ಮಂಡ್ಯ: ಯುಗಾದಿ ಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಯುವಕನನ್ನು ಹತ್ಯೆ ಮಾಡಲಾದ ಘಟನೆ ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ನಡೆದಿದೆ. ಹಳೆಯ ದ್ವೇಷದ ಹಿನ್ನೆಲೆ ಕೃತ್ಯವೆಸಗಿದ್ದು, ಅಕ್ಷಯ್( 24 ) ಹತ್ಯೆಯಾದ ಯುವಕನಾಗಿದ್ದಾನೆ. ಯುಗಾದಿ ಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಯುವಕನನ್ನು ಫೋನ್ ಮಾಡಿ ಕರೆಸಿಕೊಳ್ಳಲಾಗಿದೆ.
ಕಾಫಿ ಪ್ರಿಯರಿಗೆ ಗುಡ್ ನ್ಯೂಸ್..! ಪ್ರತಿದಿನ 3 ಕಪ್ ಫಿಲ್ಟರ್ ಕಾಫಿ ಕುಡಿದರೆ ಡಯಾಬಿಟಿಸ್ ಕಂಟ್ರೋಲ್
ನಂತರ ಮಾರಾಕಾಸ್ತ್ರದಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.