ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಲೆಜೆಂಡ್ಸ್ ಲೀಗ್ ಅನ್ನು ಭವಿಷ್ಯದಲ್ಲಿ ಆಯೋಜಿಸಲಿದೆಯೇ? ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಆಟಗಾರರಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತಹ ಲೀಗ್ ಅನ್ನು ಆಯೋಜಿಸಲು ಬಿಸಿಸಿಐ ಆಯೋಜಿಸಲಾಗಿದೆ.
ದಕ್ಷಿಣ ಆಫ್ರಿಕಾದ ವೇಗಿ ಬೌಲರ್ ಮಾರ್ನೆ ಮಾರ್ಕೆಲ್ ಟೀಂ ಇಂಡಿಯಾಗೆ ಬೌಲಿಂಗ್ ಕೋಚ್
ಈಗಾಗಲೇ ಕೆಲವು ಮಾಜಿ ಕ್ರಿಕೆಟಿಗರು ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಲೆಜೆಂಡ್ಸ್ ಕ್ರಿಕೆಟ್ ಟೂರ್ನಿಯು ಪ್ರಸ್ತುತ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನವನ್ನು ಸೆಳೆದಿದೆ. ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರ ಆಟವನ್ನು ಅಭಿಮಾನಿಗಳು ಈಗಾಗಲೇ ಹರ್ಷ ವ್ಯಕ್ತ ಪಡಿಸಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್, 2024ರ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಹೆಸರಿನಲ್ಲಿ ನಡೆದಿದ್ದ ಟೂರ್ನಿಗಳು ಪ್ರೇಕ್ಷಕರನ್ನು ಸೆಳೆದಿದ್ದವು. ಐಪಿಎಲ್ ಮಾದರಿಯಲ್ಲಿಯೇ ಲೆಜೆಂಡ್ಸ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವಂತೆ ಕೆಲವು ಮಾಜಿ ಕ್ರಿಕೆಟಿಗರು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರನ್ನು ಸಂಪರ್ಕಿಸಿದ್ದಾರೆಂದು ವರದಿಯಾಗಿದೆ.
ನಗರ ಮೂಲದ ಫ್ರಾಂಚೈಸಿಗಳೊಂದಿಗೆ ಲೆಜೆಂಡ್ಸ್ ಲೀಗ್ ಆಯೋಜಿಸಿದರೆ ಉತ್ತಮ ಎಂದು ಮಾಜಿ ಆಟಗಾರರು ಜಯ ಶಾಗೆ ಸಲಹೆ ನೀಡಿದ್ದಾರೆ. ಲೆಜೆಂಡ್ಸ್ ಲೀಗ್ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಬಂದಿರುವುದು ನಿಜ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.