ಈ ವಾರ ಸಂಕ್ರಾಂತಿ ಹಿನ್ನೆಲೆಯಲ್ಲಿ ಬಿಗ್ ಬಾಸ್ ನೀಡಿದ ಟ್ವಿಸ್ಟ್ನಿಂದ ಸ್ಪರ್ಧಿಗಳು ಫುಲ್ ಖುಷಿಯಾಗಿದ್ದಾರೆ. ಯಾಕೆಂದರೆ ಈ ವಾರ ಯಾವುದೇ ಎಲಿಮಿನೇಷನ್ ನಡೆಯದ ಕಾರಣ, ಮನೆಯಲ್ಲಿ ಸಂತು- ಪಂತು ಎಂದು ಕರೆಸಿಕೊಳ್ಳುವ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಸೇಫ್ ಆಗಿದ್ದಾರೆ.
ಈ ವಾರ ವಿನಯ್ ಗೌಡ, ತನಿಷಾ ಕುಪ್ಪಂಡ, ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ನಮ್ರತಾ ಗೌಡ ನಾಮಿನೇಟ್ ಆಗಿದ್ದರು. ಒಬ್ಬೊಬ್ಬರಾಗಿಯೇ ಎಲ್ಲರೂ ಸೇಫ್ ಆದರು. ಆದರೆ ಕೊನೆಗೆ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತು ಮಾತ್ರ ಉಳಿದುಕೊಂಡಿದ್ದರು. ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗುವುದು ಖಚಿತ ಎನ್ನಲಾಗಿತ್ತು. ಆದರೆ, ಇಬ್ಬರೂ ಸೇಫ್ ಆಗಿದ್ದಾರೆ.
ಬಿಗ್ ಬಾಸ್ ಸ್ಪರ್ಧೆಯ ಭಾರಿ ಟಫ್ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ (Varthur Santhosh) ಅವರು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಉಳಿಯಲಿದ್ದಾರೆಂದು ಬಹುತೇಕರು ಭಾವಿಸಿದ್ದರು. ಆದರೆ, ಈ ವಾರ ಅವರೇ ಮನೆಯಿಂದ ಹೊರ ಬೀಳಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಊಹೆ ಸುಳ್ಳಾಗಿದೆ.
ಇನ್ನು ಈಗಾಗಲೇ ಟಿಕೆಟ್ ಫಿನಾಲೆ ಗೆದ್ದಿರುವ ಸಂಗೀತಾ ಅವರು ಫೈನಲ್ಗೆ ಆಯ್ಕೆಯಾಗಿದ್ದಾರೆ. ಪ್ರತಾಪ್ ಕೂಡ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ.