ಬೆಂಗಳೂರು: ಮಳೆಗಾಲಕ್ಕೆ ದಿನಗಣನೇ ಶುರುವಾಗಿದೆ.. ಪೂರ್ವ ಮುಂಗಾರು ಮಳೆಗೆ ಸಿಲಿಕಾನ್ ಸಿಟಿಯ ಮರಗಳು ಧರೆಗೆ ಉರುಳಿದ್ದನ್ನ ಗಮಿಸಿದ್ದ ಬಿಬಿಎಂಪಿ ಅಳಿವನಂಚಿನಲ್ಲಿರೋ ಮರಗಳ ತೆರವು ಮಾಡಲು ವಲಯವಾರು ಪೋನ್ ನಂಬರ್ ನೀಡಿ ಒಂದು ವಾಟ್ಸ್ ಆಪ್ ಮಾಡಿ, ಮರ ಒಣಗಿದ್ರೇ ಕೊಂಬೆ ಬೀಳೋತರ ಇದ್ರೇ ಇಮಿಡೆಟ್ ಆಗಿ ಅದನ್ನ ನಾವು ಕ್ಲೀಯರ್ ಮಾಡ್ತಿವಿ ಅಂದ್ರು.. ಮೊದಲು ನಿಮ್ಮ ಆವರಣದಲ್ಲಿರೋ ಮರದ ಕೊಂಬೆಯಿಂದ ಬಸ್ ಶೇಲ್ಟರ್ ಹೇಗಾಗಿದೆ ನೋಡಿ ಸ್ವಾಮಿ..
ಬಿಬಿಎಂಪಿ ಅವ್ರು ಇನ್ನೂ ನಿದ್ದೆಯಿಂದ ಎದ್ದಿಲ್ಲ ಅನ್ಸುತ್ತೆ, ಹೌದು, ಇದು ಎಲ್ಲೋ ದೂರುದಲ್ಲಿ ಇರೋ ಬಸ್ ನಿಲ್ದಾಣವಲ್ಲ.. ಇದು ಬಿಬಿಎಂಪಿ ಕೇಂದ್ರ ಕಚೇರಿಯ ಹೊರ ಭಾಗದಲ್ಲಿ ಜಯನಗರದ ಕಡೆಗೆ ಮಾತ್ರವಲ್ಲ ತಮಿಳುನಾಡಿನ ಕಡೆಗೆ ಹೋಗುವ ಕಾರ್ಪೋರೇಷನ್ ಬಸ್ ನಿಲ್ದಾಣ.. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ದೊಡ್ಡದಾಗಿ ಬಸ್ ನಿಲ್ದಾಣ ಮಾಡಲಾಗಿದ್ದು, ಈ ಬಸ್ ನಿಲ್ದಾಣದ ಶೇಲ್ಟರ್ ಮೇಲೆ ಬಿಬಿಎಂಪಿ ಕೇಂದ್ರ ಕಚೇರಿಯ ಆವರದಿಂದ ಬೆಳೆದಿರೋ ಮರ ಒಂದರ ಕೊಂಬೆಗಳು ಶೇಲ್ಟರ್ ಮೇಲೆ ಬಂದಿದ್ದು ಶೆಲ್ಟರ್ ಬೀಳುವ ಹಂತಕ್ಕೆ ಬಂದಿದೆ..
BBMP Recruitment 2024: ಬಿಬಿಎಂಪಿಯಲ್ಲಿ 11 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ..! ಇಂದೇ ಅರ್ಜಿ ಸಲ್ಲಿಸಿ
ನೋಡಿದ್ರಲ್ಲ ಹೇಗೆ ಮರದ ರಂಬೆಕೊಂಬೆ ಶೆಲ್ಟರ್ ಮೇಲೆ ಬಿದ್ದಿದೆ ಅಂತಾ.. ಇದರಿಂದಾಗಿ ಶೆಲ್ಟರ್ ಹಾನಿಯಾಗ್ತಿದ್ದು, ಯಾವ ಸಮಯದಲ್ಲಾದ್ರೂ ಶೆಲ್ಟರ್ ಬಿದ್ದು ಬಸ್ಗೆ ಅಂತಾ ಕಾಯುವವರ ಮೇಲೆ ಬಿದ್ರೇ ಯಾರು ಹೊಣೆ.. ಇಲ್ಲಿ ನಿಂತು ಬಸ್ ಕಾಯೋದಕ್ಕೆ ಭಯವಾಗುತ್ತೆ, ಬಿಬಿಎಂಪಿ ಅವ್ರು ಅನಾಹುತ ಅದ್ಮೇಲೆನೇ ಇದನ್ನೇಲ್ಲ ಸರಿ ಮಾಡೋದು ಅಲ್ಲಿವರೆಗೆ ಏನೂ ಕೆಲಸ ಮಾಡೋದಿಲ್ಲ ಅಂತಾ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ..
ಸ್ವಲ್ಪ ಜೋರು ಗಾಳಿ, ಮಳೆ ಬಂದ್ರು ಈ ಬಸ್ ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ..ಬಸ್ ಸ್ಟಾಪ್ ನಲ್ಲಿ ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿ ಕಂಬಗಳು..ಬಸ್ ಸ್ಟಾಪ್ ಶೀಟ್ ಮೇಲೆ ಕಸದ ರಾಶಿ ಜೊತೆ ನಿಂತುಕೊಂಡ ಮಳೆ ನೀರು… ಯಾವಾಗ ಬೀಳುತ್ತದೆ ಎಂದು ಜೀವವನ್ನು ಕೈಯಲ್ಲಿ ಹಿಡಿದುವ ನಿಂತಿರುತ್ತಾರೆ… ಇನ್ನ ಯ್ಯಾವಾವ ಬಸ್ ಈ ಬಸ್ ಸ್ಟಾಪ್ ಗೆ ಬರತ್ತೆ ಅಂತ ಮಾಹಿತಿಕೊಡುವ ಫಲಕಗಳಿಗೂ ತುಕ್ಕು ಅಂಟಿದೆ..
ಒಟ್ನಲ್ಲಿ, ದೀಪದ ಕಳೆಗೆ ಕತ್ತಲು ಅನ್ನೋ ರೀತಿ ಬಿಬಿಎಂಪಿ ತನ್ನ ಕಚೇರಿಯ ಆವರಣದಲ್ಲಿರೋ ಮರದಿಂದ ಆಗ್ತಿರೋ ಅನಾಹುತವನ್ನ ನೋಡಿದ್ರು ನೋಡದಂತೆ ಇದೆ.. ಸದ್ಯಕ್ಕೆ ಏನೂ ಆಗಿಲ್ಲವಾಲ್ಲ, ಮರದ ಕೊಂಬೆ ಬಿದ್ದು ಶೆಲ್ಟರ್ ಬಿದ್ದಾಗ ನೋಡೋಣ ಅಂತಿದ್ದಾರೇನೋ ಗೊತ್ತಿಲ್ಲ.. ಮಾನ್ಯ ಬಿಬಿಎಂಪಿ ಆಯುಕ್ತರು ಇದಕ್ಕೆ ಏನ್ ಆಕ್ಷನ್ ತಗೋತ್ತಾರೆ ಕಾದುನೋಡೋಣ..