ಬೆಂಗಳೂರು: ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ದೊಡ್ಡ ಹೋರಾಟ ನಡೆಯುತ್ತಿದೆ. ಬೆಂಗಳೂರಿನ ಉದ್ದಿಮೆದಾರರು ಕಡ್ಡಾಯ ನಾಮಫಲಕ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇತ್ತ ಬಿಬಿಎಂಪಿ ನೋಟಿಸ್ ನೀಡ್ತಾ ಇದೆ. ಜನವರಿ 15 ರ ಒಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಕೆಗೆ ಎಚ್ಚರಿಕೆ ಇದೆ. ನಾಮಫಲಕ ಬದಲಾವಣೆ ಮಾಡದಿದ್ದರೆ ಕಾನೂನು ಕ್ರಮ. ಎಷ್ಟು ನೋಟಿಸ್ ನೀಡಿದ್ದಾರೆ ಅನ್ನೋದರ ವರದಿ ಇಲ್ಲಿದೆ ನೋಡಿ. ಬೆಂಗಳೂರಿನಲ್ಲಿ ದೇಶ ವಿದೇಶಿ ಉದ್ದಿಮಿಗಳು ವ್ಯಾಪಾರ ವಹಿವಾಟು ಮಾಡ್ತಿದ್ದಾರೆ. ಅವರ್ಯಾರು ಸಮರ್ಪವಾಗಿ ಕಡ್ಡಾಯ ಕನ್ನಡ ರೂಲ್ಸ್ ಫಾಲೋ ಮಾಡ್ತಿಲ್ಲ.
ನಾಮಫಕದಲ್ಲಿ ಶೇ 60 ರಷ್ಟು ಕನ್ನಡ ಬಳಿಸಿ ಅಂತ ಎಷ್ಟೇ ಹೇಳಿದ್ರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಯಾವಾಗ ಕನ್ನಡ ಪರ ಸಂಘನೆಗಗಳು ಇಂಗ್ಲಿಷ್ ವ್ಯಾಮೋಹದ ವಿರುದ್ದ ಸಿಡಿದಿದ್ರೂ ಆಗ ಇಡೀ ಸರ್ಕಾರ ಹಾಗೂ ಬಿಬಿಎಂಪಿ ಎಚ್ಚುತ್ತುಕೊಳ್ತು. ಬ್ಯಾಕ್ ಟು ಬ್ಯಾಕ್ ಸಭೆ ನಡೆಸಿ ಕನ್ನಡ ಕಡ್ಡಾಯ ಆದೇಶ ಮಾಡ್ತು, ಆದ್ರೆ ಇದೀಗ ಕನ್ನಡ ಕಡ್ಡಾಯ ರೂಲ್ಸ್ ಕಟ್ಟುನಿಟ್ಟಿಗಾಗಿ ಅನುಷ್ಠಾನ ಮಾಡಲು ಪಾಲಿಕೆ ಪಣತೊಟ್ಟಿದೆ. ಹೌದು.. ಕನ್ನಡ ನಾಮಫಲಕ ನಿಯಮ ವಿರೋಧಿಸುವವರ ವಿರುದ್ಧ ಬಿಬಿಎಂಪಿ ಯಾವಾಗಲೋ ನೋಟಿಸ್ ಜಾರಿ ಮಾಡಿ ಕ್ರಮ ವಹಿಸಬೇಕಾಗಿತ್ತು.
Gmail Accounts: ಜಿ-ಮೇಲ್ ಖಾತೆ ಹೊಂದಿದ್ದು ಬಳಸುತ್ತಿಲ್ಲವೆಂದರೆ ಈ ಸ್ಟೋರಿ ಓದಲೇಬೇಕು: ಶಾಕಿಂಗ್ ನ್ಯೂಸ್!
