ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಜನ ಗಿಫ್ಟ್ ಕಳಿಸಿದ್ದಾರೆ. ಪ್ರತಿಯೊಬ್ಬರಿಗೂ ಗಿಫ್ಟ್ ಬಂದಿವೆ. ಅವರ ಆಟ ಮತ್ತು ಮನಸ್ಥಿತಿಯ ಮೇಲೇನೆ ಎಲ್ಲವೂ ಇಲ್ಲಿ ಗಿಫ್ಟ್ ರೂಪದಲ್ಲಿಯೇ ಬಂದಿದೆ.
ಐಶ್ವರ್ಯಗೆ ಒಳ್ಳೆ ಗಿಫ್ಟ್ ಬಂದಿದೆ. ಟೆಡ್ಡಿಬೇರ್ ಬಂದಿರೋದು ವಿಶೇಷ. ಜೊತೆಗೆ ಬಂದಿರೋ ಚೀಟಿಯಲ್ಲಿ ಒಳ್ಳೆ ವಿಷಯ ಕೂಡ ಇದೆ. ನೀವು ಒಬ್ಬರೇ ಅಂತ ತಿಳಿದುಕೊಳ್ಳಬೇಡಿ. ನಿಮ್ಮ ಜೊತೆಗೆ ನಾವು ಇದ್ದೇವೆ. ನಿಮ್ಮ ಬೆಳೆಸುತ್ತೇವೆ ಅನ್ನೋ ಅರ್ಥದಲ್ಲಿಯೇ ಹೇಳಿದ್ದಾರೆ.
ಇದರಿಂದ ತುಂಬಾನೆ ಖುಷಿಪಟ್ಟಿರೋ ಐಶ್ವರ್ಯ ಹೊಸ ಉಲ್ಲಾಸದಲ್ಲಿಯೇ ಇದ್ದಾರೆ. ಜನರ ಪ್ರೀತಿಯನ್ನ ಉಳಿಸಿಕೊಳ್ಳುತ್ತೇನೆ ಅನ್ನುವ ಅರ್ಥದಲ್ಲಿಯೇ ಕಿಚ್ಚನ ಮುಂದೆ ಹೇಳಿಕೊಂಡಿದ್ದಾರೆ. ಆದರೆ, ಕಿಚ್ಚ ಸುದೀಪ್ ಇವರೆಲ್ಲ ಮಾತು ಕೇಳಿ ಆದ್ಮೇಲೆ ಒಂದು ವಿಷಯ ಹೇಳಿದ್ದಾರೆ.
ನಿಜ, ಜನ ನಿಮ್ಮನ್ನ ಪ್ರೀತಿಯಿಂದಲೇ ಆಯ್ಕೆ ಮಾಡಿ ಕಳಿಸಿರುತ್ತಾರೆ. ಅವರ ಪ್ರೀತಿಗೆ ಐಶ್ವರ್ಯ ಅಷ್ಟೇ ಅಲ್ಲ. ಎಲ್ಲರೂ ಗೌರವ ಕೊಡಬೇಕಾಗುತ್ತದೆ. ಐಶ್ವರ್ಯಗೆ ಜನ ಇಷ್ಟೊಂದು ಪ್ರೀತಿ ತೋರಿಸಲು ಕಾರಣ ಕೂಡ ಇದೆ. ಆ ಕಾರಣ ಏನು ಅನ್ನೋದನ್ನು ಗೊತ್ತೇ ಇದೆ. ಐಶ್ವರ್ಯ ಲೈಫ್ನ ಟ್ರ್ಯಾಜಿಡಿಯನ್ನ ಗಮನದಲ್ಲಿಟ್ಟುಕೊಂಡು ಈ ಪ್ರೀತಿ ತೋರಿಸಿದ್ದಾರೆ ಅಂತಲೇ ಹೇಳಬಹುದು.
ಹೀಗೆ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಇರೋ ಸತ್ಯವನ್ನ ಕೂಡ ಹೇಳಿದ್ದಾರೆ. ಜನ ನಿಮ್ಮನ್ನ ಯಾಕೆ ಆಯ್ಕೆ ಮಾಡಿದ್ದಾರೆ ಅನ್ನೋದನ್ನ ಕೂಡ ಮತ್ತೆ ನೆನಪಿಸಿದ್ದಾರೆ. ಒಟ್ಟಾರೆ, ಮನೆ ಮಂದಿಗೆ ಬುದ್ಧಿ ಮಾತಿನ ಚೀಟಿ ಸಿಕ್ಕಿದೆ. ಸದಾ ಎಚ್ಚರಿಸೋ ಗಿಫ್ಟ್ ಕೂಡ ಬಂದಿವೆ ಅಂತಲೂ ಹೇಳಬಹುದು.