ಬೆಂಗಳೂರು: ಗೋಬಿ ಮಂಚೂರಿಯನ್ ಆಯ್ತು ಕಾಟನ್ ಕ್ಯಾಂಡಿದು ಕಥೆ ಮುಗೀತು ಈಗ ಏನಿದ್ದರೂ ಗರಿ ಗರಿ ಕಬಾಬ್ ನದ್ದೇ ಮಾತುಕತೆ.. ಯಾಕೆ ಈಗ ಕಬಾಬ್ ಬಗ್ಗೆ ಮಾತನಾಡುತ್ತಿದ್ದೇವೆ ಅನ್ಕೊಂಡ್ರಾ? ಈ ಸ್ಟೋರಿ ನೋಡಿ.. ಇತ್ತೀಚಿಗೆ ಬಾರಿ ಸುದ್ದಿಯಾದ ವಿಚಾರ ಏನಂದ್ರೆ ಅದು ಗೋಬಿ ಮಂಚೂರಿಯನ್ ಬ್ಯಾನ್ ಎಂಬ ವಿಚಾರ.. ಈಗಾಗಲೇ ಗೋಬಿ ಮಂಚೂರಿಯನ್ ಗೆ ಬಳಸುವಂತಹ ಬಣ್ಣಗಳನ್ನು ಸರ್ಕಾರ ಈಗಾಗಲೇ ಬ್ಯಾನ್ ಮಾಡಿದೆ..
ಆದರೆ ನಾನ್ ವೆಜ್ ಪ್ರಿಯರು ಅದೇ ರೀತಿ ಬಣ್ಣ ಕಟ್ಟಿರುವ ರಾಸಾಯನಿಕ ಅಂಶದಿಂದ ಕೂಡಿರುವ ಕಲರ್ ಕಲರ್ ಕಬಾಬ್ ಗಳನ್ನು ಮಿತಿಯಿಲ್ಲದೆ ಬಳಸುತ್ತಿದ್ದಾರೆ.. ಯೆಸ್.. ಸಾಮಾನ್ಯವಾಗಿ ನಾನ್ ವೆಜ್ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಕಬಾಬ್.. ಅದರಲ್ಲೂ ವಿಶೇಷವಾಗಿ ಕಬಾಬ್ ನಲ್ಲಿ ವೆರೈಟಿ ವೆರೈಟಿ ಕಬಾಬ್ ಗಳಿದೆ.. ಇತ್ತೀಚಿಗೆ ಟ್ರೆಂಡಿಂಗ್ ಆದ ಬೆಳ್ಳುಳ್ಳಿ ಕಬಾಬ್, ಚಿಕನ್ 65, ತಂದೂರಿ ಚಿಕನ್ , ಚಿಕನ್ ಟಿಕ್ಕಾ, ಚಿಕನ್ ಲಾಲಿಪಪ್ ಹೀಗೆ ಹತ್ತು ಹಲವಾರು ವೆರೈಟಿಗಳು ನಾನ್-ವೆಜ್ ಪ್ರಿಯರಿಗೆ ಸಖತ್ ಇಷ್ಟವಾಗುತ್ತೆ..
ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ
ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಏನಪ್ಪಾ ಅಂದ್ರೆ ಈ ಚಿಕನ್ ಗಳಿಗೂ ಕೂಡ ರಾಸಾಯನಿಕ ಕಲರ್ ಗಳನ್ನ ಬಳಕೆ ಮಾಡಲಾಗುತ್ತಿದೆ.. ಜೊತೆಗೆ ಜೀವಕ್ಕೆ ಹಾನಿಕರವಾಗುವ ಎಣ್ಣೆಯನ್ನು ಬಳಸಲಾಗುತ್ತಿದೆ.. ಇನ್ನೂ ಸರ್ಕಾರದಿಂದ ರೆಡ್,ಬ್ಲೂ,ಗ್ರೀನ್, ಯಲ್ಲೋ ಕಲರ್ ಬಳಸದಂತೆ ಮಾರ್ಗಸೂಚಿ ಹೊರಡಿಸಿದೆ. ಹಾಗಾಗಿ ನಮ್ಮಂತ ನಾನ್ ವೆಜ್ ಪ್ರಿಯರಿಗೆ ಆರೋಗ್ಯಕ್ಕೆ ಒಳಿತಾದ ಆಹಾರವನ್ನು ಕೊಡಿ ಈ ರೀತಿ ರಾಸಾಯನಿಕ ಬಣ್ಣಗಳನ್ನು ಬಳಸ್ತಾ ಇದ್ರೆ.
ಅಂತಹ ಕಬಾಬ್ ಅಂಗಡಿಗೆಗಳ ಮೇಲೆ ಕ್ರಮವನ್ನವಹಿಸಿ ಅಂತ ಸರ್ಕಾರಕ್ಕೆ ಮನವಿ ಇಟ್ಟಿದ್ದಾರೆ.. ಒಟ್ಟಾರೆಯಾಗಿ ಈಗಾಗಲೇ ಗೋಬಿ ಮಂಚೂರಿಯನ್ ಗೆ ಹಾಕುವ ಬಣ್ಣ ಬ್ಯಾನ್ ಆಗಿದೆ.. ಈ ನಿಯಮಗಳು ಬರಿ ಗೋಬಿ ಮಂಚೂರಿಯನ್ ಹಾಗೆ ಕಾಟನ್ ಕ್ಯಾಂಡಿಗೆ ಮಾತ್ರ ಅನ್ವಯಿಸುವುದಿಲ್ಲ.. ಹಾಗಾಗಿ ಕಬಾಬು ಕೂಡ ಈ ಬಣ್ಣವನ್ನು ಬಳಸುತ್ತಿದ್ದಾರೆ.. ಹಾಗಾಗಿ ನೀವೇನಾದ್ರೂ ಈ ರೀತಿ ಬಣ್ಣ ಕಟ್ಟಿದ ಕಬಾಬ್ ಗಳನ್ನ ತಿಂದ್ರೆ ಪರಲೋಕ ಸೇರುವುದು ಗ್ಯಾರಂಟಿ..