ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಮೊಟ್ಟ ಮೊದಲ ಸ್ಪರ್ಧಿ ‘ಸತ್ಯ’ ಸೀರಿಯಲ್ ಖ್ಯಾತಿಯ ನಟಿ ಗೌತಮಿ ಜಾಧವ್.
ನಾನು ರಾಜ್ಯಕ್ಕೆ ಸೇವೆ ಮಾಡಬೇಕು ಅಂತ ದೊಡ್ಡ ಹೋರಾಟ ಆಗ್ತಿದೆ: DCM ಡಿಕೆಶಿ!
ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ -11 ಸ್ಪರ್ಧಿಗಳು ಯಾರು ಎನ್ನುವುದರ ಕುತೂಹಲಕ್ಕೆ ತೆರೆ ಬಿದ್ದಿದೆ. ʼರಾಜಾ ರಾಣಿʼ ಗ್ರ್ಯಾಂಡ್ ಪಿನಾಲೆ ವೇಳೆ ಬಿಗ್ ಬಾಸ್ ಮನೆಗೆ ಈ ಬಾರಿ ಯಾರೆಲ್ಲಾ ಹೋಗಲಿದ್ದಾರೆ ಎನ್ನುವವರ ಪಟ್ಟಿಯನ್ನು ರಿವೀಲ್ ಮಾಡಲಾಗಿದೆ.
ನಾಳೆ ಬಿಗ್ ಬಾಸ್ ಗ್ರ್ಯಾಂಡ್ ಪ್ರಿಮಿಯರ್ ಶುರುವಾಗಲಿದೆ. ಈ ಬಾರಿ ಸ್ವರ್ಗ- ನರಕ ಎನ್ನುವ ಕಾನ್ಸೆಪ್ಟ್ ನೊಂದಿಗೆ ಬಿಗ್ ಬಾಸ್ ಬರಲಿದೆ. ಆ ನಿಟ್ಟಿನಲ್ಲಿ ಕೆಲ ಸ್ಪರ್ಧಿಗಳ ಹೆಸರನ್ನು ಮೊದಲೇ ರಿವೀಲ್ ಮಾಡಿ ಅವರನ್ನು ಸ್ವರ್ಗಕ್ಕೆ ಅಥವಾ ನರಕಕ್ಕೆ ಕಳುಹಿಸಬೇಕೇ ಎನ್ನುವ ನಿರ್ಧಾರವನ್ನು ಪ್ರೇಕ್ಷಕರಿಗೆ ಬಿಡಲಾಗಿದೆ.
ಮೊದಲ ಸ್ಪರ್ಧಿ ಗೌತಮಿ ಜಾಧವ್: ಸ್ಟೈಲಿಸ್ಟ್ ಆಗಿ ಬೈಕ್ ನಿಂದ ಇಳಿದು ಫೀಲ್ಡ್ ನನ್ನದೇ, ಶೀಲ್ಡ್ ನನ್ನದೇ ಎಂದು ಬಿಗ್ ಬಾಸ್ ಸ್ಪರ್ಧಿ ʼಸತ್ಯʼ ಧಾರಾವಾಹಿ ಖ್ಯಾತಿ ಗೌತಮಿ ಅವರನ್ನು ಪರಿಚಯಿಸಲಾಗಿದೆ.