ಪ್ರವಾಸಿ ಬಾಂಗ್ಲಾದೇಶ ಎದುರು ಟೀಮ್ ಇಮಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದು, ಚೆನ್ನೈನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಜಯ ದಾಖಲಿಸಿತಾದರೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವೈಫಲ್ಯ ತಂಡಕ್ಕೆ ಕೊಂಚ ಕಳವಳ ತಂದೊಡ್ಡಿದೆ. ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಬಸಿತ್ ಅಲಿ, ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ವೈಫಲ್ಯಕ್ಕೆ ಪ್ರಮುಖ ಕಾರಣ ಏನೆಂಬುದನ್ನು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಶಾಕ್: 1.78 ಲಕ್ಷ ಮಹಿಳೆಯರಿಗೆ ಇನ್ಮುಂದೆ ಹಣ ಸಿಗಲ್ಲ!
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಮೂಡಿಬಂದಿದ್ದು ಕೇವಲ 23 ರನ್ ಮಾತ್ರ. ಮೊದಲ ಇನಿಂಗ್ಸ್ನಲ್ಲಿ 6 ರನ್ಗೆ ವಿಕೆಟ್ ಒಪ್ಪಿಸಿದ ವಿರಾಟ್, ಎರಡನೇ ಇನಿಂಗ್ಸ್ನಲ್ಲಿ 17 ರನ್ ಕಲೆಹಾಕಿ ಪೆವಿಲಿಯನ್ ಸೇರಿದ್ದರು. ಆದರೆ, ಕೊಹ್ಲಿ ಅನುಭವಿಸಿದ ಈ ವೈಫಲ್ಯದ ಬಗ್ಗೆ ಟೀಮ್ ಇಂಡಿಯಾ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಬಸಿತ್ ಅಲಿ ಅಭಿಪ್ರಾಯ ಪಟ್ಟಿದ್ದಾರೆ. ವಿರಾಟ್ ಕೊಹ್ಲಿ ಅವರಂತಹ ದಿಗ್ಗಜ ಬ್ಯಾಟರ್ಗಳು ಬಾಂಗ್ಲಾದೇಶ ಅಂತಹ ದುರ್ಬಲ ತಂಡಗಳ ಎದುರು ವೈಫಲ್ಯ ಅನುಭವಿಸುವುದು ಸಹಜ.
“ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಖಂಡಿತಾ ರನ್ ಸ್ಕೋರ್ ಮಾಡುತ್ತಾರೆ. ಆಸ್ಟ್ರೇಲಿಯಾದ ಫಾಸ್ಟ್ ಅಂಡ್ ಬೌನ್ಸಿ ಪಿಚ್ಗಳು ಅವರಿಗೆ ಇಷ್ಟ. ಅವರಂತಹ ದೊಡ್ಡ ಕ್ರಿಕೆಟರ್ಸ್ ಬಾಂಗ್ಲಾ ಅಂತಹ ದುರ್ಬಲ ತಂಡಗಳ ಎದುರು ಏಕಾಗ್ರತೆ ಕಳೆದುಕೊಳ್ಳುವುದು ಸಹಜ. ಆದರೆ, ಖಂಡಿತಾ ಬಲಿಷ್ಠ ತಂಡಗಳ ಎದುರು ಅವರು ಸ್ಕೋರ್ ಮಾಡುತ್ತಾರೆ,” ಎಂದು ಬಸಿತ್ ಅಲಿ ವಿವರಿಸಿದ್ದಾರೆ.