ರೋಗ ನಿರೋಧಕ ಶಕ್ತಿಯು ನಮ್ಮನ್ನು ಹೆಚ್ಚು ಶಕ್ತಿಶಾಲಿಯಾಗಿಸಲು ಹಾಗೂ ರೋಗಗಳ ವಿರುದ್ಧ ಹೋರಾಡಲು ನಮ್ಮನ್ನು ಶಕ್ತಿಶಾಲಿಯಾಗಿಸುತ್ತದೆ. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಎಂದಾದರೆ ಅದಕ್ಕೆ ತಕ್ಕಂತಹ ಆಹಾರಗಳನ್ನು ನಾವು ಸೇವಿಸಬೇಕಾಗುತ್ತದೆ. ಆದ್ರೆ ನೀವು ಆರೋಗ್ಯವಾಗಿರಲು ಬಯಸುವುದಾದರೆ ಮೊದಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು ಬಹಳ ಮುಖ್ಯ.
ಬ್ಯಾಕ್ಟೀರಿಯಾ, ಪರಾವಲಂಬಿಗಳು ಮತ್ತು ವೈರಸ್ಗಳಿಂದ ಉಂಟಾಗುವ ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ಡಾ ಗೋಯಲ್ ಹೇಳುತ್ತಾರೆ. ವಿವಿಧ ಹಾನಿಕಾರಕ ರೋಗಗಳನ್ನು ಎದುರಿಸಲು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯು ಅತ್ಯಗತ್ಯ. ಕೆಲವು ಆಹಾರಗಳ ಅತಿಯಾದ ಸೇವನೆಯು ರೋಗನಿರೋಧಕ ಶಕ್ತಿಯನ್ನು ನಿಧಾನಗೊಳಿಸುತ್ತದೆ. ಅಂತಹ ಕೆಲವು ಆಹಾರಗಳ ಪಟ್ಟಿ ಇಲ್ಲಿವೆ.
- ಸಕ್ಕರೆ:
ಹೆಚ್ಚಿನ ಸಕ್ಕರೆ ಸೇವನೆಯು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಹಾಗಾಗಿ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
- ಸಂಸ್ಕರಿಸಿದ ಆಹಾರಗಳು:
ಸಂಸ್ಕರಿಸಿದ ಆಹಾರದಲ್ಲಿ ಸೋಡಿಯಂ ಅಂಶ ಅಧಿಕವಾಗಿರುತ್ತದೆ, ಇವು ಅನಾರೋಗ್ಯಕರ ಕೊಬ್ಬನ್ನು ಹೊಂದಿರುವುದರಿಂದ ಕೃತಕ ಸಂರಕ್ಷಕಗಳನ್ನು ಹೊಂದಿರುತ್ತದೆ, ಹಾಗಾಗಿ ಇವು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.
- ಆಲ್ಕೋಹಾಲ್:
ಕೆಲಸದ ನಂತರ ಪ್ರತೀ ರಾತ್ರಿ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರೆ ಅದನ್ನು ಆದಷ್ಟು ಬೇಗ ನಿಲ್ಲಿಸಿ. ಏಕೆಂದರೆ ಹೆಚ್ಚಿನ ಮಟ್ಟದ ಆಲ್ಕೋಹಾಲ್ ಸೇವನೆಯು ಪ್ರತಿರಕ್ಷಣಾ ಕಾರ್ಯವನ್ನು ನಿಗ್ರಹಿಸುತ್ತದೆ, ಇದು ಸೋಂಕುಗಳಿಗೆ ಕಾರಣವಾಗುತ್ತದೆ. ಜೊತೆಗೆ ಇದು ಸೋಂಕಿನ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಡಾ. ಗೋಯಲ್ ಹೇಳುತ್ತಾರೆ.
- ಹುರಿದ ಆಹಾರಗಳು:
ಹುರಿದ ಆಹಾರಗಳ ಅತಿಯಾದ ಸೇವನೆಯಿಂದ ಪ್ರತಿರಕ್ಷಣಾ ಕಾರ್ಯದ ಮೇಲೆ ಪರಿಣಾಮ ಬೀರಬಹುದು, ಜೊತೆಗೆ ಒತ್ತಡ ಮತ್ತು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ.
- ಟ್ರಾನ್ಸ್ ಕೊಬ್ಬುಗಳು ಅಥವಾ ಟ್ರಾನ್ಸ್ ಫ್ಯಾಟ್:
ಫಾಸ್ಟ್ ಫುಡ್ ಮತ್ತು ಬೇಯಿಸಿದ ಆಹಾರದಲ್ಲಿ ಟ್ರಾನ್ಸ್ ಕೊಬ್ಬು ಅಧಿಕವಾಗಿರುತ್ತದೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಈ ಬಗೆಯ ಕೊಬ್ಬಿನ ಆಹಾರಗಳಿಂದ ಯಾವುದೇ ಆರೋಗ್ಯಕರ ಪ್ರಯೋಜನಗಳು ಇರುವುದಿಲ್ಲ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಜೊತೆಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.
- ಅಧಿಕ ಸೋಡಿಯಂ ಆಹಾರಗಳು:
ಸೋಡಿಯಂನ ಹೆಚ್ಚಾಗಿ ಇರುವ ಆಹಾರಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ.
- ಹೆಚ್ಚು ಸಂಸ್ಕರಿಸಿದ ಧಾನ್ಯಗಳು:
ಇವುಗಳಲ್ಲಿ ಪೌಷ್ಠಿಕಾಂಶ ಮತ್ತು ನಾರಿನ ಮೌಲ್ಯಗಳು ಕಡಿಮೆಯಿದ್ದು, ಇದು ಕರುಳಿನ ಮೈಕ್ರೋಬಿಯಾದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹದಗೆಡಿಸುತ್ತದೆ.
- ಅತಿಯಾದ ಕೆಫೀನ್:
ನಿಮ್ಮ ದೇಹದಲ್ಲಿ ಹೆಚ್ಚಿನ ಮಟ್ಟದ ಕೆಫೀನ್ ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇವು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.