ಬಳ್ಳಾರಿ: ರೇಣುಕಾಸ್ವಾಮಿ ಕೇಸ್ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ಗೆ ಕೊನೆಗೂ ಮಧ್ಯಂತರ ಜಾಮೀನು ಸಿಕ್ಕಿದೆ. ಹೈಕೋರ್ಟ್ ಮೆಡಿಕಲ್ ವರದಿ ಆಧಾರದ ಮೇಲೆ ಚಿಕಿತ್ಸೆ ನೀಡಲು ಮಧ್ಯಂತರ ಬೇಲ್ ಮಂಜೂರು ಮಾಡಿದೆ. 6 ವಾರಗಳ ಕಾಲ ಬೆನ್ನು ನೋವಿನ ಚಿಕಿತ್ಸೆ ಪಡೆಯಲು ಕೋರ್ಟ್ ಅನುಮತಿ ನೀಡಿದೆ.
ಬೇಲ್ ಸಿಕ್ಕಿದ್ದು ಅವರಿಗೆ ನೀಡಿರುವಷ್ಟೇ ಸಂತೋಷವನ್ನು ಅವರ ಅಭಿಮಾನಿಗಳಿಗೂ ನೀಡಿದೆ. ನಗರದ ಸೆಂಟ್ರಲ್ ಜೈಲು ಮುಂದೆ ನೆರೆದಿರುವ ಇವರೆಲ್ಲ ನಟನ ಅಭಿಮಾನಿಗಳು. ದರ್ಶನ್ ಹೊರಬರುವುದನ್ನೇ ಕಾಯುತ್ತಾ ನಿಂತಿರುವ ಇವರು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದಾರೆ.
ಪಿಂಚಣಿದಾರರಿಗೆ ಗುಡ್ ನ್ಯೂಸ್: ಇನ್ನುಂದೆ ಮನೆಯಿಂದಲೇ “ಡಿಜಿಟಲ್ ಜೀವನ ಪ್ರಮಾಣ ಪತ್ರ” ಪಡೆಯಿರಿ!
ಮುಂಜಾಗ್ರತೆಯ ಕ್ರಮವಾಗಿ ಪೊಲೀಸರು ಜೈಲು ಮುಂದಿನ ರಸ್ತೆಯನ್ನು ಬ್ಯಾರಿಕೇಡ್ ಗಳಿಂದ ಬ್ಲಾಕ್ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17ಆರೋಪಿಗಳು. ದರ್ಶನ್ ಅರೋಪಿ ನಂಬರ್ 2 ಆಗಿದ್ದರೆ ಅವರ ಗೆಳತಿ ಪವಿತ್ರಾ ಗೌಡ ಆರೋಪಿ ನಂಬರ್ ವನ್ ಆಗಿದ್ದಾರೆ.