ಚಳಿಗೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ತುಂಬಾನೇ ಕಷ್ಟ ಅನ್ನೋದು ನಿಮಗೆ ಗೊತ್ತಿರುತ್ತೆ. ಹಾಗಾಗಿ ಪ್ರತಿಯೊಬ್ಬರೂ ಬಿಸಿ ನೀರನ್ನೇ ಬಳಸುತ್ತಾರೆ. ಕೆಲವರು ಗ್ಯಾಸ್ನಲ್ಲಿ ನೀರನ್ನು ಕಾಯಿಸಿದರೆ ಇನ್ನೂ ಕೆಲವರು ಕಬ್ಬಿಣದ ಹೀಟರ್ ಅನ್ನು ಬಳಸುತ್ತಾರೆ. ಇನ್ನೂ ಕೆಲವರು ಸೋಲಾರ್ ಹೀಟರ್ ಬಳಸಿದ್ರೆ ಇನ್ನೂ ಕೆಲವರು ಗೀಸರ್ ಬಳಸುತ್ತಾರೆ.
PAN CARD: ಮನೆಯಲ್ಲೇ ಕೂತು ಹೊಸ ಪಾನ್ ಕಾರ್ಡ್ ಪಡೆಯಿರಿ: ಇದು ಹೇಗೆ ಗೊತ್ತಾ!?
ಎಲೆಕ್ಟ್ರಿಕ್ ಗೀಸರ್ ಬಳಸುವಾಗ ಕೆಲವು ತಪ್ಪುಗಳು ಆಗುವುದು ಸಾಮಾನ್ಯ. ಆದರೆ ಅವು ಗಂಭೀರ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಅದರ ಕಡೆ ಗಮನ ಹರಿಸದಿದ್ದರೆ ಅಪಘಾತಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಸ್ಫೋಟಗಳು ಸಂಭವಿಸಬಹುದು.
ಗೀಸರ್ ಬಳಸುವಾಗ ತುಂಬಾ ಜಾಗ್ರತೆ ಇರಬೇಕು. ಇಲ್ಲದಿದ್ದರೆ ಇದು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗಾಗಿ ಗೀಸರ್ ಬಳಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿದುಕೊಳ್ಳೋಣ.
ಈಗಿನ ಕಾಲದಲ್ಲಂತೂ ಹೆಚ್ಚಿನವರ ಮನೆಯಲ್ಲಿ ಗೀಸರ್ ಇದೆ. ಸ್ವಿಚ್ ಹಾಕಿದ್ರೆ ಸಾಕು ಸ್ನಾನ ಮಾಡಲು ಬಿಸಿ ಬಿಸಿ ನೀರು ಬಂದು ಬಿಡುತ್ತದೆ. ಚಳಿಗಾಲದಲ್ಲಂತೂ ಹೆಚ್ಚಿನವರು ಗೀಸರ್ನ್ನು ಬಳಸುತ್ತಾರೆ.
ಗೀಸರ್ ಬಳಕೆ ಸುರಕ್ಷಿತವೆಂದು ಹೇಳಲಾಗುವುದರಿಂದ ಹೆಚ್ಚಿನವರು ಗೀಸರ್ ಬಳಸುವಾಗ ಸ್ವಲ್ಪ ಅಜಾಗರೂಕತೆಯಿಂದಿರುತ್ತಾರೆ. ಆದರೆ ನಿಮಗೆ ಗೊತ್ತಾ ಗೀಸರ್ ಬಳಕೆಯಲ್ಲಿ ಅಜಾಗರೂಕತೆ ತೋರಿಸಿದರೆ ಗೀಸರ್ ಸ್ಫೋಟವಾಗುವ ಸಾಧ್ಯತೆಯೂ ಇದೆ.
ಗೀಸರ್ ಆನ್ನಲ್ಲಿ ಇಡಬೇಡಿ:
ತುಂಬಾ ಜನ ಗೀಸರ್ ಆನ್ ಮಾಡಿದ ಮೇಲೆ ಅದನ್ನ ಹಾಗೇ ಬಿಟ್ಟುಬಿಡ್ತಾರೆ. ಆದರೆ ಗೀಸರ್ನ್ನು ಹೆಚ್ಚು ಹೊತ್ತು ಆನ್ನಲ್ಲಿ ಇಡಬಾರದು. ಇದರಿಂದ ಗೀಸರ್ ಸ್ಫೋಟಗೊಳ್ಳುವ ಅಪಾಯವಿದೆ. ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ. ಹಾಗಾಗಿ ಅವಶ್ಯಕತೆ ಮುಗಿದ ಮೇಲೆ ಗೀಸರ್ ಆಫ್ ಮಾಡೋದನ್ನ ಮರೀಬಾರದು.
