ಉಗುರುಗಳನ್ನು ಕತ್ತರಿಸಲು, ಕೂದಲು ಕತ್ತರಿಸಲು ಮತ್ತು ಶೇವಿಂಗ್ ಮಾಡಲು ವಾರದ ಕೆಲವು ದಿನಗಳು ಒಳ್ಳೆಯದು ಎಂದು ಶಾಸ್ತ್ರಗಳು ಉಲ್ಲೇಖಿಸುತ್ತವೆ. ಈ ದಿನಗಳಲ್ಲಿ ನಿಮ್ಮ ಉಗುರುಗಳನ್ನು ಕತ್ತರಿಸುವುದು ಅಥವಾ ನಿಮ್ಮ ಗಡ್ಡವನ್ನು ಬೋಳಿಸುವುದು ನಿಮ್ಮ ಮೇಲೆ ಗ್ರಹಗಳ ದುಷ್ಪರಿಣಾಮಗಳನ್ನು ಮತ್ತು ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟನ್ನು ತರುತ್ತದೆ ಎಂದು ನಂಬಲಾಗಿದೆ.
ಈ ದಿನಗಳಲ್ಲಿ ನಿಮ್ಮ ತಲೆ ಕೂದಲನ್ನು ಕತ್ತರಿಸುವುದು ಅಥವಾ ನಿಮ್ಮ ಗಡ್ಡವನ್ನು ಬೋಳಿಸುವುದು ನಿಮ್ಮ ಮೇಲೆ ಗ್ರಹಗಳ ದುಷ್ಪರಿಣಾಮಗಳನ್ನು ಮತ್ತು ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಮಂಗಳವಾರದಂದು ಕೂದಲನ್ನು ಕತ್ತರಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಈ ದಿನ ಕೂದಲನ್ನು ಕತ್ತರಿಸುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ? ಎಂಬ ಸಂದೇಹ ಬರುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲ ದಿನಗಳಲ್ಲಿ ಕೂದಲನ್ನು ಏಕೆ ಕತ್ತರಿಸಬಾರದು? ಮಂಗಳವಾರದಂದು ಕೂದಲನ್ನು ಕತ್ತರಿಸಬಾರದು ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ಕೆಲವು ಜನರು ಈ ದಿನ ಕೂದಲು ಕತ್ತರಿಸಿದರೆ ಏನಾದರು ದೋಷವಾಗುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ನಮ್ಮ ಜೀವಿತಾವಧಿ ಕಡಿಮೆಯಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಹೌದು ಇದು ನಿಜ. ಅದೊಂದೇ ಕಾರಣವಲ್ಲ, ಇನ್ನೂ ಅನೇಕ ಕಾರಣಗಳಿವೆ. ಅವುಗಳನ್ನು ತಿಳಿಯೋಣ ಬನ್ನಿ.
ಹನುಮಂತನನ್ನು ಮಂಗಳವಾರದಂದು ಪೂಜಿಸಲಾಗುತ್ತದೆ. ಮಂಗಳವಾರ ಹನುಮಂತನಿಗೆ ಅರ್ಪಿತವಾದ ದಿನ. ಆದರೆ, ಮಂಗಳವಾರ ಹೇರ್ ಕಟ್ ಮಾಡುವುದು ಹನುಮಂತನಿಗೆ ಮಾಡಿದ ಅವಮಾನ. ನೀವು ಮಂಗಳವಾರ ನಿಮ್ಮ ಕೂದಲನ್ನು ಕತ್ತರಿಸಿದರೆ, ನಿಮ್ಮ ಜೀವಿತಾವಧಿ ಕಡಿಮೆಯಾಗುತ್ತದೆ. ಮಂಗಳವಾರ ಶುಭ ದಿನವಲ್ಲ ಮತ್ತು ಈ ಕೆಲಸಗಳನ್ನು ಮಾಡಬಾರದು ಎಂದು ಕೆಲವರು ನಂಬುತ್ತಾರೆ. ಮಂಗಳವಾರ ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಮಂಗಳ ಗ್ರಹವು ಆಕ್ರಮಣಕಾರಿ ಸ್ವಭಾವದ ಗ್ರಹ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಈ ದಿನ ಕೂದಲನ್ನು ಕತ್ತರಿಸುವುದರಿಂದ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಗಾಯಗಳು ಸಹ ಸಂಭವಿಸಬಹುದು ಎಂದು ಹೇಳಲಾಗುತ್ತದೆ.
ಇನ್ನು ಮಂಗಳವಾರವನ್ನು ಶುಭ ಕಾರ್ಯಗಳಿಗೆ ಅನುಕೂಲಕರ ದಿನವೆಂದು ಪರಿಗಣಿಸಲಾಗಿದೆ. ಆದಿನ ದೇವತೆಗಳನ್ನು ಪೂಜಿಸುತ್ತಾರೆ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಅದಕ್ಕಾಗಿಯೇ ನಮ್ಮ ಪೂರ್ವಜರು ಈ ದಿನದಂದು ಕೂದಲನ್ನು ಕತ್ತರಿಸಬಾರದು ಎಂದು ಹೇಳುತ್ತಿದ್ದರು. ಅವರ ನಂಬಿಕೆಯನ್ನು ಮುಂದಿನ ಪೀಳಿಗೆ ಅನುಸರಿಸುತ್ತಿದೆ. ಮಂಗಳವಾರ ಮಂಗಳನ ಪ್ರಭಾವದಿಂದಾಗಿ, ದೇಹಕ್ಕೆ ಹಾನಿಕಾರಕವಾದ ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ನಿಮ್ಮ ಕೂದಲನ್ನು ಕತ್ತರಿಸಿದರೆ, ತಲೆನೋವು ಮತ್ತು ಜ್ವರದಂತಹ ಸಮಸ್ಯೆಗಳನ್ನು ಪಡೆಯಬಹುದು ಎಂದು ನಮ್ಮ ಹಿರಿಯರು ಹೇಳುತ್ತಾರೆ.
ಹಿಂದೂ ಸಂಪ್ರದಾಯದ ಪ್ರಕಾರ, ಮಂಗಳವಾರದಂದು ಶೇವಿಂಗ್ ಮಾಡುವುದು ಮತ್ತು ಕೂದಲು ಕತ್ತರಿಸುವುದು ಅಶುಭ ಎಂದು ಹೇಳಲಾಗುತ್ತದೆ. ಆದರೆ ಇದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಆದಾಗ್ಯೂ, ಮಂಗಳವಾರ, ಕಟಿಂಗ್ ಅಂಗಡಿಗಳು ಸಹ ತೆರೆದಿರುವುದಿಲ್ಲ. ಬಹುತೇಕ ಎಲ್ಲಾ ಕೂದಲು ಕತ್ತರಿಸುವ ಅಂಗಡಿಗಳು ಮುಚ್ಚುತ್ತಾರೆ. ಈ ನಂಬಿಕೆಗಳಿಗೆ ಯಾವುದೇ ಆಧಾರವಿಲ್ಲ. ಹೇರ್ ಕಟ್ ಮಾಡಬಾರದು ಎಂಬ ಅಂಶವು ವೈಯಕ್ತಿಕ ನಂಬಿಕೆಗಳನ್ನು ಅವಲಂಬಿಸಿರುತ್ತದೆ. ಅನುಸರಿಸಬೇಕೆ ಅಥವಾ ಬೇಡವೇ ಎಂಬುದು ವ್ಯಕ್ತಿಗೆ ಬಿಟ್ಟದ್ದು.