ಬೆಳಗಾವಿ : ಬಾಡಿಗೆ ನೆಪದಲ್ಲಿ ದುಬಾರಿ ಕಾರು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಮಾರ್ಕೆಟ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಒಂದಲ್ಲಾ ಎರಡಲ್ಲಾ ಬರೊಬ್ಬರಿ ನಾಲ್ವರು ಕಾರು ಎಗರಿಸಿದ್ದ ಖರ್ತನಾಕ್ ಕಾರು ಕಳ್ಳನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಬೆಳಗಾವಿಯ ನಿವಾಸಿ ಮಹೇಶ ಪಾಟೀಲ್ ಬಂಧಿತನಾಗಿದ್ದು, ಈತ ಮಹಮ್ಮದ್ ಸನದಿ ಎಂಬುವರ ಬಳಿ ಮಹೇಂದ್ರಾ XUV 500 ಕಾರ್ ಬಾಡಿಗೆ ಪಡೆದು ಪರಾರಿಯಾಗಿದ್ದ. ಕಾರು ಬಾಡಿಗೆಗೆ ಕೊಟ್ಟು 10 ದಿನವಾದರೂ ವಾಪಸ್ ಬರದಿದ್ದಾಗ ಮಹಮ್ಮದ್ ಸನದಿ ಮಾರ್ಕೆಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಾರ್ಕೆಟ್ ಎಸಿಪಿ ಸಂತೋಷ ಸತ್ಯನಾಯಕ ಮಾರ್ಗದರ್ಶನದಲ್ಲಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಮಹೇಶ್ನನ್ನು ಬಂಧಿಸಿದ್ದಾರೆ. ಈತನ ವಿಚಾರಣೆ ವೇಳೆಯ ಸಿಕ್ಕ ಮಾಹಿತಿಯಿಂದ ಪೊಲೀಸರೇ ಬೆಚ್ಚಿಬಿದಿದ್ದಾರೆ. ಮಹೀಂದ್ರಾ XUV 500 ಕಾರು ಮಾತ್ರವಲ್ಲದೇ ಟಾಟಾ ಜಸ್ಟ್ XUV, ಸ್ವೀಪ್ಟ್ ಡಿಜೈರ್, ಹೋಂಡಾ ಜಾಜ್ ಸೇರಿ 21 ಲಕ್ಷ 50 ಸಾವಿರ ಮೌಲ್ಯದ ಕಾರು ಕಳ್ಳತನ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಹಿಂಡಲಗಾ ಜೈಲಿಗಟ್ಟಲಾಗಿದೆ.