*ಆಫ್ ಮಾಡಿದ ಮೇಲೆ ಮಾತ್ರ ಬಳಸಿ:
ಗೀಸರ್ ಕೊಳ್ಳುವಾಗ ಅದರ ಸ್ಟೋರೇಜ್ ಕೆಪಾಸಿಟಿ ಚೆನ್ನಾಗಿದೆಯಾ ಅಂತ ಮೊದಲೇ ತಿಳಿದುಕೊಳ್ಳಿ. ಇಂಥ ಗೀಸರ್ಗಳು ಮಾರ್ಕೆಟ್ನಲ್ಲಿ ಸಿಗುತ್ತವೆ. ಆದರೆ ತುಂಬಾ ಜನ ಗೀಸರ್ನಲ್ಲಿ ಬಿಸಿನೀರು ಇದ್ದರೂ ಮತ್ತೆ ಗೀಸರ್ ಆನ್ ಮಾಡಿ ಸ್ನಾನ ಮಾಡ್ತಾರೆ. ಇದರಿಂದ ಕರೆಂಟ್ ಶಾಕ್ ಆಗುವ ಅಪಾಯವಿದೆ. ಹಾಗಾಗಿ ಗೀಸರ್ ಆಫ್ ಮಾಡಿದ ಮೇಲೆ ಮಾತ್ರ ಬಿಸಿನೀರನ್ನು ಬಳಸಬೇಕು.
*ಸರ್ಟಿಫೈಡ್ ಕಂಪನಿಯಿಂದ ಮಾತ್ರ ಖರೀದಿಸಿ:
ಮಾರ್ಕೆಟ್ನಲ್ಲಿ ಹೆಚ್ಚಿನ ಬೆಲೆಯಿಂದ ಕಡಿಮೆ ಬೆಲೆಯವರೆಗೆ ಹಲವು ರೀತಿಯ ಗೀಸರ್ಗಳಿವೆ. ಆದರೆ ತುಂಬಾ ಜನ ಕಡಿಮೆ ಬೆಲೆಯ ಗೀಸರ್ಗಳನ್ನು ಬಳಸ್ತಾರೆ. ಆದರೆ ನೀವು ಸುರಕ್ಷಿತವಾಗಿರಬೇಕೆಂದರೆ ಸರ್ಟಿಫೈಡ್ ಕಂಪನಿಯಿಂದ ಮಾತ್ರ ಗೀಸರ್ ಖರೀದಿಸಿ. ಇದರಿಂದ ಅಪಾಯದ ಸಾಧ್ಯತೆ ಕಡಿಮೆ.
*ಸರ್ವಿಸಿಂಗ್ ಪೂರ್ಣಗೊಳಿಸಿ:
ಚಳಿಗಾಲದಲ್ಲಿ ಗೀಸರ್ಗಳನ್ನು ಹೆಚ್ಚಾಗಿ ಬಳಸ್ತಾರೆ. ಹಾಗಾಗಿ ಪ್ರತಿದಿನ ಗೀಸರ್ ಆನ್ ಮಾಡುವ ಮುನ್ನ ಕರೆಂಟ್ ಕನೆಕ್ಷನ್ ಸರಿಯಾಗಿದೆಯಾ ಅಂತ ಪರಿಶೀಲಿಸಿ. ಗೀಸರ್ 45-50 ಡಿಗ್ರಿಗಳ ನಡುವೆ ಇರೋ ಹಾಗೆ ನೋಡಿಕೊಳ್ಳಿ. ಅದೂ ಗೀಸರ್ ಸರ್ವಿಸಿಂಗ್ ಮಾಡಿಸಿದ ನಂತರ.
*ಶಬ್ದಗಳು:
ಕೆಲವೊಮ್ಮೆ ಗೀಸರ್ನಿಂದ ಸ್ನಾನ ಮಾಡುವಾಗ ವಿಚಿತ್ರ ಶಬ್ದಗಳು ಬರುತ್ತವೆ. ಇಂಥವುಗಳನ್ನು ನಿರ್ಲಕ್ಷಿಸಬಾರದು ಎನ್ನುತ್ತಾರೆ ತಜ್ಞರು. ಯಾಕಂದ್ರೆ ಗೀಸರ್ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಮಾತ್ರ ಇಂಥ ಶಬ್ದಗಳು ಬರುತ್ತವೆ.