ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಕಟ್ಟಡದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಹಾಗೂ ಅಂಚೆ ಕಚೇರಿಗಳು ಬಾಡಿಗೆ ಪಾವತಿಸದ ಕಾರಣ ಶನಿವಾರ ಬಿಬಿಎಂಪಿ ಅಧಿಕಾರಿಗಳು ಕಚೇರಿಗಳಿಗೆ ಬೀಗ ಹಾಕಿದ್ದಾರೆ.
Actor Darshan Case: ಕೊಲೆ ಬಳಿಕವೂ ಪವಿತ್ರಾ-ಸಮತಾ ಫೋನ್ ಸಂಭಾಷಣೆ! ಶಾಕ್ ಡಿವೈಸ್’ಗೆ ಹಣ ನೀಡಿದ್ದೂ ಇದೇ ಸಮತಾ!
ಪಿಯುಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಮಳಿಗೆ ಸಂಖ್ಯೆ 14/15 ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್) ಮತ್ತು ಮಳಿಗೆ ಸಂಖ್ಯೆ 17, ಅಂಚೆ ಕಚೇರಿಗಳಿವೆ.
ಬ್ಯಾಂಕ್ ಆಫ್ ಬರೋಡಾದವರು 2011ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆ ಪಾವತಿಸುತ್ತಿರುವುದಿಲ್ಲ. ಅಲ್ಲದೆ, ಡಿಸೆಂಬರ್ 2022ರಿಂದ ಯಾವುದೇ ಬಾಡಿಗೆಯನ್ನು ಪಾವತಿಸಿಲ್ಲ. ಈ ಬಗ್ಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಸ್ಪಂದಿಸಿಲ್ಲ. ಪಾಲಿಕೆಗೆ ಬ್ಯಾಂಕ್ ಆಫ್ ಬರೋಡಾ ₹17.56 ಕೋಟಿ ಬಾಡಿಗೆ ಪಾವತಿಸಬೇಕಿದೆ ಎಂದು ಪ್ರಕಟಣೆ ತಿಳಿಸಿದೆ.
ಅಂಚೆ ಕಚೇರಿಯವರು 2006ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಪರಿಷ್ಕೃತ ಬಾಡಿಗೆಯನ್ನು ಪಾವತಿಸುವಂತೆ ನೋಟಿಸ್ ನೀಡಲಾಗಿದ್ದರೂ, ಪಾವತಿಸಿರುವುದಿಲ್ಲ. ₹ 2.32 ಕೋಟಿ ಬಾಡಿಗೆ ಪಾವತಿಸಬೇಕಿದೆ.