ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಧನರಾಜ್ ಆಚಾರ್ ಭಾವುಕ ಪೋಸ್ಟ್ ಮಾಡಿದ್ದಾರೆ. ಬಿಗ್ಬಾಸ್ನಿಂದ ಆಚೆ ಬರುತ್ತಿದ್ದಂತೆ ಧನರಾಜ್ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಇದೇ ಖುಷಿಯಲ್ಲಿದ್ದ ಧನರಾಜ್ ಆಚಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
Muda Scam: ಇಡಿಯವರ ಪತ್ರಿಕಾ ಪ್ರಕಟಣೆಗೂ ನನಗೂ ಸಂಬಂಧವಿಲ್ಲ: ಸಿದ್ದರಾಮಯ್ಯ!
ಈ ಪ್ರೀತಿಗಾಗಿ, ಅಭಿಮಾನಕ್ಕಾಗಿ ಕನಸು ಕಂಡವನು ನಾನು. ನನಸು ಮಾಡಿದಿರಿ ನೀವು. Big boss Season 11 ನನ್ನಂತಹ ಸಾಮಾನ್ಯನ ಪಾಲಿಗೆ ಮರೆಯಲಾಗದ ಅತ್ಯದ್ಭುತ ಅವಕಾಶ. ಕರ್ನಾಟಕದ ಯಾವುದೋ ಮೂಲೆಯಲ್ಲಿ ಇದ್ದ ನಾನಿಗ ಈ ವೇದಿಕೆ ದೊರೆತದ್ದು ಅದು ನಿಮ್ಮಿಂದ. ಅಂತಹ ದೊಡ್ಡ ವೇದಿಕೆಯಲ್ಲಿ ಎರಡು ವಾರಗಳನ್ನು ಕಳೆದರೂ ಅದು ಜನ್ಮಗಳ ಪುಣ್ಯ. ಅಂತದ್ದರಲ್ಲಿ ನನಗೆ ನೀವು ಬರೋಬ್ಬರಿ 110 ದಿನಗಳನ್ನು ಕಳೆಯುವ ಅವಕಾಶವನ್ನು ನೀಡಿದ್ದೀರಿ. ಅಷ್ಟು ದೊಡ್ಡ ಮನೆಯಲ್ಲಿ ನಾನು ಮಾಡಿದ ತಪ್ಪುಗಳನ್ನು ಕ್ಷಮಿಸಿದ್ದೀರಿ.
ನಾನು ಅತ್ತಾಗ ಹೆಗಲಾಗಿ ಜೊತೆಯಾಗಿದ್ದೀರಿ. ನನ್ನ ನಗುವಿನಲ್ಲಿ ನೀವು ಖುಷಿ ಕಂಡಿದ್ದೀರಿ ಅಂದು ಬೊಗಸೆಯಷ್ಟು ಪ್ರೀತಿಯನ್ನು ಬಯಸಿದವನು ನಾನು. ಇಂದು ಆಗಸದಷ್ಟು ವಿಶಾಲವಾದ ಪ್ರೀತಿ, ಬೆಂಬಲ, ಅಭಿಮಾನ ನಿಮ್ಮಿಂದ ದೊರೆತಿದೆ. ಸಹಸ್ರ ಸಹಸ್ರ ಜನ್ಮಗಳನ್ನು ಎತ್ತಿ ಬಂದರೂ ಇದನ್ನು ನಾನು ತೀರಿಸಲು ಅಸಾಧ್ಯ. ಮಾತುಗಳು ಬರದಾಗಿವೆ. ನುಡಿ ಗದ್ಗದಿತವಾಗುತಿದೆ.
ನೀವು ಕೊಟ್ಟ ಸಹಕಾರಕ್ಕೆ ಧನ್ಯವಾದ ತುಂಬಾ ಚಿಕ್ಕ ಮಾತು. ಆದರೆ ಅದನ್ನು ಬಿಟ್ಟು ನನ್ನಿಂದ ಏನೂ ಹೇಳಲು ಸಾಧ್ಯವಿಲ್ಲ. ನನ್ನನ್ನು ಪ್ರೀತಿಸಿ, ಬೆಂಬಲಿಸಿದ ಕರುನಾಡಿನ ಎಲ್ಲಾ ನನ್ನ ಮನೆಯವರಿಗೆ ನಿಮ್ಮ ಮನೆ ಮಗನಿಂದ ತುಂಬು ಹೃದಯದ ಅನಂತ ಅನಂತ ಧನ್ಯವಾಗಳು. ಮುಂದೆಯೂ ನಿಮ್ಮನ್ನು ನಗಿಸುವುದೇ ನನ್ನ ಕಾಯಕ.. ನಗುನಗುತಾ ಬಾಳೋಣ. ನಗುವನು ಹಂಚೋಣ ಎಂದು ಬರೆದುಕೊಂಡಿದ್ದಾರೆ.