ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್ಡೌನ್ ಶುರುವಾಗಲಿದ್ದು, ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.
ಫಿನಾಲೆ ದಿನ ಅಂತಿಮವಾಗಿ ಇಬ್ಬರು ಸ್ಪರ್ಧಿಗಳು ಸುದೀಪ್ ಜೊತೆ ಇರಲಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ. ಇದೀಗ ಅಂತಿಮವಾಗಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ವಿನಯ್, ಕಾರ್ತಿಕ್, ತುಕಾಲಿ ಸಂತೂ, ವರ್ತೂರು ಸಂತೋಷ್ ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ.
ಇದರ ಮಧ್ಯೆ ಒಬ್ಬರ ಎಲಿಮಿನೇಷನ್ ಈ ವಾರದ ಮಧ್ಯೆ ನಡೆಯಲಿದೆ ಎಂದು ಹೇಳಲಾಗಿತ್ತು. ಅದು ಫಿನಾಲೆ ದಿನವೇ ತಿಳಿಯಲಿದೆ ಎನ್ನಲಾಗುತ್ತಿದೆ. ಸದ್ಯ ಉಳಿದುಕೊಂಡಿರುವ 6 ಜನ ಸ್ಪರ್ಧಿಗಳಲ್ಲಿ ಸಖತ್ ಪೈಪೋಟಿ ಇದೆ
ಈ ಹಿಂದಿನ ಸೀಸನ್ನಲ್ಲಿ ಹಿರಿಯ ನಟಿ ಶೃತಿ ವಿನ್ನರ್ ಆಗಿದ್ದರು. ಈ ಸೀಸನ್ನಲ್ಲಿ ಮಹಿಳಾ ಸ್ಪರ್ಧಿ ಸಂಗೀತಾ ಶೃಂಗೇರಿ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಅವರೇ ವಿನ್ನರ್ ಆಗುವ ಸಾಧ್ಯತೆಯಿದೆ ಎಂದು ಅಭಿಮಾನಿಗಳು ಲೆಕ್ಕಾಚಾರವಾಗಿದೆ. ಉಳಿದುಕೊಂಡಿರುವ ಪ್ರತಿ ಸ್ಪರ್ಧಿಗಳು ಕೂಡ ಟಫ್ ಫೈಟ್ ಕೊಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ 10 ಫಿನಾಲೆ ಇದೇ ಜನವರಿ 27, 28ರಂದು ನಡೆಯಲಿದೆ. ಅಂದು ಬಿಗ್ ಬಾಸ್ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.