ಆದರೆ ಪಾಲಿಕೆ ನಿರ್ಲಕ್ಷ್ಯದಿಂದ ಕನ್ನಡ ನಾಮಫಲಕ ನಿಯಮವನ್ನ ಉದ್ದಿಮೆದಾರರು ಗಾಳಿಗೆ ತೂರಿದ್ರು ಕರವೇ ನಡೆಸಿದ ಬೃಹತ್ ಪ್ರತಿಭಟನೆ ಬಳಿಕ ಎಚ್ಚೆತ್ತಿರೋ ಪಾಲಿಕೆ ಬೆಂಗಳೂರಿನಲ್ಲಿ ಇರೋ ಶಾಪಿಂಗ್ ಕಾಂಪ್ಲೆಕ್ಸ್, ಮಾಲ್,ಹೋಟೆಲ್, ಪಬ್, ಬಾರ್ ಸೇರಿದಂತೆ ಅನೇಕ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡ್ತಾ ಇದೆ.ನಿಯಮ ಉಲ್ಲಂಘಿಸುವವರ ವಿರುದ್ಧ ಸಮರ ಸಾರಿದ್ದು ಜನವರಿ 15 ರ ಒಳಗಡೆ ಕಡ್ಡಾಯವಾಗಿ ನಾಮಫಲಕಗಳಲ್ಲಿ ಕಡ್ಡಾಯವಾಗಿ 60% ಕನ್ನಡ ಇರುವಂತೆ ನೋಟೀಸ್ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸರ್ಕಾರ ಫ್ರೆಬ್ರವರಿ 28 ರ ಒಳಗಡೆ ಕನ್ನಡ ನಾಮಫಲಕ ಇರಬೇಕು ಅಂತಾ ಹೇಳಿ ಕ್ರಮ ವಹಿಸುವಂತೆ ಸೂಚಿಸಿದೆ.
ಬಿಬಿಎಂಪಿ ಅಲರ್ಟ್ ಆಗಿ ಫೀಲ್ಡ್ ಗಿಳಿದು ವರ್ಕ್ ಮಾಡ್ತಾ ಇದೆ ದಾಸರಹಳ್ಳಿ, ಪಶ್ಚಿಮ ವಲಯ, ದಕ್ಷಿಣ ವಲಯ, ಪೂರ್ವ ವಲಯ ಸೇರಿದಂತೆ ಅನೇಕ ಕಡೆ ನೋಟಿಸ್ ಸರ್ವ್ ಮಾಡ್ತಾ ಇದೆ. ಸುಮಾರು 18 ಸಾವಿರಕ್ಕೂ ಹೆಚ್ಚು ನೋಟಿಸ್ ಗಳನ್ನ ನೀಡಿರೋದಾಗಿ ಮಾಹಿತಿ ಲಭ್ಯವಾಗಿದೆ.ಈಗಾಗಲೇ ದಕ್ಷಿಣ ವಯದಲ್ಲಿ 2838, ಪೂರ್ವ- 2477, ಬೊಮ್ಮನಹಳ್ಳಿ, 3881, ದಾಸರಹಳ್ಳಿ, 1378, ಮಹದೇವಪುರ, 3442, ಯಲಹಂಕ, 1828 ಹಾಗೂ ಆರ್ ಆರ್ ನಗರ ವಲಯದಲ್ಲಿ 324 ಉದ್ದಿಮೆಗಳಿಗಗೆ ಕನ್ನಡ ಕಡ್ಡಾಯ ಆಳವಡುವಂತೆ ನೋಟಿಸ್ ಜಾರಿ ಮಾಡಿದೆ ಬಿಬಿಎಂಪಿ ಪ್ರತಿ ಶಾಪ್, ಮಾಲ್ ಗಳಿಗು ತೆರಳಿ ಜನವರಿ 15 ಒಳಗಡೆ ಕನ್ನಡ ನಾಮಫಲಕ ಅಳವಡಿಕೆಗೆ ನೋಟಿಸ್ ನೀಡ್ತಾ ಇದೆ. ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ೬೦% ನಿಯಮ ಪಾಲಿಸಿಸ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.