ಇಂದು ಬಿಗ್ ಬಾಸ್ ಸೀಸನ್ 11 ರ ಮೊದಲ ಕಿಚ್ಚನ ಪಂಚಾಯಿತಿ ನಡೆಯಲಿದೆ. ಕಿಚ್ಚ ಸುದೀಪ್ ಮೊದಲ ಪಂಚಾಯಿತಿಗೆ ಸಖತ್ ರಾಂಗ್ ಆಗಿರುವಂತಿದೆ. ಈ ಮುಂಚೆ ಲಾಯರ್ ಜಗದೀಶ್ ಅವರು ಬಿಗ್ ಬಾಸ್ಗೆ ಚಾಲೇಂಜ್ ಹಾಕಿದ್ದರು. ಈ ವಿಚಾರ ಇಟ್ಟುಕೊಂಡು ಸುದೀಪ್ ಅವರು ಖಡಕ್ ಸಂದೇಶದೊಂದಿಗೆ ಬಂದಿದ್ದಾರೆ.
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಕರ್ನಾಟಕಕ್ಕೆ ಉಪಯೋಗ ಏನು!? ಕೃಷ್ಣ ಬೈರೇಗೌಡ ಕಿಡಿ!
..ಬಿಗ್ ಬಾಸ್ ಒಂದು ಅದ್ಭುತವಾದ ಒಂದು ಶೋ. ಎಲ್ಲರೂ ಇಂಪ್ರೂವ್ ಮಾಡಿಕೊಳ್ಲುವಂತಹ ಶೋ. ಇಂಪ್ರೂವ್ ಮಾಡಿಕೊಳ್ಳೋಕೆ ನಿಮ್ಮ ಕೈಯಲ್ಲಿದೆ. ಆದರೆ ಹಾಳು ಮಾಡೋಕೆ ನಿಮ್ಮ ಅಪ್ಪನ ಆಣೆಗೂ ಸಾಧ್ಯವಿಲ್ಲ ಎಂದು ಕಿಚ್ಚ ಬೆಂಕಿಯಂತೆ ಮಾತು ಕೊಟ್ಟಿದ್ದಾರೆ.
ಕಿಚ್ಚನ ಲುಕ್ಗೆ ಅದೆಷ್ಟೋ ಫ್ಯಾನ್ಸ್ ಕಾಯುತ್ತ ಇರ್ತಾರೆ. ಇದೀಗ ಕಲರ್ಸ್ ವಾಹಿನಿ ಕಿಚ್ಚನ ಲುಕ್ ರಿವೀಲ್ ಮಾಡಿದೆ. ಖಡಕ್ ವಾರ್ನ್ ಮಾಡ್ಲಿಕ್ಕೆ ಮೊದಲ ಪಂಚಾಯ್ತಿಗೆ ಕೂಲ್ ಆಗಿ ಬಂದಿದ್ದಾರೆ ಕಿಚ್ಚ. ಮಾತ್ರವಲ್ಲ ಇದು ಹೆಬ್ಬುಲಿ ಗತ್ತು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ವರದಿಯ ಪ್ರಕಾರ ಕಿಚ್ಚ ಧರಿಸುವ ಕಾಸ್ಟ್ಯೂಮ್ ಲಕ್ಷಾಂತರ ರೂಪಾಯಿದ್ದು ಎಂದು ಹೇಳಲಾಗುತ್ತೆ. ಈ ವಾರ ಕೂಡ ಅತ್ಯಂತ ಕೂಲ್ ಆಗಿಯೇ ಬಂದಿದ್ದಾರೆ ಕಿಚ್ಚ. ಪ್ರತಿ ಸೀಸನ್ನಲ್ಲಿ ಪ್ರಮುಖ ಹೈಲೈಟ್ ಆಗೋದು ಕಿಚ್ಚನ ಹೊಸ ಹೇರ್ಸ್ಟೈಲ್ ಹಾಗೇ ಸ್ಟೈಲಿಶ್ ಉಡುಗೆ. ಈ ಬಾರಿ ಕೂಡ ಕಿಚ್ಚನ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದೀಗ ಕಲರ್ಸ್ ವಾಹಿನಿ ಸಾಕಷ್ಟು