ಬಳ್ಳಾರಿ:- ಇಡೀ ಕರ್ನಾಟಕ ಜನತೆಯನ್ನೇ ಬೆಚ್ಚಿ ಬೀಳಿಸಿದ ಬಾಣಂತಿಯರ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ: ಆರೋಗ್ಯ ಸಚಿವರು ವಿಫಲ ಎಂದ ಜೋಶಿ!
ಘಟನೆ ನಡೆದು 25 ದಿನಗಳ ಬಳಿಕ ಬಳ್ಳಾರಿಗೆ ಇಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದಾರೆ. ಐವಿ ಫ್ಲ್ಯೂಯೆಡ್ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್ಗೆ ಹೋಗುತ್ತಿದ್ದೇವೆ. ಬಾಣಂತಿಯರ ಸರಣಿ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಆಗಲಿದೆ ಎಂದು ಹೇಳಿದ್ದಾರೆ.
ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಣಂತಿಯರ ದಿಢೀರ್ ಸಾವಾಗಿದೆ, ವೈದ್ಯರ ಮೂಲಕ ವರದಿ ಕೇಳಿದ್ವಿ. ಐವಿ ಫ್ಲ್ಯೂಯೆಡ್ ಬಗ್ಗೆ ಅನುಮಾನವಿತ್ತು, ಲ್ಯಾಬ್ನಲ್ಲಿ ಟೆಸ್ಟ್ ಮಾಡಲಾಗಿತ್ತು. ಲ್ಯಾಬ್ನಲ್ಲಿ ಟೆಸ್ಟ್ ಬಳಿಕ ಐವಿ ಬಳಕೆ ನಿಷೇಧ ಮಾಡಲಾಗಿತ್ತು ಎಂದಿದ್ದಾರೆ.
ಐವಿ ಫ್ಲ್ಯೂಯೆಡ್ ಸರಿಯಿದೆ ಅಂತಾ ಕೇಂದ್ರ ಲ್ಯಾಬ್ ರಿಪೋರ್ಟ್ ನೀಡಿದೆ. ಐವಿ ಫ್ಲ್ಯೂಯೆಡ್ ಬಗ್ಗೆ ನಮಗೂ ಹಿಂಜರಿಕೆಯಿತ್ತು, ಈ ಬಗ್ಗೆ ಸಂಶಯವಿದೆ. ಈ ಪ್ರಕರಣ ಬಂದ ತಕ್ಷಣ ಎಲ್ಲಾ ಆಸ್ಪತ್ರೆಯಲ್ಲಿ ಬಳಕೆ ಸ್ಥಗಿತಗೊಳಿಸಿದ್ದೇವೆ. 327 ಬಾಣಂತಿಯರ ಸಾವು ಆಡಿಟ್ ಆಗಲಿದೆ, ಸತ್ಯ ಗೊತ್ತಾಗಬೇಕಿದೆ.
ಸದನದಲ್ಲಿ ಈ ವಿಚಾರ ಚರ್ಚೆ ಮಾಡುತ್ತೇವೆ. ಸಾವುಗಳ ತಡೆಗೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ನೀವು ಪ್ರತಿಭಟನೆ ಹಿಂಪಡೆಯಬೇಕು. ಪರಿಹಾರ ವಿಚಾರವಾಗಿ ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