ಬಿಗ್ ಬಾಸ್ ಸೀಸನ್ 10 ಅಂತಿಮ ಘಟ್ಟದಲ್ಲಿದೆ. ಫಿನಾಲೆ ಹಂತಕ್ಕೆ ಸಮೀಪದಲ್ಲಿರುವ ಸದಸ್ಯರು ಬಿಗ್ ಬಾಸ್ ಕೊಡುತ್ತಿರುವ ಸರಳ ಚಟುವಟಿಕೆಯಲ್ಲಿ ತಮ್ಮ ತಾಳ್ಮೆ, ಇಚ್ಚಾಶಕ್ತಿ, ಬುದ್ದಿವಂತಿಕೆ, ದೈಹಿಕ, ಮಾನಸಿಕ ಬಲವನ್ನು ಗಮನದಲ್ಲಿಟ್ಟುಕೊಂಡು ಆಟವಾಡುತ್ತಿದ್ದಾರೆ.
ಈ ಪೈಕಿ ಪ್ರತಾಪ್ಗೆ ಮಾತ್ರ ಅವಕಾಶದ ಕೊರತೆ ಉಂಟಾಗಿದ್ದು, ಇದು ಮನೆಯೊಳಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ವಾರದ ಪ್ರಾರಂಭದಿಂದಲೇ ಮನೆಮಂದಿ ಟಾಸ್ಕ್ನತ್ತ ಹೆಚ್ಚು ಗಮನಹರಿಸುತ್ತಿದ್ದು, ಮನೆಯ ಕ್ಯಾಪ್ಟನ್ ತನಿಷಾ ಆಯ್ಕೆಯ ಆಧಾರದ ಮೇಲೆ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದ್ರೆ, ಪ್ರತಿ ಟಾಸ್ಕ್ನಲ್ಲೂ ತನ್ನನ್ನು ಕೈಬಿಡಲಾಗುತ್ತಿದೆ ಎಂದು ಪ್ರತಾಪ್ ಧ್ವನಿ ಎತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಗೀತಾ ಮತ್ತು ಪ್ರತಾಪ್ ನಡುವೆ ಚಿಕ್ಕ ಮಾತಿನ ಚಕಮಕಿ ಕೂಡ ನಡೆಯಿತು.
ಇದೇ ಮನಸ್ತಾಪ ಇಂದಿನ ಹೊಸ ಟಾಸ್ಕ್ ಆಯ್ಕೆಯ ವಿಚಾರದಲ್ಲೂ ಬುಗಿಲೆದ್ದಿದೆ. ನಮ್ರತಾ ಮತ್ತು ಸಂಗೀತಾ ಕುಳಿತು ಯಾವ ಸ್ಪರ್ಧಿಗಳು ಬೇಕು ಎಂಬ ಲೆಕ್ಕಾಚಾರವನ್ನು ಮಾಡುವಾಗ ಪ್ರತಾಪ್ ಹೆಸರು ಕೇಳಿಬಂದಿದೆ. ಈ ವೇಳೆ ಪ್ರತಾಪ್ ಬೇಡವೆಂದ ಸಂಗೀತಾ, ನೀನು ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ, ಗಾಬರಿ ಆಗ್ತೀಯಾ ಎಂದು ಹೇಳಿದ್ದಾರೆ
ಇದನ್ನು ಆಲಿಸಿದ ಪ್ರತಾಪ್, ಗಾಬರಿ ಆದ ಅಂತ….ಎಷ್ಟು ದಿನ ಇದನ್ನೇ ಹೇಳ್ತಾರೆ ಅಣ್ಣ ಎಂದು ಅಳುತ್ತ ಕಾರ್ತಿಕ್ ಬಳಿ ಹೇಳಿಕೊಂಡಿದ್ದಾರೆ. ಸದ್ಯ ಪ್ರತಾಪ್ ಅಳಲು ಮನೆಯಲ್ಲಿ ಏನೆಲ್ಲಾ ಸೃಷ್ಟಿಸಲಿದೆ? ಯಾರ ಮಾತು ಯಾರಿಗೆ ನೋವುಂಟು ಮಾಡಲಿದೆ? ಇಂದು ವೀಕ್ಷಿಸಬಹುದಾಗಿದೆ.