ಕಲಬುರಗಿ: ಭೀಕರ ಬರಗಾಲ ಎದುರಿಸುತ್ತಿರುವ ಬಿಸಿಲೂರು ಕಲಬುರಗಿ ರೈತರಿಗೆ ಇದೀಗ ಬ್ಯಾಂಕ್ ನೋಟೀಸ್ ನೀಡಿದ್ದು ಸಾಲ ಮರುಪಾವತಿ ಮಾಡುವಂತೆ ಸೂಚಿಸಿದೆ.. ಚಿಂಚೋಳಿ ತಾಲೂಕಿನ ರಟಕಲ್ ಸುತ್ತಮುತ್ತಲಿನ ರೈತರಿಗೆ SBI ಮತ್ತು ಗ್ರಾಮೀಣ ಬ್ಯಾಂಕುಗಳು ನೀಡಿರುವ ನೋಟೀಸ್ ಗೆ ಅನ್ನದಾತರು ಆತಂಕಗೊಂಡಿದ್ದಾರೆ.
ಈಗಾಗಲೇ ನೀವು ಪಡೆದಿರುವ ಸಾಲಕ್ಕೆ ಬಡ್ಡಿ ಹೆಚ್ಚಾಗಿದೆ ಹೀಗಾಗಿ ಒನ್ ಟೈಂ ಸೆಟ್ಲಮೆಂಟ್ ಮಾಡೋಣ ಸಾಲ ಪಾವತಿಸಲು ಬನ್ನಿ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ..ಈ ಬಗ್ಗೆ ಆಕ್ರೋಶ ಹೊರಹಾಕಿರುವ ಅನ್ನದಾತರು ಸಾಲ ಕಟ್ತೇವೆ ಆದ್ರೆ ಈಗ ಆಗಲ್ಲ ಏನ್ ಮಾಡ್ತೀರೋ ಮಾಡ್ಕಳ್ಳಿ ಅಂತ ಕಡ್ಡಿ ಮುರದಂಗೆ ಹೇಳಿದ್ದಾರೆ.