ಪ್ರೋಮೋ ಶೇರ್ ಮಾಡಿಕೊಂಡಿದೆ. ಇದೀಗ ಕಿಚ್ಚ ಅವರ ಒಂದೊಂದು ಪಂಚ್ ಮಾತುಗಳಿಗೂ ವೀಕ್ಷಕರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಿಚ್ಚ ಸುದೀಪ್ ಪಂಚಾಯ್ತಿ ಶುರು ಆಗುತ್ತಿದೆ. ರಾತ್ರಿ 9 ಗಂಟೆಗೇನೆ ಇದು ಶುರು ಆಗುತ್ತಿದೆ. ಈ ಒಂದು ಪಂಚಾಯ್ತಿಯಲ್ಲಿ ಏನೆಲ್ಲ ಇರುತ್ತದೆ ಅನ್ನೋ ಝಲಕ್ ಪ್ರೋಮೋದಲ್ಲಿಯೇ ರಿವೀಲ್ ಆಗುತ್ತಿದೆ
ಕಿಚ್ಚ ಸುದೀಪ್ ಮುಂದೆ ಲಾಯರ್ ಜಗದೀಶ್ ತಮ್ಮ ವರ್ತನೆಯನ್ನು ಮುಂದುವರಿಸದಿಂದಂತೆ ಪ್ರೋಮೋದಲ್ಲಿ ಕಂಡಿಲ್ಲ. ಕಿಚ್ಚ ಸುದೀಪ್ ವೀಕೆಂಡ್ ಎಪಿಸೋಡ್ನಲ್ಲಿ ಲಾಯರ್ ಜಗದೀಶ್ಗೆ ಅವರ ವರ್ತನೆ ಬಗ್ಗೆ ಮನವರಿಕೆ ಮಾಡಿಕೊಡಬಹುದು.
ಇನ್ನು ಈ ಸೀಸನ್ನಲ್ಲಿ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಮೊದಲ ಕ್ಯಾಪ್ಟನ್ ಎಂದೆನಿಸಿಕೊಂಡಿದ್ದಾರೆ ಹಂಸ. ಹಂಸ ಈ ವಾರ ಮುಂದಿನ ವಾರದ ನಾಮಿನೇಷನ್ನಿಂದ ಇಮ್ಯೂನಿಟಿ ಪಡೆದಿದ್ದಾರೆ. ಕ್ಯಾಪ್ಟನ್ ಮನಸ್ಸು ಮಾಡಿದರೆ ಸ್ವರ್ಗ ಅಥವಾ ನರಕ ನಿವಾಸಿಗಳನ್ನು ಅದಲು ಬದಲು ಮಾಡಬಹುದು. ಈ ವಿಶೇಷ ಅಧಿಕಾರ ಬಿಗ್ ಬಾಸ್ ನೀಡಿದೆ. ಬಿಗ್ ಬಾಸ್ ಕಾರ್ಯಕ್ರಮದ ಪ್ರೇಕ್ಷಕರು ವೀಕೆಂಡ್ ನಲ್ಲಿ ಬರುವ ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾಯ್ತಿರುತ್ತಾರೆ. ಅದರಲ್ಲೂ ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್, ದೊಡ್ಮನೆ ಸೇರಿದ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ಳೋದನ್ನು ನೋಡಲು ಕಾಯ್ತಿರುತ್ತಾರೆ. ಇದೀಗ ಸೀಸನ್ 11 ರ ಮೊದಲ ಕಿಚ್ಚನ ಪಂಚಾಯಿತಿ ನಡೆಯಲಿದೆ.