್ದಂತೆ ವಿರೋಧ ವ್ಯಕ್ತ ಪಡಿಸಿದ್ರು.ಅಷ್ಟೇ ಅಲ್ಲ ಕಳೆದ ನಾಲ್ಕೈದು ತಿಂಗಳ ಹಿಂದೆ ಇಂದಿರಾನಗರ ಪೊಲೀಸ್ ಠಾಣೆಗೆ ತೆರಳಿ ಸತೀಶ್ ವಿರುದ್ಧ ದೂರು ನೀಡಿದ್ರು..ಯುವತಿಯನ್ನ ಫಾಲೋ ಮಾಡಿ ಪೀಡಿಸ್ತಿರೋದಾಗಿ ಆರೋಪಿಸಿದ್ರು..ಠಾಣೆಗೆ ಕರೆಸಿಕೊಂಡಿದ್ದ ಇನ್ಸ್ ಪೆಕ್ಟರ್ ಬುದ್ಧಿ ಹೇಳಿ ಯುವತಿ ತಂಟೆಗೆ ಹೋಗದಂತೆ ವಾರ್ನ್ ಕೂಡ ಮಾಡಿದ್ರು..
ಅಂದಿನಿಂದ ಸುಮ್ಮನಿದ್ದ ಸತೀಶ್ 2025 ರ ಹೊಸ ವರ್ಷ ಜೀವನದಲ್ಲಿ ಹೊಸಬೆಳಕು ತರಬಹುದು ಅಂದುಕೊಂಡಿದ್ದ ಮತ್ತೆ ಯುವತಿಯನ್ನ ಡಿಸಂಬರ್ 31 ರಿಂದ ನಿರಂತರವಾಗಿ ಸಂಪರ್ಕ ಮಾಡಿದ್ದಾನೆ..ಯುವತಿ ಮತ್ತೆ ಒಂದಾಗಬಹುದು ಅಂತಾ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ..ಯಾಕಂದ್ರೆ ಆಕೆಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಮಡ್ತಿದ್ದ..ಆದ್ರೆ ಈತನ ಮಾತಿಗೆ ಆಕೆಯಿಂದ ಬಂದ ಉತ್ತರ ಮಾತ್ರ ನೋ ಆಗಿತ್ತು..
ಇದರಿಂದ ನೊಂದಿದ್ದ ಸತೀಶ್ ಜನವರಿ 2 ರಂದು ಸಂಜೆ ಮನೆಗೆ ಬಂದು ತಾಯಿ ಬಳಿ ಯಾಕೊ ತುಂಬಾ ಬೇಜಾರಾಗ್ತಿದೆ..ರೆಸ್ಟ್ ಮಾಡ್ತಿನಿ ಅಂತಾ ಹೇಳಿ ರೂಮಿಗೆ ಹೋಗಿದ್ದ..ಆದ್ರೆ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಅದೇನೆ ಹೇಳಿ ಪ್ರೀತಿ ನಿರಾಕರಣೆಗೆ ಸಾವು ಒಂದೇ ಪರಿಹಾರವಲ್ಲ..ಇದ್ದು ಕಾದಿದ್ದಿದ್ರೆ ಆಕೆ ಮತ್ತೆ ಇವನ ಜೀವನದಲ್ಲಿ ಬರ್ತಿದ್ಳೋ ಏನೋ..ಆದ್ರೆ ದುಡುಕಿನ ಒಂದು ನಿರ್ಧಾರ ಇಡೀ ಕುಟುಂಬವನ್ನೇ ದುಃಖಕ್ಕೆ ದೂಡಿದೆ.