ವಿಜಯಪುರ:- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಕುಟುಂಬ ಜೊತೆ ನಗರದ ಎಸ್ ಎಸ್ ಶಾಲೆ ಮತಗಟ್ಟೆಗೆ ಬಂದು ಸಾಲಲ್ಲಿ ನಿಂತಿರುವುದ್ದಾರೆ.
Kalaburgi: ಪತ್ನಿ ಸಮೇತ ಆಗಮಿಸಿ ಓಟ್ ಮಾಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ..
ಬಹುತೇಕ ಭಾಗಗಳಲ್ಲಿ ಗಣ್ಯರು ತಮ್ಮ ‘ಗಣ್ಯತನ’ ಪ್ರದರ್ಶಿಸದೆ ಜನಸಾಮಾನ್ಯರಂತೆ ಸಾಲಲ್ಲಿ ನಿಂತು ತಮ್ಮ ಸರದಿ ಬಂದಾಗ ಮತ ಚಲಾಯಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಯತ್ನಾಳ್ ಹಾಗೂ ಅವರ ಪತ್ನಿ ಮತ ಚಲಾಯಿಸಿದ ಬಳಿಕ ತಮ್ಮ ಬೆರಳಿಗೆ ಹಚ್ಚಿದ ಇಂಕ್ ಮಾರ್ಕ್ ಅನ್ನು ಮಾಧ್ಯಮದ ಕೆಮೆರಾಗಳಿಗೆ ತೋರಿಸಿದರು.
ಯಾರೋ ಒಬ್ಬ ಪತ್ರಕರ್ತರು, ಸಾರ್ ಇದು ಪ್ರಚಾರ ಅನಿಸಲ್ವಾ? ಅಂತ ನಗೆಯಾಡಿದರು. ಅದಕ್ಕೆ ಶಾಸಕರು ಗಂಭೀರವಾಗಿ, ವೋಟು ಹಾಕಿದ್ದನ್ನು ತೋರಿಸುತ್ತಿದ್ದೇನೆ, ಅಷ್ಟೇ, ಎಂದು ಹೇಳಿದ್ದಾರೆ.