ಮಂಡ್ಯ: ಫೇಸ್ ಬುಕ್ ನಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ತನ್ನ ಸಮಸ್ಯೆಯ ಹೇಳಿ ಹಣ ದೋಚುತ್ತಿದ್ದ ಆಸಾಮಿಯನ್ನ ಮಂಡ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಂಜನ್ ಗೌಡ ಬಂಧಿತ ಆರೋಪಿಯಾಗಿದ್ದು,. ನೋಡುವುದಕ್ಕೆ ಅಂದವಾಗಿ ಕಂಡರು ಇತ ಮಾಡುತ್ತಿದ್ದದ್ದು ಮಾತ್ರ ಖತರ್ನಾಕ್ ಕೆಲಸ. ಈತನ ಬಣ್ಣದ ಮಾತಿಗೆ ಅದೆಷ್ಟೋ ಮಹಿಳೆಯರು ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.
Aishwarya Rai: ಗಂಡನ ಮನೆಯಿಂದ ಹೊರಬಂದ ಐಶ್ವರ್ಯಾ ರೈ..! ಬಿಗ್’ಬಿ ಮನೆಯಲ್ಲಿ ಅತ್ತೆ-ಸೊಸೆಯ ಬಿರುಕು
ಎಲ್ಲಿ ಗಂಡನಿಗೆ, ಕುಟುಂಬಸ್ಥರಿಗೆ ಗೊತ್ತಾಗಿ ಬಿಡುತ್ತೆ ಎಂದು ಎಷ್ಟೋ ಜನ ಮಹಿಳೆಯರು ದೂರು ಕೊಡಲು ಸಹಾ ಹಿಂದೇಟು ಹಾಕಿದ್ದಾರೆ. ಆದರೆ, ಇತ್ತೀಚೆಗೆ ಈತನಿಂದ ಮೋಸಹೋದ ಮಹಿಳೆಯೊಬ್ಬಳು, ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆರೋಪಿ ರಂಜನ್ನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಇದೇ ರೀತಿ ಹತ್ತಾರು ಮಹಿಳೆಯರಿಗೆ ಮೋಸ ಮಾಡಿರುವುದು ಕೂಡ ಗೊತ್ತಾಗಿದೆ. ಬಳಿಕ ಆರೋಪಿಯಿಂದ 182 ಗ್ರಾಂ ಚಿನ್ನಾಭರಣವನ್ನು ಕೂಡ ವಶಕ್ಕೆ ಪಡೆದಿದ್ದಾರೆ.