ಬರೋಡಾ ಮತ್ತು ಸಿಕ್ಕಿಂ ತಂಡಗಳ ನಡುವಿನ ಪಂದ್ಯದಲ್ಲಿ ಬರೋಡಾ ತಂಡ ವಿಶ್ವದಾಖಲೆ ಯೊಂದಿಗೆ ಇತಿಹಾಸ ಸೃಷ್ಟಿಸಿದೆ. ಹೌದು ಇಂದೋರ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೃನಾಲ್ ಪಾಂಡ್ಯ ನಾಯಕತ್ವದ ಬರೋಡಾ ತಂಡ 20 ಓವರ್ನಲ್ಲಿ ಬರೋಬ್ಬರಿ 349 ರನ್ ಸಿಡಿಸಿ ವಿಶ್ವ ದಾಖಲೆ ಬರೆದಿದೆ.
ಆರಂಭಿಕರಾಗಿ ಕಣಕ್ಕಿಳಿದ ಬರೋಡಾದ ಶಾಶ್ವತ್ ರಾವತ್ ಹಾಗೂ ಅಭಿಮನ್ಯು ಸಿಂಗ್ 92 ರನ್ ಗಳ ಜೊತೆಯಾಟ ನೀಡಿ ಸ್ಫೋಟಕ ಆರಂಭ ನೀಡಿದರು. ಇದರಲ್ಲಿ ಅಭಿಮನ್ಯು 17 ಎಸೆತಗಳಲ್ಲಿ 53 ರನ್ ಬಾರಿಸಿದ್ರೆ, ಶಾಶ್ವತ್ 16 ಎಸೆತಗಳಲ್ಲಿ 43 ರನ್ ಸಿಡಿಸಿದರು.
ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ..! ಶ್ರೀಮಂತನು ಕೂಡ ಬಡವನಾಗುತ್ತಾನೆ
ಇವರಿಬ್ಬರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಕ್ರೀಗಿಳಿದ ಭಾನು ಪಾನಿಯಾ ಭರ್ಜರಿ ಸಿಕ್ಟರ್ ಬೌಂಡರಿಗಳ ಮಳೆ ಸುರಿಸಿದರು. ತಾನು ಎದುರಿಸಿದ 51 ಎಸೆಯಗಳಲ್ಲಿ 15 ಭರ್ಜರಿ ಸಿಕ್ಸರ್, 5 ಬೌಂಡರಿ ಸೇರಿ 262.74 ಸ್ಟ್ರೈಕ್ರೇಟ್ನೊಂದಿಗೆ ಅಜೇಯ 134 ರನ್ ಚಚ್ಚಿದರು. ಇದರೊಂದಿಗೆ ಜೊತೆಯಾದ ಶಿವಾಲಿಕ್ ಶರ್ಮಾ 17 ಎಸೆತಗಳಲ್ಲಿ 6 ಸಿಕ್ಸರ್ ಗಳನ್ನು ಬಾರಿಸಿ 55 ರನ್ ಗಳಿಸಿದರು.
ಇನ್ನಿಂಗ್ಸ್ನ ಕೆಲ ಓವರ್ ಬಾಕಿ ಇರುವಾಗ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ಸೋಲಂಕಿ 16 ಎಸೆತಗಳಲ್ಲಿ 6 ಸಿಕ್ಸರ್ಗಳೊಂದಿಗೆ 50 ರನ್ ಬಾರಿಸಿದರು. ಒಟ್ಟಾರೆಯಾಗಿ ಬರೋಡಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 349 ರನ್ ಪೇರಿಸಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ್ದ ಸಿಕ್ಕಿಂ ತಂಡ 20 ಓವರ್ಗಳಲ್ಲಿ ಕೇವಲ 86 ರನ್ಗಳಿಸಿ 7 ವಿಕೆಟ್ ಕಳೆದುಕೊಂಡು 263 ರನ್ಗಳ ಅಂತರದಿಂದ ಸೋಲೊಪ್ಪಿಕೊಂಡಿತು.