ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಮದುವೆ ಹೆಸರಲ್ಲಿ ಮೋಸ ಮಾಡಲು ಗ್ಯಾಂಗ್ ಹೊಂಚು ಹಾಕಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ವಂಚನೆ ಪ್ರಕರಣ: ಐಶ್ವರ್ಯ ಗೌಡ ದಂಪತಿಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್!
ಮದುವೆಯಾಗದ ಪುರುಷರು, ಮಹಿಳೆಯರೇ ಇವರ ಟಾರ್ಗೆಟ್. ಯಾರೆಲ್ಲ ಮದುವೆಗಾಗಿ ಹಂಬಲಿಸುತ್ತಿದ್ದಾರೋ ಅವರ ಬಳಿಗೆ ಬರುವ ಗ್ಯಾಂಗ್ ‘ನಿಮಗೆ ಮದ್ವೆ ಆಗಿಲ್ವಾ..? ನಾವು ಮದುವೆ ಮಾಡಿ ಕೊಡ್ತೇವೆ. ಮೂರು ಲಕ್ಷ ರೂಪಾಯಿ ಕೊಟ್ಟರೆ ಇವತ್ತೇ ಮದುವೆ’ ಎಂದು ನಂಬಿಸುತ್ತೆ. ಅವರನ್ನು ನಂಬಿ ಹಣ ಕೊಟ್ಟರೆ, ರಾತ್ರೋರಾತ್ರಿ ಹಣದ ಜೊತೆಗೆ ಮನೆಯಲ್ಲಿದ್ದ ಚಿನ್ನಾಭರಣವೂ ಮಾಯವಾಗುತ್ತೆ ಹುಷಾರ್.
ಇದೇ ರೀತಿ ಹೇಳಿ ವಂಚಿಸಲು ಪ್ರಯತ್ನಿಸಿದ್ದ ಗ್ಯಾಂಗ್ ಅನ್ನು ರಾಯಬಾಗ ಪೊಲೀಸರು ಲಾಕ್ ಮಾಡಿದ್ದಾರೆ
ಕರ್ನಾಟಕದ ಕೆಲ ಜನರನ್ನು ಸಂಪರ್ಕಿಸಿ ಮದುವೆ ಆಗದೆ ಇರೋರನ್ನೇ ಟಾರ್ಗೆಟ್ ಮಾಡಿದೆ. ಮದುವೆ ಮಾಡಿಸಿ ಕೊಡ್ತೇವೆ ಎಂದು ಮೂರು ಲಕ್ಷ ರೂಪಾಯಿ ಪೀಕಿದೆ. ಮೂರು ಲಕ್ಷ ಹಣ ಪಡೆದ ನಂತರ ಗ್ಯಾಗ್ ರಾತ್ರೋ ರಾತ್ರಿ ಮನೆಯಿಂದ ಎಸ್ಕೇಪ್ ಆಗಿದೆ. ಹಣದ ಜೊತೆಗೆ ಮನೆಯಲ್ಲಿದ್ದ ಬೆಳ್ಳಿ, ಬಂಗಾರ, ಬಟ್ಟೆಗಳನ್ನು ತೆಗೆದುಕೊಂಡು ಪರಾರಿಯಾಗಿದೆ.