ಬೆಂಗಳೂರು: ಅವರೆಲ್ಲ ಮಧ್ಯಮ ವರ್ಗದ ಜನರು… ಭವಿಷ್ಯದ ಆಸೆಗೆ ದುಡಿದ ಹಣ ದಲ್ಲಿ ನಾಲ್ಕು ಕಾಸು ಉಳಿಸಿ ಚೀಟ್ ಫಂಡ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ರು. ಆದ್ರೆ ಚೀಟ್ ಫಂಡ್ ಕಂಪನಿ ಪಾಂಗನಮ ಹಾಕಿ ಅವರೆಲ್ಲ ಇಂದು ಪೊಲೀಸ್ ಠಾಣೆಯ ಮುಂದೆ ನ್ಯಾಯಕ್ಕಾಗಿ ಗೋಳಿಡ್ತಿದ್ದಾರೆ.. ಯಾವುದು ಹಾ ಕಂಪನಿ ಯಷ್ಟು ಜನ ಮೋಸ ಹೋಗಿದಾರೆ ಅಂತೀರಾ ಹಾಗಾದರೆ ಈ ಸ್ಟೋರಿ ನೋಡಿ.. ಪೊಲೀಸ್ ಠಾಣೆ ಮುಂದೆ ನೂರಾರು ಜನರ ಪ್ರತಿಭಟನೆ.. ಹಣ ಕಟ್ಟಿರೋ ಸಾಕ್ಷಿ ತೋರಿಸಿ ಕಣ್ಣೀರು ಹಾಕುತ್ತ ಆಕ್ರೋಶ.. ಪ್ರತಿಭಟಕಾರರನ್ನ ಸಮಾಧಾನ ಪಡಿಸ್ತಿರೋ ಪೊಲೀಸ್ರು..
ಇದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮುಂದೆ ಇಂದು ಕಂಡು ಬಂದ ದೃಶ್ಯಗಳು.. ಅಷ್ಟಕ್ಕೂ ಆಗಿದ್ದೇನಂದ್ರೆ ಬೆಂಗಳೂರಿನಲ್ಲಿ ಮತ್ತೊಂದು ಚೀಟ್ ಫಂಡ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.. ಶ್ರೀ ಸಾಯಿ ಲಕ್ಷ್ಮಿ ಕೃಪೆ ಚಿಟ್ ಫಂಡ್ ಅನ್ನೋ ಚೀಟ್ ಕಂಪನಿ ನೂರಾರು ಜನರಿಗೆ ಕೋಟ್ಯಾಂತರ ರೂ. ವಂಚಿಸಿರೋ ಆರೋಪಕ್ಕೆ ಗುರಿಯಾಗಿದೆ.. ಈ ಸಂಬಂಧವೇ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಲಗ್ಗೆ ಇಟ್ಟಿದ್ದ ಚೀಟಿದಾರರು ನ್ಯಾಯ ಕೊಡಿಸುವಂತೆ ಪೊಲೀಸರಿಗೆ ದುಂಬಾಲು ಬಿದ್ದಿದ್ರು..
Health Care: ಚಪಾತಿ ಹಿಟ್ಟನ್ನು ಪ್ರಿಡ್ಜ್ʼನಲ್ಲಿಟ್ಟು ಬಳಕೆ ಮಾಡಿದ್ರೆ ಈ ಸಮಸ್ಯೆಗಳು ಬರಬಹುದು ಎಚ್ಚರ.!
ಹೌದು…ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರೋ ಸಿದ್ದಲಿಂಗಯ್ಯ ಅನ್ನೋರು ಅನೇಕ ವರ್ಷಗಳಿಂದ ಶ್ರೀ ಸಾಯಿ ಲಕ್ಷ್ಮಿ ಚೀಟ್ ಫಂಡ್ ಅನ್ನೋ ಕಂಪನಿ ನಡೆಸ್ತಿದ್ರು.. ನೂರಾರು ಜನರ ಬಳಿ ಲಕ್ಷಾಂತರ ರೂ. ಚೀಟಿ ಹಾಕಿಸಿಕೊಂಡು ವ್ಯವಹಾರ ಮಾಡ್ತಿದ್ರು.. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿ ತಲೆಮರೆಸಿಕೊಂಡಿದ್ರಂತೆ. ಈ ವಿಚಾರ ತಿಳಿದ ಚೀಟಿದಾರರು ಸಿದ್ದಲಿಂಗಯ್ಯ ಮತ್ತು ಅವರ ಪತ್ನಿ, ಪುತ್ರನ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ರು..
ಬಳಿಕ ಕೇಸ್ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಶ್ರೀರಂಗಪಟ್ಟಣದಲ್ಲಿ ಸಿದ್ದಲಿಂಗಯ್ಯ ಮತ್ತು ಪ್ರೇಮ ಕುಮಾರಿಯನ್ನ ಬಂಧಿಸಿ ಕರೆತಂದಿದ್ದಾರೆ.. ಆದ್ರೆ ಈ ವಿಚಾರ ತಿಳಿದ ಚೀಟಿದಾರರು ಪೊಲೀಸ್ ಠಾಣೆಗೆ ಬಂದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ರು.. ಹಾಗೆ ಇನ್ನೊಬ್ಬ ಆರೋಪಿ, ಸಿದ್ದಲಿಂಗಯ್ಯ ಪುತ್ರ ಸುಚಿತ್ ನನ್ನ ಬಂಧಿಸುವಂತೆ ಪಟ್ಟು ಹಿಡಿದ್ದಾರೆ.
ಸದ್ಯ ಬಂಧಿತ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರೋ ಪೊಲೀಸರು ವಿಚಾರಣೆ ಮಾಡ್ತಿದ್ದಾರೆ.. ಇನ್ನೊಂದು ಕಡೆ ಆರೋಪಿಗಳಿಗೆನೇ ಈ ಹಿಂದೆ ಕೆಲವು ಚೀಟಿದಾರರು ಹಣ ತೆಗದುಕೊಂಡು ವಾಪಸ್ ಕಟ್ಟದೆ ಮೋಸ ಮಾಡಿದ್ರಂತೆ. ಹೀಗಾಗಿ ಅವರು ಕೂಡ ಲಾಸ್ ನಲ್ಲಿ ಇದ್ರು ಎನ್ನಲಾಗ್ತಿದೆ..