ಬಿಗ್ಬಾಸ್ ಕನ್ನಡ 11 ಆರನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ತ್ರಿವಿಕ್ರಮ್, ಮನೆಯ ಕ್ಯಾಪ್ಟನ್ ಆಗಿದ್ದಾರೆ. ಸ್ಪರ್ಧಿಗಳು ಹೊಸ ಹೊಸ ಟಾಸ್ಕ್ನಲ್ಲಿ ಭಾಗವಹಿಸಿಲು ಗೆಲ್ಲಲ್ಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಮನೆಮಂದಿಗೆ ಸೊಂಟದ ಪಟ್ಟಿ ಕೊಟ್ಟಿರುವ ಬಿಗ್ಬಾಸ್ ಇಬ್ಬರು ಸ್ಪರ್ಧಿಗಳು ಯಾವಾಗಲೂ ಜೊತೆಯಾಗಿರುವಂತೆ ಸೂಚಿಸಿದ್ದಾರೆ. ಸ್ಪರ್ಧಿಗಳನ್ನು ನೋಡಲು ಮನೆಗೆ ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿ ಎಂಟ್ರಿ ಕೊಟ್ಟಿದ್ದಾರೆ
ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಮಾವ-ಸೊಸೆ! ಚಾಕು ಚುಚ್ಚೋಕೆ ಹೋದೋನು ಚಾಕು ಚುಚ್ಚಿಸಿಕೊಂಡ
ಸ್ಪರ್ಧಿಗಳನ್ನು ನೋಡಲು ಮನೆಗೆ ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಅವರಿಗೂ ಸೊಂಟದ ಪಟ್ಟಿ ಕೊಡುತ್ತಾರೆ. ಮನೆಗೆ ಬಂದ ಚಾರುವನ್ನು ಇಂಪ್ರೆಸ್ ಮಾಡಲು ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ನನ್ನನ್ನು ಅಣ್ಣ ಎನ್ನಬೇಡಿ ಎಂದು ಮಂಜು ಹೇಳಿದರೆ, ಹನುಮಂತ ಚಾರುವಿಗೆ ರೋಸ್ ಕೊಟ್ಟು ಹಾಡು ಹಾಡುತ್ತಾರೆ.
ಅದೇನೆಂದರೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಟಾಸ್ಕ್ ನಡೆಯುತ್ತಿದೆ. ಹೀಗಾಗಿ ತಾವಿಬ್ಬರು ಜೋಡಿಯಾಗಿ ಇರುವಂತೆ ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ ಜೊತೆಯಾಗಿರಲು ಹಗ್ಗವನ್ನು ನೀಡಿದ್ದಾರೆ. ಸ್ಪರ್ಧಿಗಳಂತೆ ರಾಮಚಾರಿ ಮತ್ತು ಚಾರು ಕೂಡ ಹಗ್ಗವನ್ನು ಕಟ್ಟಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಮನರಂಜನೆ ನೀಡಲು ‘ರಾಮಾಚಾರಿ’ ಸೀರಿಯಲ್ ಜೋಡಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದಾರೆ. ಬಿಗ್ ಬಾಸ್ ಶೇರ್ ಮಾಡಿರುವ ವಿಡಿಯೋದಲ್ಲಿ, ಚಾರು ಅವರು ಹನುಮಂತಗೆ ತಮ್ಮನ್ನು ಇಂಪ್ರೆಸ್ ಮಾಡುವಂತೆ ಗುಲಾಬಿ ಹೂ ನೀಡಿದ್ದಾರೆ. ಹನುಮಂತ ಅವರು ತಮ್ಮ ಶೈಲಿಯಲ್ಲಿ ಹಾಡನ್ನು ಹೇಳಿ, ಮಂಡಿಯೂರಿ ಚಾರುಗೆ ಇಂಪ್ರೆಸ್ ಮಾಡಲು ಪ್ರಯತ್ನಿಸಿದ್ದಾರೆ. ನನ್ನ ಕಣ್ಣು ನಿನ್ನ ಮೇಲೆ ಎಂದು ಹಾಡುತ್ತಾ ಗುಲಾಬಿ ಹೂ ಕೊಟ್ಟು ಮಂಡಿಯೂರಿ ಪ್ರಪ್ರೋಸ್ ಮಾಡಿದ್ದಾರೆ. ಹನುಮಂತನ ಪ್ರೇಮ ನಿವೇದನೆಗೆ ಚಾರು ನಾಚಿ ನೀರಾಗಿದ್ದಾರೆ. ಹನುಮಂತನ ನಡೆಗೆ ಸಹಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ.