ಬೆಂಗಳೂರು:– ಐಷಾರಾಮಿ ಕಾರ್ ಹಿಂದೆ ಹೋಗುವ ಮುನ್ನ ಎಚ್ಚರ. ಕಾರ್ ಚೆನ್ನಾಗಿದೆ ಅಂತ ಚೇಸ್ ಮಾಡಿಕೊಂಡು ಹೋದ್ರೆ ಬೀಳೋದು ಗ್ಯಾರಂಟಿ.
ಇಂದು ಬೆಳಗ್ಗೆ ವಿಠಲ್ ಮಲ್ಯ ರಸ್ತೆಯಲ್ಲಿ ಸೂಪರ್ ಕಾರ್ ಹೋಗುತ್ತಿತ್ತು. ಕಾರ್ ವಿಡಿಯೋ ಮಾಡ್ಕಂಡ್ ಹಿಂದೆ ಬೈಕ್ ಸವಾರರು ಹೋಗ್ತಿದ್ದರು. ಕಾರ್ ಹತ್ತಿರ ಹೋಗಿ ಸವಾರ ವಿಡಿಯೋ ರೆಕಾರ್ಡ್ ಮಾಡ್ತಿದ್ದ. ಇದೇ ಸಮಯದಲ್ಲಿ ಸೈಡಿಗೆ ಚಾಲಕ ಕಾರ್ ಎಳೆದಿದ್ದಾನೆ.
https://x.com/3rdEyeDude/status/1754722740018545023?t=gyGW45Wx4FumdIBN5IIMVQ&s=08
ಈ ವೇಳೆ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಮೂರ್ನಾಲ್ಕು ಮಂದಿ ಬೈಕ್ ಸವಾರರು ಕೆಳಬಿದ್ದಿದ್ದಾರೆ. ಹಿಂಬದಿ ಬರ್ತಿದ್ದ ಬೈಕ್ ಸವಾರನ ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದೆ.