ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ನೂರಾರು, ಸಾವಿರಾರು ರೂಪಾಯಿ ಬಿಲ್ ಹಾಕಿ ವಸೂಲಿ ಮಾಡುವ ಜಲಮಂಡಳಿ,ಆರ್ಥಿಕ ನಷ್ಟ ಅಂತಿದೆ. ಆದ್ರೆ ಅಲ್ಲಿನ ಕೆಲ ಭ್ರಷ್ಟ ಅಧಿಕಾರಿಗಳು ಹಾಗೂ ಕೆಲ ಕಂಟ್ರ್ಯಾಕ್ಟರ್ ಗಳು ಸೇರಿಕೊಂಡು ಮಾಡ್ತಿರುವ ಲಕ್ಷ ಲಕ್ಷದ ರೂಪಾಯಿ ಗೋಲ್ಮಾಲ್ ಯಾರಿಗೂ ಗೊತ್ತೇ ಆಗ್ತಿಲ್ಲವಂತೆ. ನೀರು ಹಾಗೂ ಒಳಚರಂಡಿ ಸಂಪರ್ಕ ಹೆಸರಲ್ಲಿ ಹೇಗೆ ವಂಚನೆ ಮಾಡ್ತಾರೆ ಅನ್ನೋದನ್ನ ಪ್ರಜಾ ಟಿವಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದೆ ನೋಡಿ…..
.
ಯಸ್..ಬೆಂಗಳೂರಿಗೆ ನೀರು ಸರಬರಾಜು ಮಾಡುವ ಜಲಮಂಡಳಿಯಲ್ಲಿ ನಡೆಯುವ ಕರ್ಮಕಾಂಡಗಳು ಒಂದೆರೆಡಲ್ಲ. ಇಲ್ಲಿ ಎಂಜನೀಯರ್ಸ್ ಅಂಡ್ ಕೆಲ ಕಂಟ್ರ್ಯಾಕ್ಟರ್ ಗಳು ಸೇರಿಕೊಂಡು ಮಾಡುವ ಅವ್ಯವಹಾರಗಳನ್ನ ನೋಡಿದ್ರೆ ಅಬ್ಬಾಬ್ಬ ಅನ್ಲೆಬೇಕು. ಯಾಕೆಂದ್ರೆ ಮಂಡಳಿಗೆ ಎಂಜನೀಯರ್ಸ್ ಮಾಡುವ ಧೋಖಾ ಮತ್ತೆ ಬಟಾಬಯಲಾಗಿದೆ. ಮಂಡಳಿಗೆ ಆರ್ಥಿಕವಾಗಿ ಆದಾಯ ಬರುವುದೇ ಪ್ರೋರೇಟಾ,ನೀರು ಹಾಗೂ ಒಳಚರಂಡಿ ಸಂಪರ್ಕದ ಶುಲ್ಕದಿಂದ. 30*40 ಅಳತೆ ಮೇಲ್ಪಟ್ಟ ಮನೆಗಳಿಗೆ ಅಭಿವೃದ್ಧಿ ಶುಲ್ಕ ಅಂತಾ ವಾಟರ್ ಕನೆಕ್ಷನ್ ವೇಳೆ ಲಕ್ಷಾಂತರ ರೂಪಾಯಿ ಕಟ್ಟಬೇಕಾಗುತ್ತೆ. ಒಂದು ಅಡಿಗೆ 300 ರಿಂದ 400 ರೂಪಾಯಿವರೆಗೂ ಕಟ್ಟಬೇಕು. ಆದ್ರೆ ಜಲಮಂಡಳಿ ಕೆಲ ಭ್ರಷ್ಟ ಅಧಿಕಾರಿಗಳು ಸೇರಿಕೊಂಡು ಫ್ಲಂಬರ್ಸ್, ಗುತ್ತಿಗೆದಾರರ ಜೊತೆಗೂಡಿ ರಿಜಿಸ್ಟ್ರೇಶನ್ ಕಾಫಿಗಳನ್ನೇ ತಿದ್ದುಪಡಿ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸುತ್ತಿದ್ದಾರೆ.
ಹೌದು.. ಲಕ್ಷ ಲಕ್ಷ ಕಟ್ಟಿಸಿಕೊಳ್ಳುವ ಜಾಗದಲ್ಲೇ ಕೇವಲ ಸಾವಿರಾರು ರೂಪಾಯಿಯನ್ನಷ್ಟೆ ಕಟ್ಟಿಸಿಕೊಂಡು ಮಂಡಳಿಗೆ ವಂಚಿಸುತ್ತಿದ್ದಾರೆ. ಇದರ ದಾಖಲೆಗಳು ಲಭ್ಯವಾಗಿವೆ. ಮನೆ ರಿಜಿಸ್ಟ್ರೇಶನ್ ದಾಖಲೆಗಳನ್ನ ತಿದ್ದುಪಡಿ ಮಾಡಿ, ಮಂಡಳಿಗೆ ವಂಚಿಸಿರೋದು ಇದರಿಂದ ಗೊತ್ತಾಗ್ತಿದೆ.ಜಲಮಂಡಳಿ ದಕ್ಷಿಣ – ಪೂರ್ವ 4 ರ ವಲಯದಲ್ಲಿ ಎಇಇ ಅಂಡ್ ಟೀಂ 40 ಫ್ಲ್ಯಾಟ್ ವೊಂದಕ್ಕೆ ನೀರು ಹಾಗೂ ಒಳಚರಂಡಿ ಶುಲ್ಕ 7 ಲಕ್ಷ 93 ಸಾವಿರ ಕಟ್ಟಿಸಿಕೊಳ್ಳಬೇಕಿತ್ತು. ಆದ್ರೆ ಕೇವಲ 31 ಸಾವಿರ ಕಟ್ಟಿಸಿಕೊಂಡು ಮಂಡಳಿಗೆ ವಂಚನೆ ಮಾಡಿದ್ದಾರೆ. ಆದ್ರೆ ಇದು ಸ್ಯಾಂಪಲ್ ಅಷ್ಟೇ ಇದೇರೀತಿ ದಾಖಲೆಗಳನ್ನ ತಿದ್ದುಪಡಿ ಕೋಟ್ಯಾಂತರ ರೂಪಾಯಿ ವಂಚಿಸುತ್ತಿದ್ದಾರೆ, ಇದನ್ನ ಚೇರಮನ್ ಕೂಡಲೇ ಪತ್ತೆಹಚ್ಚಿ ತಪ್ಪಿತಸ್ಥರ ಮೇಲೆ ಕ್ರಮಜರುಗಿಸಬೇಕು ಅನ್ನೋ ಒತ್ತಾಯ ಕೂಡ ಕೇಳಿಬಂದಿದೆ. ಇನ್ನು ಈ ರೀತಿ ಮನೆ ಮಾಲೀಕರಿಗೂ ಕೂಡ ಗೊತ್ತಾಗದ ಹಾಗೇ ಫ್ಲಂಬರ್ಸ್ ಹಾಗೂ ಎಂಜನೀಯರ್ಸ್ ಸೇರಿಕೊಂಡು ಡೀಲ್ ನಡೆಸ್ತಿದ್ದಾರಂತೆ. ಈ ಬಗ್ಗೆ ದೂರು ಕೂಡ ನೀಡಲಾಗಿದೆ. ಆಗಿದ್ರು ಮೇಲಿನಧಿಕಾರಿಗಳು ಹಾಗೂ ಮುಖ್ಯ ಎಂಜನೀಯರ್ ಗಳು ಕಣ್ಮುಚ್ಚಿಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೂರು ದಾಖಲು ತಿಂಗಳುಗಳಾದ್ರು ಪ್ರಕರಣ ಮುಚ್ಚಿಹಾಕೋ ಪ್ರಯತ್ನ ಮಾಡ್ತಿದ್ದಾರಂತೆ. ಆದ್ರೆ ಇದನ್ನ ತನಿಖೆ ಮಾಡಿ ಈ ಜಾಲವನ್ನ ಪತ್ತೆಹಚ್ಚಿ ಮಂಡಳಿಗೆ ಕೋಟ್ಯಂರತರ ರೂಪಾಯಿ ಉಳಿಸಬೇಕಾಗಿದೆ ಅನ್ನೋದು ಸಾರ್ವಜನಿಕರ ಮಾತು. ಈ ಬಗ್ಗೆ ಜಲಮಂಡಳಿ ಮುಖ್ಯ ಅಭಿಯಂತರನ್ನ ಕೇಳಿದರೆ ಕೇಳಿದ್ರೆ ಈ ವಂಚನೆಯ ಜಾಲವನ್ನ ಆದಷ್ಟುಬೇಗ ಪತ್ತೆ ಹಚ್ಚುತ್ತೇವೆ ಅಂತಾರೆ.
ಒಟ್ನಲ್ಲಿ ಜಲಮಂಡಳಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದರೇ ಇನ್ನು ಆದಾಯ ಎಲ್ಲಿಂದ ಬರುತ್ತದೆ. ಹೀಗಾಗಿ ಇನ್ನಾದ್ರು ಇಂಥಹ ನಕಲಿ ತಂಡಗಳನ್ನ ಬೇಧಿಸಿ, ಮಂಡಳಿಯನ್ನ ಉಳಿಸಬೇಕಿದೆ.