ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್ ನಡೆದಿತ್ತು. ಬಿಗ್ಬಾಸ್ ಮನೆಗೆ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ಗೌತಮಿ ಕುಟುಂಬಸ್ಥರು ಬಂದಿದ್ದರು. ಬಿಗ್ಬಾಸ್ ಮನೆಯಲ್ಲಿ ಅಪ್ಪ, ಅಮ್ಮ ಹಾಗೂ ತಮ್ಮನನ್ನು ನೋಡಿದ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆ ಭಾವನಾತ್ಮಕ ಕ್ಷಣಗಳನ್ನು ಮನೆ ಮಂದಿ ಹಾಗೂ ವೀಕ್ಷಕರ ಕಣ್ಣೀರಿಟ್ಟಿದ್ದಾರೆ. ಹೊಸ ವರ್ಷದಂದೇ ಮೋಕ್ಷಿತಾ ಫ್ಯಾಮಿಲಿ ಬಿಗ್ಬಾಸ್ ಅಂತ ದೊಡ್ಡ ಮನೆಗೆ ಬಂದಿತ್ತು. ತಂದೆ, ತಾಯಿ ಹಾಗೂ ಸಹೋದರನನ್ನು ನೋಡಿ ಮೋಕ್ಷಿತಾ ಸಖತ್ ಖುಷಿಯಾದ್ರು, ಸಹೋದರನನ್ನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಕೂಡ ಹಾಕಿದ್ದಾರೆ.
ಬಡತನ ದೂರವಾಗಿ ಶ್ರೀಮಂತರಾಗ್ಬೇಕಾ? ಹಾಗಿದ್ರೆ ಕರಿ ಮೆಣಸಿನಕಾಳಿನ ಬಳಕೆ ಹೀಗಿರಲಿ!
ಇನ್ನೂ, ಬಿಗ್ಬಾಸ್ ಪರಪಂಚ ನೀನೇ ನನ್ನ ಪರಪಂಚ ನೀನೆ ಹಾಡು ಹಾಕಿ ಮೋಕ್ಷಿತಾ ಪೈ ಅವರ ಕುಟುಂಬಸ್ಥರನ್ನು ವೆಲ್ಕಮ್ ಹೇಳಿದ್ದರು. ತಮ್ಮನನ್ನು 94 ದಿನಗಳ ನಂತರ ನೋಡಿದ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದಾದ ಬಳಿ ತಮ್ಮನಿಗೆ ನಾನು ಯಾರು ಅಂತ ಗೊತ್ತಾಗುತ್ತಿಲ್ವಾ ನಿನಗೆ ಅಂತ ಕೇಳಿದ್ದರು. ಆದರೆ ಅದಕ್ಕೆ ಅವರ ತಮ್ಮ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಲ್ಲ. ಏಕೆಂದರೆ ಮೋಕ್ಷಿತಾ ಪೈ ತಮ್ಮ ಮಂಜುನಾಥ್ ಫಿಸಿಕಲಿ ಮತ್ತು ಮೆಂಟಲಿ ಚಾಲೆಂಜ್ ಕಿಡ್ ಆಗಿದ್ದಾರೆ.
ಇದಾದ ಬಳಿಕ ಬಿಗ್ಬಾಸ್ ಮನೆಯಲ್ಲಿ ತಮ್ಮನ ಬಗ್ಗೆ ಭಾವುಕರಾಗಿದ್ದಾ ಮಾತಾಡಿದ ಮೋಕ್ಷಿತಾ, ನನ್ನ ತಮ್ಮ ಹುಟ್ಟಿದ ಮೇಲೆ ನನಗೆ ಜವಾಬ್ದಾರಿ ಜಾಸ್ತಿ ಆಯ್ತು. ಬರೀ ಅವನಿಗೆ ಅಕ್ಕ ಮಾತ್ರ ಅಲ್ಲ, ಅಮ್ಮ ಕೂಡ ಆಗಿದ್ದೀನಿ, ಚಿಕ್ಕ ವಯಸ್ಸಿನಿಂದಲೂ ಅವನೇ ನನ್ನ ಪ್ರಪಂಚ, ನಾನು ಏನೇ ಮಾಡಿದ್ದರು ಅವನಿಗೋಸ್ಕರನೇ ಅಂತ ಎಲ್ಲರ ಮುಂದೆಯೇ ಕಣ್ಣೀರು ಹಾಕಿದ್ದಾರೆ. ಅಲ್ಲದೇ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಸುಮಾರು ಜನ ಮದುವೆ ಬಗ್ಗೆಯೇ ಮಾತಾಡುತ್ತಿದ್ದರು. ಆದ್ರೆ ಮದುವೆ ಅಂದ್ರೆ ನನಗೆ ಭಯ ಇದೆ. ಎಲ್ಲಿ ಮದುವೆ ಆದ್ರೆ ಆ ಹುಡುಗ ಈ 3 ಜನರಿಂದ ನನ್ನ ದೂರ ಮಾಡಿ ಬಿಡ್ತಾರೆ ಅಂತ. ಹೀಗಾಗಿ ಮದುವೆಯನ್ನೂ ದೂರ ಮಾಡಿಕೊಳ್ಳುತ್ತಾ ಬಂದಿದ್ದೀನಿ ಅಂತ ಹೇಳಿದ್ದಾರೆ.